ತಮ್ಮ ರೂಲ್ಸ್ ತಾವೇ ಬ್ರೇಕ್ ಮಾಡಿದ ಸಿಎಂ…!

ಬೆಳಗಾವಿ

      ಮಾರಣಾಂತಿಕ ಕೊರೋನಾ ವೈರಸ್ ಕುರಿತ ಸರ್ಕಾರದ ನಿರ್ದೇಶನ ಉಲ್ಲಂಘಿಸಿ ಮೇಲ್ಮನೆಯ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ವಿವಾಹ ನೆರವೇರಿದ ಹಾಗೂ ಮದುವೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡು ವದು ವರರನ್ನು ಆಶಿರ್ವದಿಸಿದ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.

    ಬೆಳಗಾವಿಯ ಶಗುನ ಗಾರ್ಡನ್ ನಲ್ಲಿ  ಕವಟಗಿಮಠ ಪುತ್ರಿಯ ವಿವಾಹ ನೆರವೇರಿತು. ಯಡಿಯೂರಪ್ಪ ಮದುವೆಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಹಿಂದೆ ಅವರ ಭದ್ರತೆ, ಶಿಷ್ಟಾಚಾರ ಸಿಬ್ಬಂದಿ ಸಹ ಪಾಲ್ಗೊಂಡಿತ್ತು. ಮದುವೆಯಲ್ಲಿ ಜನ ಜಂಗುಳಿಯೇ ನೆರೆದಿದತ್ತು.

    ವಿವಾಹ ಮಹೋತ್ಸವದಲ್ಲಿ‌ ಸರ್ಕಾರದ ನಿರ್ದೇಶನ ಮೀರಿ ವಿವಾಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸ್ವತಃ ಯಡಿಯೂರಪ್ಪ ಗಲಿಬಿಲಿಗೊಂಡ ಪ್ರಸಂಗ ಸಹ ಸಂಭವಿಸಿತು.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬೆಳಗಾವಿ ಪ್ರವಾಸವನ್ನು ರದ್ದುಪಡಿಸಿದ್ದ ಯಡಿಯೂರಪ್ಪ, ಬಳಿಕ ತಮ್ಮ ಬೆಂಬಲಿಗನ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ವಿವಾಹ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡರು.

    ಯಾವುದೇ ಸಭೆ, ಸಮಾರಂಭದಲ್ಲಿ ನೂರಕ್ಕೂ ಹೆಚ್ಚು ಜನ‌ ಒಂದು ಕಡೆ ಸೇರಬಾರದು ಎಂದು ಸರ್ಕಾರ ನಿರ್ದೆಶನ ನೀಡಿದೆ.ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಆದೇಶ ‌ಹೊರಡಿಸಿದ್ದಾರೆ. ಹಾಗಿರುವಾಗ ಸ್ವತಃ ಮುಖ್ಯಮಂತ್ರಿಯೇ ತನ್ನದೇಆದೇಶವನ್ನು ಉಲ್ಲಂಘಿಸಿ, ಸಾವಿರಾರು ಜನರು ಸೇರಿದ್ದ ಮದುವೆಯಲ್ಲಿ ಪಾಲ್ಗೊಂಡಿರುವುದು ಮಾಧ್ಯಮಗಳಲ್ಲಿ ಹೆಚ್ಚುಚರ್ಚೆಯಾಗುತ್ತಿದೆ.

    ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದರು. ಇದಕ್ಕೂ ಮೊದಲುಮಾತನಾಡಿದ ಯಡಿಯೂರಪ್ಪ ರಾಜ್ಯದಲ್ಲಿ ಕೊರೊನಾ‌ ನಿಯಂತ್ರಣದಲ್ಲಿದೆ. ಒಂದು ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡುಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

    ರಾಜ್ಯದಲ್ಲಿ  ಕೊರೊನಾ  ವೈರಸ್   ನಿಯಂತ್ರಣಕ್ಕೆ ಎಲ್ಲ ರೀತಿ ಮುನ್ನೆಚ್ಚರಿಕೆ  ಕೈಗೊಳ್ಳಲಾಗಿದೆ  ರಾಜ್ಯದಾದ್ಯಂತ ಒಟ್ಟಾರೆ ನೂರು ಜನರ ಮೇಲೆ ನಿಗಾ ವಹಿಸಲಾಗಿದ್ದು, ಆತಂಕಪಡುವ  ಅಗತ್ಯ ಇಲ್ಲ ಎಂದು   ಮುಖ್ಯಮಂತ್ರಿ  ಯಡಿಯೂರಪ್ಪ  ಧೈರ್ಯ ಹೇಳಿದರು.

   ವಿವಾಹ  ಕಾರ್ಯಕ್ರಮದಲ್ಲಿ   ಕೇಂದ್ರ ರೈಲ್ವೆ  ರಾಜ್ಯ  ಸಚಿವ ಸುರೇಶ್ ಅಂಗಡಿ,   ಸಚಿವರಾದ ಬಸವರಾಜ ಬೊಮ್ಮಾಯಿ,ಶ್ರೀಮಂತ ಪಾಟೀಲ, ಶಶಿಕಲಾ ಜೊಲ್ಲೆ, ಸಂಸದೆ‌ ಶೋಭಾ ಕರಂದ್ಲಾಜೆ, ಪ್ರಭಾಕರ ಕೋರೆ, ಶಾಸಕರಾದ ಗಣೇಶ ಹುಕ್ಕೇರಿ,ಉಮೇಶ ಕತ್ತಿ, ಅನಿಲ ಬೆನಕೆ, ಮಹೇಶ ಕುಮಠಳ್ಳಿ, ಅಭಯ ಪಾಟೀಲ, ಶಾಮನೂರು ಶಿವಶಂಕರಪ್ಪ, ಗಣ್ಯರಾದ ಪ್ರಕಾಶಹುಕ್ಕೇರಿ, ಸಂಜಯ ಪಾಟೀಲ, ಅಲ್ಲಂಪ್ರಭು ಪಾಟೀಲ, ಅಮರಸಿಂಹ ಪಾಟೀಲ ಕಾಶಿ ಜಗದ್ಗುರು ಚೆನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ   ಸೇರಿ   ಹಲವು ಮಠಾಧೀಶರು ಸೇರದಂತೆ 50ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳುಪಾಲ್ಗೊಂಡಿದ್ದರು.ಮಂಟಪದ ಹೊರಗೆ ಕೊರೋನಾ ವೈರಸ್ ನಿಂದ ಬಚಾವಾಗಲು ಮತ್ತು ಕೈ ಸ್ವಚ್ಛತೆಗಾಗಿ  ಸ್ಯಾನಿಟೈಜರ್ ವ್ಯವಸ್ಥೆಮಾಡಲಾಗಿತ್ತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap