ಬೆಂಗಳೂರು
ಮಂಡ್ಯ ತೊಪ್ಪನಹಳ್ಳಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳು ಆರೋಪಿಗಳನ್ನು ನಡುಬೀದಿಯಲ್ಲಿ ಶೂಟೌಟ್ ಮಾಡಿ ಎಂದು ಹೇಳಿಕೆ ನೀಡಿದ್ದು ಪ್ರಮಾದವಾಗಿದ್ದು, ಅವರು ಈ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀಪುರಂನಲ್ಲಿ ಸಾದರ ಕ್ಷೇಮಾಭಿವೃದ್ಧಿ ಸಮುದಾಯ ಭವನದಲ್ಲಿ ನಡೆಸಲಾದ ಅತಿರುದ್ರ ಮಹಾಯಜ್ಞ ಶತಚಂಡಿ ಹೋಮ ಮತ್ತು ಶಾಸ್ತಾಪ್ರೀತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಗಳು ಈ ರೀತಿಯಾಗಿ ಹೇಳಿಕೆ ನೀಡುವುದರಿಂದ ಅಧಿಕಾರಿಗಳು ಸ್ವೇಚ್ಛಾಚಾರವಾಗಿ ವರ್ತಿಸಲು ಸಹಾಯಕವಾಗುತ್ತದೆ. ಆವೇಶದಲ್ಲಿ ಈ ರೀತಿಯಾಗಿ ಹೇಳಿಕೆ ನೀಡಿದ್ದೆ, ಮುಖ್ಯಮಂತ್ರಿಯಾಗಿ ಆಗಿ ಅಲ್ಲ ಎಂದು ಅವರು ಹೇಳುತ್ತಿರುವುದು ಸರಿಯಲ್ಲ. ಹಾಗಾದರೆ ಎಚ್.ಡಿ.ಕುಮಾರಸ್ವಾಮಿ ಈಗ ಮುಖ್ಯಮಂತ್ರಿಯಾಗಿಲ್ಲವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಆಗಲಿ ಯಾವುದೆ ಕಾರ್ಯಕರ್ತರ ಹತ್ಯೆ ನಡೆದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಹಂತಕರಿಗೆ ಸೂಕ್ತ ಶಿಕ್ಷೆಯಾಗಲೇಬೇಕು ಎಂದು ಅವರು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








