ಚಿಕ್ಕಮಗಳೂರು
ಕೊಪ್ಪ ತಾಲೂಕಿನ ಕುಡುನೆಲ್ಲಿ ಉಮಾ ಮಹೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಹವನ ಹೋಮ ನಡೆಸಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ ಅಪಘಾತದಲ್ಲಿ ಮುಖ್ಯಮಂತ್ರಿ ಸೇರಿದಂತೆ ಅವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದವರಿಗೆ ಯಾವುದೆ ಅಪಾಯವಿಲ್ಲದೆ ಪಾರಾಗಿದ್ದಾರೆ
ಆಲ್ದೂರು ಸಮೀಪದ ಶಂಕರ್ ಫಾಲ್ಸ್ ತಿರುವಿನಲ್ಲಿ ಮುಖ್ಯಮಂತ್ರಿ ಅವರಿಗೆ ಬೆಂಗಾವಲಿನಲ್ಲಿದ್ದ ಕಾರು ಅಫಘಾತಕ್ಕೀಡಾಗಿದೆ. ತೀವ್ರ ತಿರುವಿನಲ್ಲಿ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಹೊಡದಿದೆ. ಈ ವೇಳೆ ವಾಹನದಲ್ಲಿದ್ದ ನಾಲ್ವರು ಪೊಲೀಸರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಾವಲು ವಾಹನ ಪಲ್ಟಿ ಹೊಡೆದ ಪರಿಣಾಮ ಬೊಲೆರೋ ಜೀಪ್ ಮೇಲ್ಬಾಗ,ಹಾಗೂ ಕಿಟಕಿ ,ಗಾಜುಗಳು ಪುಡಿಪುಡಿಯಾಗಿದೆ. ಘಟನೆ ನಡೆದ ತಕ್ಷಣ ಮುಖ್ಯಮಂತ್ರಿ ಬೆಂಗಾವಲಿನಲ್ಲಿದ್ದ ಆಯಂಬ್ಯಲೆನ್ಸ್ ನಲ್ಲಿ ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.