ರಾಜ್ಯ ಸಭಾ ಚುನಾವಣೆ : ದೋಸ್ತಿ ಸೂಚನೆ ನೀಡಿದ ಕೈ-ದಳದ ನಾಯಕರು

ಬೆಂಗಳೂರು:

    ಕೊರೋನಾ ವೈರಸ್ ಹಾವಳಿ  ಮಧ್ಯೆ ರಾಜ್ಯ ರಾಜಕಾರಣ ರಂಗೇರತೊಡಗಿದೆ , ರಾಜ್ಯಸಭಾ ಚುನಾವಣೆಯಲ್ಲಿ  ಕೈ-ದಳ  ದೋಸ್ತಿ ಸೂಚನೆ ನೀಡಿವೆ. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ದೇವೇಗೌಡರ ಹುಟ್ಟು ಹಬ್ಬದಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶುಭ ಕೋರಿದ್ದರು.

   ರಾಜ್ಯ ಸಭೆ ಚುನಾವಣೆಯಲ್ಲಿ  ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ನಿಂದ ದೇವೇಗೌಡರು ಆಯ್ಕೆ ಬಯಸಿ ಕಣಕ್ಕಿಇಯುವ ಸಾಧ್ಯತೆ ಇದೆ ಎನ್ನಲಾಗಿದೆ . ಹೀಗಾಗಿ ಸೋನಿಯಾ ಗಾಂಧಿ ಅವರ ವಿಡಿಯೋ ಸಂವಾದದಲ್ಲಿ ಖರ್ಗೆ ಮತ್ತು  ದೇವೇಗೌಡ ಇಬ್ಬರು ಭಾಗವಹಿಸಿದ್ದರು.

    ರಾಜ್ಯಸಭೆಗೆ ಆಯ್ಕೆಯಾಗಲು 45 ಸದಸ್ಯರ ಅವಶ್ಯಕತೆಯಿದೆ. ಜೆಡಿಎಸ್ ಕೇವಲ 34 ಸದಸ್ಯರನ್ನು ಹೊಂದಿದೆ, ಹೀಗಾಗಿ ಸ್ವಂತ ಶಕ್ತಿಯಿಂದ ಜೆಡಿಎಸ್ ಗೆ ಸಾಧ್ಯವಿಲ್ಲ, ಉಳಿದ ಮತಗಳಿಗಾಗಿ ಜೆಡಿಎಸ್ ಗೆ ಕಾಂಗ್ರೆಸ್ ಸಹಾಯ ಬೇಕಿದೆ.ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೆರವು ಪಡೆಯುವ ಜೆಡಿಎಸ್ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜೆಡಿಎಸ್ ನೆರವಿನ ಹಸ್ತ ನೀಡಲಿದೆ.

    16 ಪರಿಷತ್ ಸ್ಥಾನಗಳಲ್ಲಿ ಪದವೀದರ ಮತ್ತು ಶಿಕ್ಷಕರ 4 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ,ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿ ಸ್ವೀಪ್ ಮಾಡುವುದನ್ನು ತಡೆಯಲು ಯತ್ನಿಸುತ್ತಿವೆ.ಕಾಂಗ್ರೆಸ್ ಬಿಕೆ ಹರಿ ಪ್ರಸಾದ್ ಮತ್ತು ಪ್ರೊ, ರಾಜೀವ್ ಗೌಡ ಹಾಗೂ ಜೆಡಿಎಸ್ ನ ಕುಪೇಂದ್ರ ರೆಡ್ಡಿ ಅವರ ಅಧಿಕಾರವದಿ ಪೂರ್ಣಗೊಂಡಿದೆ. ಹೀಗಾಗಿ ನಾಮಪತ್ರ ಸಲ್ಲಿಕೆಗೆ ತೊಡಕುಂಟಾಗಬಹುದು, ಬಿಜೆಪಿ ನಾಯಕ ಪ್ರಭಾಕರ್ ಕೋರೆ ಮರು ನಾಮಕರಣವಾಗುವ ಸಾಧ್ಯತೆಯಿದೆ. ಚುನಾವಣೆ ನಡೆಸಲು ನಾವು ಸಿದ್ದರಿದ್ದು, ಕೇಂದ್ರ ಚುನಾವಣಾ ಆಯೋಗದ ಅನುಮತಿಗಾಗಿ ಕಾಯುತ್ತಿರುವುದಾಗಿ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link