ಸಹಕಾರ ಸಂಘಗಳಿಂದ ರೈತರ ಜೀವನ ಹಸನಾಗುತ್ತಿದ್ದು : ಶ್ರೀನಿವಾಸ್‍ಮೂರ್ತಿ

ಕೊರಟಗೆರೆ:-

      ಸಹಕಾರ ಸಂಘಗಳಿಂದ ರೈತರ ಜೀವನ ಅಸನಾಗುತ್ತಿದ್ದು, ಸಹಕಾರ ಸಂಘಗಳ ಅಭಿವೃಧ್ಧಿಗೆ ರೈತರ ಸಹಕಾರ ಸಹ ಅಷ್ಟೆ ಮುಖ್ಯವಾಗಿರುವುದರಿಂದ ಇಲ್ಲಿನ ಕೃಷಿ ಅಭಿವೃಧ್ದಿಗೂ ರೈತರ ಕೊಡುಗೆ ಅಪಾರವಾಗಿದೆ ಎಂದು ವಿಎಸ್‍ಎಸ್‍ಎನ್ ಅಧ್ಯಕ್ಷ ಶ್ರೀನಿವಾಸ್‍ಮೂರ್ತಿ ತಿಳಿಸಿದರು.

       ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಡ್ಲಹಳ್ಳಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಅವರಣದಲ್ಲಿಏರ್ಪಡಿಸಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನ ಉದ್ಘಾಟಿಸಿ ಮಾತನಾಡಿದರು.

       ರೈತರುಗಳ ಸಹಕಾರದಿಂದ ಈ ಸಾಲಿನಲ್ಲಿ ಸುಮಾರು 472569 ಲಕ್ಷರೂಪಾಯಿ ನಮ್ಮ ಸಂಘಕ್ಕೆ ಲಾಭ ಬಂದಿದ್ದು, ಸಂಘದ ಪ್ರಗತಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ರೈತರು ಹಾಗೂ ಸಾರ್ವಜನಿಕರು ವಿಎಸ್‍ಎಸ್‍ಎನ್ ಮತ್ತು ಡಿಸಿಸಿ ಬ್ಯಾಂಕಿನಲ್ಲಿ ಹೆಚ್ಚು ಹೆಚ್ಚು ಠೇವಣಿಗಳನ್ನ ಇಟ್ಟು ನೀವು ಅಭಿವೃಧಿಯಾಗುವುದರ ಜೊತೆಗೆ ಸಹಕಾರ ಸಂಘಗಳನ್ನ ಬೆಳೆಸಬೇಕು ಎಂದು ಹೇಳಿದರು.

       ವ್ಯಾಪರಸ್ಥರಿಗೆ ಸಾಕಷ್ಟು ಸಾಲದ ಸೌಲಭ್ಯ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ಆರಂಭದಿಂದಲೂ ಜನರಿಗೆ ಹತ್ತಿರವಾಗಿದೆ, ಡಿಸಿಸಿ ಬ್ಯಾಂಕ್ ರೈತರಿಗೆ ಅತಿಹೆಚ್ಚು ಸಾಲಕೊಡುವ ಬ್ಯಾಂಕ್ ಆಗಿದೆ. ರೈತರು ತಮ್ಮಲ್ಲಿರುವ ಹಣವನ್ನ ವಿಎಸ್‍ಎಸ್‍ಎನ್ ಮತ್ತು ಡಿಸಿಸಿ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟು ಸಹಕಾರಿ ಬ್ಯಾಂಕ್‍ಗಳ ಅಭಿವೃಧಿಗೆ ಸಹಕರಿಸಬೇಕು. ಎಂದು ತಿಳಿಸಿದರು.

        ಸಿಇಒ ಇಬ್ರಾಹಿಂಖಲೀಲ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ರೈತರ ಅನುಕೂಲಕ್ಕಾಗಿ ನಮ್ಮ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್‍ರಾಜಣ್ಣನವರು ಪ್ರತಿ ಹೋಬಳಿಗೆ ಡಿಸಿಸಿ ಬ್ಯಾಂಕ್ ಮತ್ತು ವಿಎಸ್‍ಎಸ್‍ಎನ್ ಶಾಖೆಗಳನ್ನ ತೆರೆಯುತ್ತಿದ್ದು, ಇದರ ಅನುಕೂಲವನ್ನ ಪ್ರತಿಯೊಬ್ಬರೈತರು ಪಡೆದುಕೊಳ್ಳಬೇಕು.ಅದೇ ರೀತಿ ಜಿಲ್ಲೆಯಲ್ಲಿ ನಮ್ಮ ತಾಲೂಕಿಗೆ ಅತಿ ಹೆಚ್ಚು ರೈತರಿಗೆ ಸಾಲವನ್ನ ಕೊಟ್ಟಿದ್ದಾರೆ ಎಂದು ತಿಳಿಸಿದರು.

        ಡಿಸಿಸಿ ಬ್ಯಾಂಕ್ ಮತ್ತು ವಿಎಸ್‍ಎಸ್‍ಎನ್ ಸಹಕಾರ ಸಂಘಗಳು ರೈತರಿಗಾಗಿ ಅನೇಕ ಯೋಜನೆಗಳನ್ನ ಜಾರಿಗೆತಂದಿದ್ದು, ಅವುಗಳನ್ನ ರೈತರು ಪಡೆದುಕೊಂಡು ತಮ್ಮ ಜೀವನ ನೆಡೆಸುವುದರ ಜೊತೆಗೆ ಆರ್ಥಿಕವಾಗಿ ಮತ್ತು ಸಮಾಜಿಕವಾಗಿ ಮುಂದೆ ಬರಬೇಕು ಎಂದರು.

        ಇದೆ ಸಂದರ್ಭದಲ್ಲಿ ವಿಎಸ್‍ಎಸ್‍ಎನ್ ಉಪಾಧ್ಯಕ್ಷೆ ರಂಗಮ್ಮ, ಸದಸ್ಯರಾದ ಎಚ್.ವಿ ಉಮಾಶಂಕರರಾಧ್ಯ, ಶ್ರೀಧರ್, ನಾಗರಾಜು, ಕೆ.ಜಿಜಗದೀಶ್, ನಂಜಮ್ಮ, ಮೇಘಶಾಮ್, ಸಿದ್ದಲಿಂಗಪ್ಪ, ಸಯಾದ್‍ಆಫತಾಪ್ ಮುಖಂಡರಾದ ರಾಮಚಂದ್ರ, ಸಿದ್ದವೀರಯ್ಯ, ವೆಂಕಟಪ್ಪ ಪ್ರಸನ್ನಕುಮಾರ್, ವೆಂಟರವಣಪ್ಪ, ಸಿದ್ದಪ್ಪ, ರುದ್ರಪ್ಪ, ಬಸವರಾಜು, ಶಿವನಂದಯ್ಯ, ಸೇರಿದಂತೆ ಊರಿನ ಗ್ರಾಮಸ್ಥರು ಇದ್ದರು.

                       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link