ಐರಾವತ ಯೋಜನೆ: 200 ಫಲಾನುಭವಿಗಳಿಗೆ ಕಾರು ವಿತರಿಸಿದ ಸಿಎಂ..!!!

ಬೆಂಗಳೂರು:

     ನಿರುದ್ಯೋಗ ಮಕ್ತ ಕರ್ನಾಟಕದ ಆಶಯದೊಂದಿಗೆ ಅಧಿಕಾರಕ್ಕೆ ಬಂದು ಆ ದಿಶೆಯಲ್ಲಿ ತನ್ನ ಹೆಜ್ಜೆ ಇಡುತ್ತಿರುವ ರಾಜ್ಯದ ಮೈತ್ರಿ ಸರ್ಕಾರವು ಇಂದು ಆ ದಿಶೆತಲ್ಲಿ ದೊಡ್ಡ ಮೈಲಿಗಲ್ಲನ್ನು ಮುಟ್ಟಿದೆ ಸರಿಸುಮಾರು 200 ಫಲಾನುಭವಿ ಗಳಿಗೆ ರಾಜ್ಯ ಸರ್ಕಾರ ಇಂದು ಐರಾವತ ಯೋಜನೆಯಡಿಯಲ್ಲಿ ಕಾರಗಳನ್ನು ನೀಡಿ ಬಡ ಕುಟುಂಬಗಳಿಗೆ ಅನುಕೂಲ ಮಾಡಿ ಕೊಟ್ಟಿದೆ .

      ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧದಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಐರಾವತ ಯೋಜನೆ ಫಲಾನುಭವಿಗಳಿಗೆ ಮಾನ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಾಹನಗಳನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.ಬೆಂಗಳೂರಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ 200 ಫಲಾನುಭವಿಗಳಿಗೆ ಐರಾವತ ಯೋಜನೆಯಡಿ ವಾಹನಗಳ ಕೀಯನ್ನು ಹಸ್ತಾಂತರ ಮಾಡಲಾಯಿತು.

    ಬಡ ಕುಟುಂಬಗಳ ಏಳಗೆಗಾಗಿ ವಾಹನ ವಿತರಣೆ ಸೇರಿದಂತೆ ಎಲ್ಲಾ ರೀತಿಯ ಸರ್ಕಾರದಿಂದ ಸೌಲಭ್ಯ ಸಿಗಲಿದೆ. ರಾಜ್ಯದಲ್ಲಿ 4500 ಕುಟುಂಬಗಳಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ. ಈ ಯೋಜನೆಯ ಫಲಾನುಭವಿಗಳು ತಮ್ಮ ಜೀವನವನ್ನು ಸವಾಲಾಗಿ ಸ್ವೀಕರಿಸಿ, ಕುಟುಂಬಗಳು ನೆಮ್ಮದಿಯಾಗಿ ಜೀವಿಸುವಂತೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

     ಜೀವನದಲ್ಲಿ ಶಿಸ್ತು, ಬದ್ಧತೆಯನ್ನು ಅಳವಡಿಸಿಕೊಳ್ಳಬೇಕು, ಕೆಲಸದಲ್ಲಿ ಪ್ರಾಮಾಣಿಕ ತೋರಬೇಕು. ಹಾಗಾದರೆ ಜೀವನ ಯಶಸ್ವಿಯಾಗಲಿದೆ ಎಂದು ಹೇಳಿ ಎಲ್ಲಾ ಫಲಾನುಭವಿಗಳಿಗೆ ಕುಮಾರಸ್ವಾಮಿ ಶುಭಹಾರೈಸಿದರು  

      ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಹಾಗೂ ಶಾಸಕರು ಉಪಸ್ಥಿತರಿದ್ದರು. 225 ಕೋಟಿ ರೂ ವೆಚ್ಚದಲ್ಲಿ 450 ವಾಹನಗಳ ವಿತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap