ರಾಜಕೀಯ ಲಾಭ ಪಡೆಯಲು ಆಡಿಯೋ ತಿರುಚಿದ ಸಿಎಂ : ವಿಜಯೇಂದ್ರ

0
24

ಬೆಂಗಳೂರು: 

       ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಸೃಷ್ಠಿಸಿರುವ ಆಡಿಯೋ ವಿವಾದ ಈಗ ಸದನದ ಹೊರಗೂ ಭಾರಿ ಪರ ವಿರೋಧ ಮಾತುಕತೆಗಳಿಗೆ ಎಡೆ ಮಾಡಿಕೊಟ್ಟಿದೆ ಅದರಲ್ಲಿ ಇರುವ ಸಂಭಾಷಣೆಯಲ್ಲಿ ಶ್ರೀ ಬಿಎಸ್ ಯಡಿಯೂರಪ್ಪ ಹಾಗೂ ಶಾಸಕ ಶಿವನಗೌಡರಿಗೆ ಪಕ್ಷಕ್ಕೆ ಬರಲು ಆಹ್ವಾನಿಸಿರುವುದು ಸ್ಪಷ್ಟವಾಗಿರುವ ಬೆನ್ನಲೆ ಬಿ ಎಸ್ ವೈ ಪುತ್ರ ವಿಜಯೇಂದ್ರ ಅವರು ತಮ್ಮ ತಂದೆಯ ಪರ ಬ್ಯಾಟಿಂಗ್ ಆರಂಬಿಸಿದ್ದಾರೆ ಮುಖ್ಯ ಮಂತ್ರಿಯವರು ಪ್ರಸ್ತುತ ಪಡಿಸಿರವ ಆಡಿಯೋ ರಾಜಕೀಯ ಲಾಭಕ್ಕಾಗಿ ಅವರೆ ತಿರುಚಿ ಜನರ ಮುಂದೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

       ಆವರು ಮಾಡಿರುವುದು ನಿಜ ಎಂದಾದರೆ ಕಂಪ್ಲೀಟ್ ಆಡಿಯೋ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ ಮತ್ತು ಆಪಾದನೆಯಲ್ಲಿ ನಾನು ಕೂಡ ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದೇನೆ ಎಂದಿದ್ದಾರೆ ಆದರೆ ಅದು ಸತ್ಯಕ್ಕೆ ದೂರವಾದ ಮಾತು ನಾನು ಯಾವ ಆಪರೇಷನ್ ನಲ್ಲೂ  ಭಾಗಿಯಾಗಿಲ್ಲ ಇದು ಒಂದು ಪಕ್ಷವನ್ನು ರಾಜಕೀಯವಾಗಿ ಮುಗಿಸಲು ಹೆಣೆದಿರುವ ಷಡ್ಯಂತ್ರ ಎಂದು ಕಿಡಿಕಾರಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here