ಅಹವಾಲು ಸ್ವೀಕರಿಸಿ ಹಿಂಬರಹ ನೀಡಲು ಕರೆ

ಚಿಕ್ಕನಾಯಕನಹಳ್ಳಿ

      ಸಾರ್ವಜನಿಕರು ಕಚೇರಿಗೆ ಬಂದಾಗ ಸರಿಯಾಗಿ ನಡೆದುಕೊಂಡು ಅಹವಾಲುಗಳ ಅರ್ಜಿ ಸ್ವೀಕರಿಸಿ ಹಿಂಬರಹ ನೀಡಿ ಎಂದು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಉಪಾಧೀಕ್ಷಕ ರಘುಕುಮಾರ್ ತಾಕೀತು ಮಾಡಿದರು.

      ಪಟ್ಟಣದ ತಾ.ಪಂ. ಕಚೇರಿಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ದೂರು ನೀಡಿದರೆ ಅಂತಹವರ ವಿರುದ್ಧ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳಲಾಗುವುದು, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸೂಚನೆಯ ಬಗ್ಗೆ ನಾಮಫಲಕ ಹಾಕುವಂತೆ ಸೂಚಿಸಿದ ಅವರು, ತಾಲ್ಲೂಕು ಕಚೇರಿ, ಪುರಸಭೆ, ಸರ್ವೇ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರದ ಬಗ್ಗೆ ದೂರುಗಳು ಬರುತ್ತಿದ್ದು, ಇದರ ಬಗ್ಗೆ ಅಧಿಕಾರಿಗಳು ಎಚ್ಚರವಹಿಸಿ, ಸಾರ್ವಜನಿಕರ ಕೆಲಸವನ್ನು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದ್ದಲ್ಲಿ ತುಮಕೂರು ಭ್ರಷ್ಟಾಚಾರ ನಿಗ್ರಹದಳಕ್ಕೆ ಮಾಹಿತಿ ನೀಡಿದರೆ 2018ರ ಕಾಯ್ದೆ ಅಡಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

       ಕಚೇರಿಗೆ ಬರುವ ಅಧಿಕಾರಿಗಳು ತಮ್ಮ ಬಳಿ ಎಷ್ಟು ಹಣ ಇದೆ ಎಂಬುದನ್ನು ಪುಸ್ತಕದಲ್ಲಿ ನಮೂದಿಸಿ, ನಂತರ ಹೋಗುವಾಗಲು ಕೂಡ ನಮೂದಿಸುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಇನ್ಸ್‍ಪೆಕ್ಟರ್ ಹಾಲಪ್ಪ, ತಾ.ಪಂ. ಅಧಿಕಾರಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap