ಚಿತ್ರದುರ್ಗ:
ಕಳೆದ ಆರು ದಿನಗಳಿಂದ ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ 89 ನೇ ಮಹಾಶಿವರಾತ್ರಿ ಮಹೋತ್ಸವ ಶಿವಲಿಂಗಾನಂದ ಮಹಾಸ್ವಾಮಿಗಳ ಶಿವಮಹಿಮ್ನಾ ಸ್ತೋತ್ರ ವಿಭೂತಿ ಸ್ನಾನ ಕೌದಿಪೂಜೆಯೊಂದಿಗೆ ಮಂಗಳವಾರ ಮುಕ್ತಾಯಗೊಂಡಿತು.ಮಹಾಶಿವರಾತ್ರಿ ಮಹೋತ್ಸವದ ಕೊನೆಯ ದಿನದಂದು ಸಂಪ್ರದಾಯದಂತೆ ಕೌದಿ ಬಟ್ಟೆಯನ್ನು ತೊಟ್ಟು ಕೊರಳಲ್ಲಿ ರುದ್ರಾಕ್ಷಿ, ತಂಗಟೆ ಹೂವು ಧರಿಸಿ ಕೈಯಲ್ಲಿ ಕಮಂಡಲ ಹಿಡಿದ ಶಿವಲಿಂಗಾನಂದಮಹಾಸ್ವಾಮಿಗಳು ಆಶ್ರಮವನ್ನು ಮೂರು ಬಾರಿ ಸುತ್ತಿದರು. ನೂರಾರು ಭಕ್ತರು ಈ ಸಂದರ್ಭದಲ್ಲಿ ಸ್ವಾಮಿಯ ಕಾಲಿಗೆ ಎರಗಿ ಆಶೀರ್ವಾದ ಪಡೆಯುತ್ತಿದ್ದರು.
ಡೊಳ್ಳು, ತಮಟೆ, ಉರುಮೆ ವಾದ್ಯ ಸದ್ದಿನ ಜೊತೆ ಭಜನಾ ತಂಡದವರು ಭಜನೆಗಳನ್ನು ಹಾಡುತ್ತಿದ್ದುದು ಕೌದಿಪೂಜೆಗೆ ಕಳೆಕಟ್ಟಿದಂತಿತ್ತು. ವಿ.ಎಲ್.ಪ್ರಶಾಂತ್, ವಿ.ಎಲ್.ಪ್ರವೀಣ್, ನಾಗರಾಜ್‍ಸಂಗಂ, ಜಿತೇಂದ್ರ, ಓಂಕಾರ್, ನಿರಂಜನಮೂರ್ತಿ, ಜಿಲ್ಲಾ ಜೆಡಿಎಸ್.ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ಪರುಷೋತ್ತಮನಾಯಕ, ಮಂಜುನಾಥಗುಪ್ತ ಸೇರಿದಂತೆ ನೂರಾರು ಭಕ್ತರು ಕೌದಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
