ಸಿದ್ದರಾಮಯ್ಯನವರೇ ಸಿಎಂ ಖುರ್ಚಿ ಖಾಲಿ ಇಲ್ಲ ಅಂತಾ ಹೇಳಿದ್ದಾರೆ: ವಿಶ್ವನಾಥ್

ಹಾವೇರಿ

     ಮಠಾಧಿಪತಿಗಳು ಸಹ ಮತದಾರರೇ ಮತದಾರರಾಗಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ನಿರಂಜನಾನಂದಪುರಿ ಸ್ವಾಮೀಜಿ ಹೇಳುವುದರಲ್ಲಿ ತಪ್ಪಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ಹೇಳಿದರು. ನಗರದ ಖಾಸಗಿ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.ಯಾವುದೇ ಪಕ್ಷದ ಪರ ವೋಟು ಹಾಕಿ ಎಂದು ಹೇಳುವುದು ತಪ್ಪು.ಯಾರೋ ಒಬ್ಬರು ಸಿಎಂ ಆಗಲಿ ಎಂಬುದರಲ್ಲಿ ತಪ್ಪಿಲ್ಲ.

        ಸಿದ್ದರಾಮಯ್ಯ ಸಿಎಂ ಆಗುವ ವಿಚಾರದ ಹೇಳಿಕೆಗಾಗಿ ಸಿದ್ದರಾಮಯ್ಯನವರೇ  ಸಿಎಂ ಖುರ್ಚಿ ಖಾಲಿ ಇಲ್ಲ ಅಂತಾ ಹೇಳಿದ್ದಾರೆ. ಮುಂದೆ ಜನರು ಆಶೀರ್ವಾದ ಮಾಡಿದರೆ ಸಿಎಂ ಆಗುತ್ತೇನೆ ಎಂದಿದ್ದಾರೆ.ಎಲ್ಲದಕ್ಕೂ ನಿನ್ನೆ ನಾಂದಿ ಹಾಡಿದ್ದಾರೆ.ಸಚಿವ ದಿವಂಗತ ಸಿ.ಎಸ್.ಶಿವಳ್ಳಿ ಸಾವಿನ ಕುರಿತು ಶಾಸಕ ಶ್ರೀರಾಮುಲು ಹೇಳಿಕೆ ವಿಚಾರವಾಗಿ ಮಾತನಾಡಿ ಯಾರ ಸಾವಿಗೆ ಯಾರೂ ಕಾರಣರಲ್ಲ.ಆ ಬಗ್ಗೆ ಮಾತನಾಡಲೂಬಾರದು, ಅದನ್ನು ನಂಬಲೂಬಾರದು.

       ಸಿಎಂ ಕುಮಾರಸ್ವಾಮಿ ಕುಡಿಯುವ ನೀರಿನ ವಿಚಾರವಾಗಿ ಸಭೆ ಮಾಡಲು ಶಿಷ್ಟಾಚಾರ ಅಡ್ಡಿ ಆಗುತ್ತಿದೆ.ಅನಾವಶ್ಯಕವಾಗಿಸಿಎಂ ಸಿಗುವುದಿಲ್ಲ ಎಂದು ದೂರೋದು ಸರಿಯಲ್ಲ.ಸಾಲಮನ್ನಾ ವಿಚಾರವಾಗಿ ಸಿಎಂ ಸುಧೀರ್ಘ ಸಭೆ ಮಾಡಿದ್ದಾರೆ.ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೂ ಹದಿನಾಲ್ಕು ದಿನ ಕಾಯೋಣ ಎಂದರು.

        ಯಾರು ಯಾರಿಗೆ ಮತ ಹಾಕಿದ್ದಾರೆ ಎಂದು ಸತ್ಯ ಗೋತ್ತಾಗುತ್ತಿಲ್ಲ. ಈ ಬಾರಿ ಹೆಚ್ಚು ಮತದಾನ ಆಗಿದೆ.ಹೆಚ್ಚು ಮತದಾನ ಆದಾಗ ಆಡಳಿತ ಪಕ್ಷದ ವಿರುದ್ಧ ಮತದಾನ ಆಗಿರುತ್ತದೆ.

        ಆದರೆ ರಾಜ್ಯ ಅಥವಾ ಕೇಂದ್ರ ಸರಕಾರದ ವಿರುದ್ಧ ಮತದಾನ ಆಗಿದೆ ಎಂಬುದು ಗೊತ್ತಾಗಲಿದೆ.ದೊಡ್ಡ ಪ್ರಮಾಣದಲ್ಲಿ ಪ್ರಚಾರ ಆಗದೇ ಇದ್ದರೂ ಜನರು ಸರದಿ ಸಾಲಿನಲ್ಲಿ ನಿಂತು ಮತ ಹಾಕಿದ್ದಾರೆ ಎಂದು ಎಚ್.ವಿಶ್ವನಾಥ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ಬೇವಿನಮರದ. ರಾಜ್ಯಾ ಪ್ರ,ಕಾ ಡಾ: ಸಂಜಯ ಡಾಂಗೆ. ಜಿಲ್ಲಾ ಮುಖಂಡ ಉಮೇಶ ತಳವಾರ.ಅಲ್ತಾಪ್ ನದಾಫ್,ಮಂಜು ಕನಾಯ್ಕನವರ. ಅಮೀರ್ ಜಾನ್ ಬೇಪಾರಿ ಅನೇಕರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link