ಹಿರಿಯೂರು:
ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಜನ್ಮದಿನದ ಪ್ರಯುಕ್ತ ಜೆಡಿಎಸ್ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಯುವಪ್ರಧಾನ ಕಾರ್ಯದರ್ಶಿ ಎ.ಪಾಂಡುರಂಗ ಮಾತನಾಡಿ, ಈ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಬಡವರ ದೀನದಲಿತರ ಆಶಾಕಿರಣ. ರಾಜ್ಯದ ಅಭಿವೃದಿಗಾಗಿ ಅನೇಕ ಹೊಸಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಈ ರಾಜ್ಯವನ್ನು ಅಭಿವೃದ್ದಿಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸೈಯದ್ ಸಲಾವುದ್ದೀನ್, ಕಂದೀಕೆರೆರಂಗನಾಥ್, ರವಿಶಂಕರ್, ಸೋಡಾರಹಮತ್, ಸಾಧಿಕ್, ಜಗದೀಶ್, ಸೈಯದ್ ರಹಮಾನ್, ಘಾಟ್‍ರವಿ, ಜಯಕುಮಾರ್, ರವಿಕುಮಾರ್, ಆರೀಫುಲ್ಲಾ, ನಯಾಜ್, ಅಸ್ಲಾಂ, ಏಜಾಸ್, ಕರ್ಣಕುಮಾರ್, ಅವಿನಾಶ್, ಮಣಿಕಂಠ, ಇತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ