ಹಸಿರು ಶಾಲಿನ ಮಹತ್ವವನ್ನು ಮುಖ್ಯಮಂತ್ರಿ ಮರೆತಂತಿದೆ : ರೆಡ್ಡಿಹಳ್ಳಿ ವೀರಣ್ಣ.

ಚಳ್ಳಕೆರೆ

   ರಾಜ್ಯ ಸರ್ಕಾರವೂ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿತರುವ ಮೂಲಕ ರೈತ ಸಮೂಹಕ್ಕೆ ದ್ರೋಹವೆಸಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ದ ಪ್ರತಿಭಟಿಸಿ ಅಹೋರಾತ್ರಿ ಸತ್ಯಾಗ್ರಹ ಹಾಗೂ ವಿಧಾನಸೌಧ ಮುತ್ತಿಗೆ ಕಾರ್ಯವನ್ನು ಸೆ. 21ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮನವಿ ಮಾಡಿದರು.

   ಅವರು, ಗುರುವಾರ ನೂರಾರು ರೈತರೊಂದಿಗೆ ಇಲ್ಲಿನ ವಾಲ್ಮೀಕಿವೃತ್ತದಲ್ಲಿ ಆಹೋರಾತ್ರಿ ಸತ್ಯಾಗ್ರಹ ಹಾಗೂ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆ ನಡೆಸಿ ರೈತರಲ್ಲಿ ಮನವಿ ಮಾಡಿದರಲ್ಲದೆ, ರಾಜ್ಯ ಕೃಷಿ ಸಚಿವ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಲಘುವಾಗಿ ಮಾತನಾಡಿದ್ದನ್ನು ಖಂಡಿಸಿ ಕೃಷಿ ಸಚಿವರ ಪ್ರತಿಕೃತಿ ದಹಿಸಿದರು.

  ರಾಜ್ಯದಲ್ಲಿ ರೈತರ ಹೆಸರಿನಲ್ಲಿ ಹಸಿರು ಶಾಲುಹೊದ್ದು, ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ರೈತರು ನೂರಾರು ಸಂಕಷ್ಟಗಳಲ್ಲಿದ್ದರೂ ಸಹ ಅವರ ಬಗ್ಗೆ ಎಲ್ಲಿಯೂ ಸಹ ಚಕಾರವೆತ್ತುವುದಿಲ್ಲ. ರೈತರೇ ನನ್ನ ಉಸಿರು ಎಂದು ಹೇಳಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ಶಾಲಿನ ಮಹತ್ವವವನ್ನು ಮರೆತಿದ್ದಾರೆ. ಆದರೆ, ರೈತರು ಮನಸು ಮಾಡಿದರೆ ಯಾವ ಸಂದರ್ಭದಲ್ಲೂ ಏನುಬೇಕಾದದರೂ ಆಗಬಹುದಾಗಿದೆ. ರೈತರ ಹಿತವನ್ನು ಸಂಪೂರ್ಣವಾಗಿ ಸರ್ಕಾರ ನಿರ್ಲಕ್ಷಿಸಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ಹೆಚ್ಚಿನ ರೈತರು ಭಾಗವಹಿಸುವಂತೆ ಮನವಿ ಮಾಡಿದರು.

  ಇಲ್ಲಿನ ನೆಹರೂ ವೃತ್ತದಲ್ಲಿ ರೈತರ ಮೆರವಣಿಗೆ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಸ್ಥಳಕ್ಕೆ ಬಂದ ಶಾಸಕ ಟಿ.ರಘುಮೂರ್ತಿ ರೈತರ ಚಳುವಳಿಯ ಬಗ್ಗೆ ಚರ್ಚೆ ನಡೆಸಿದರು. ರೈತರ ಪರವಾಗಿ ತಾವು ಸದಾಕಾಲ ಕಾರ್ಯನಿರ್ವಹಿಸುವುದಾಗಿ ತಿಳಿಸಿದರಲ್ಲದೆ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಕ್ಷೇತ್ರಕ್ಕೆ ನೀರು ಹರಿಸುವ ವಿಚಾರದಲ್ಲಿ ರೈತರು ನೀಡಿದ ಸಹಕಾರವನ್ನು ಸ್ಮರಿಸಿದರು.

   ಈ ಸಂದರ್ಭದಲ್ಲಿ ತಾಲ್ಲೂಕು ಗೌರವಾಧ್ಯಕ್ಷ ಗಾಳಪ್ಪರತಿಮ್ಮಣ್ಣ, ಅಧ್ಯಕ್ಷ ಕೆ.ಸಿ.ಶ್ರೀಕಂಠಮೂರ್ತಿ, ಪ್ರಧಾನ ಕಾರ್ಯದರ್ಶಿ ವಡೇರಹಳ್ಳಿ ಬಸವರಾಜು, ತಳಕುನಾಗರಾಜಪ್ಪ, ಯರ್ರಿಸ್ವಾಮಿ, ಲಕ್ಷ್ಮಕ್ಕ, ರತ್ನಮ್ಮ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link