ಚಳ್ಳಕೆರೆ
ನಗರದ ಎಲ್ಲಾ ಪ್ರಧಾನ ರಸ್ತೆಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಅಂಗಡಿ ಮಳಿಗೆಗಳೂ ಸೇರಿದಂತೆ ಯಾವುದೇ ಕಟ್ಟಡವಿರಲಿ ನಿಯಮ ಬಾಹಿರವಾಗಿ ನಿರ್ಮಿಸಪಟ್ಟಲ್ಲಿ ಅಂತಹ ಕಟ್ಟಡಗಳನ್ನು ತೆರವುಗೊಳಿಸಲು ನಗರಸಭೆ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ದಾರೆ.
ಅವರು, ಶನಿವಾರ ಸಂಜೆ ನಗರದ ಪಾವಗಡ ರಸ್ತೆಯ ಗಣೇಶ ಬೇಕರಿ, ಸಿದ್ದೇಶ್ವರ ಜ್ಯೂಯಲರ್ಸ್ ಸೇರಿದಂತೆ ನಾಲ್ಕು ಮಳಿಗೆಗಳ ಮಾಲೀಕರು ನಗರಸಭೆಯ ಆದೇಶದ ವಿರುದ್ದ ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ತಕಾರಾರು ಅರ್ಜಿ ಸಲ್ಲಿಸಿ ನಗರಸಭೆಯ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದು, ಮಾನ್ಯ ಪ್ರಾದೇಶಿಕ ಆಯುಕ್ತರು ಮಳಿಗೆಗಳ ಮಾಲೀಕರ ಅರ್ಜಿಯನ್ನು ವಜಾಗೊಳಿಸಿ ನಗರಸಭೆ ಆಯುಕ್ತರ ಆದೇಶವನ್ನು ಪುರಸ್ಕರಿಸಿ ಕೂಡಲೇ ನಾಲ್ಕು ಮಳಿಗೆಗಳ ಹೆಚ್ಚುವರಿ ಕಟ್ಟಡವನ್ನು ತೆರವು ಮಾಡುವಂತೆ ನಿರ್ದೇಶನ ನೀಡಿದ ಹಿನ್ನೆಲ್ಲೆಯಲ್ಲಿ ಸದರಿ ಕಟ್ಟಡಗಳ ತೆರವು ಸಂದರ್ಭದಲ್ಲಿ ಪತ್ರಿಕೆಗೆ ಮಾಹಿತಿ ನೀಡಿದರು.
ನಗರದ ಪಾವಗಡ ಹಾಗೂ ಬಳ್ಳಾರಿ ರಸ್ತೆಗಳಲ್ಲಿ ಈಗಾಗಲೇ ರಾಷ್ಟ್ರೀಯ ಅಭಿವೃದ್ಧಿ ಪಾಧಿಕಾರ ನಿಯಮ ಬದ್ದವಾಗಿ ಈಗಾಗಲೇ ರಸ್ತೆಯ ಕೇಂದ್ರದಿಂದ ಎರಡು ಬದಿ ಸೇರಿ ಒಟ್ಟು 100 ಅಡಿಗಳ ರಸ್ತೆ ವಿಸ್ತರಣೆಗೆ ನಿರ್ಧಾರ ಕೈಗೊಂಡಿದ್ದು, ಕೆಲವು ಮಾಲೀಕರು ಮಾತ್ರ ನ್ಯಾಯಾಲಯದ ಮೊರೆ ಹೋಗಿದ್ದು, ಶೀಘ್ರದಲ್ಲೇ ನ್ಯಾಯಾಲಯ ಅರ್ಜಿಗಳ ವಿಲೇವಾರಿಯನ್ನು ತ್ವರಿತಗೊಳಿಸಲಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ನಗರಸಭೆ ಕೈಗೊಳ್ಳುವ ರಸ್ತೆ ವಿಸ್ತರಣೆ ಕಾರ್ಯಕ್ಕೆ ಸಾರ್ವಜನಿಕರು ಸಹ ಮುಕ್ತ ಮನಸಿನಿಂದ ಸಹಕರಿಸಿ ನಗರದ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಆಯುಕ್ತರು ಮನವಿ ಮಾಡಿದ್ಧಾರೆ.
ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಇಂನಿಜಿಯರ್ ಲೋಕೇಶ್, ಕಂದಾಯಾಧಿಕಾರಿ ವಿ.ಈರಮ್ಮ, ಸಿಬ್ಬಂದಿಯಾದ ಸಂದೀಪ್, ಮಂಜುನಾಥ, ಪಿ.ಪಾಲಯ್ಯ, ಹಿರಿಯ ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ