ಗ್ರಾಮೀಣ ಕಾಲೇಜುಗಳಿಗೆ ಮಾರ್ಗದರ್ಶನದ ಕೊರತೆ

ಹುಳಿಯಾರು

        ಸರ್ಕಾರಿ ಕಾಲೇಜುಗಳು ಅದರಲ್ಲೂ ಗ್ರಾಮೀಣ ಪ್ರದೇಶದ ಪದವಿ ಕಾಲೇಜುಗಳಿಗೆ ಯುಜಿಸಿ ಅನುದಾನದ ಬಗ್ಗೆ ಮಾರ್ಗದರ್ಶನದ ಕೊರತೆಯಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಕೋಟ್ಯಾಂತರ ರೂಗಳ ಯುಜಿಸಿ ಅನುದಾನ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

         ಹುಳಿಯಾರಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಪ್ರಾಯೋಜಿತ ನ್ಯಾಕ್ ಪರಿಷ್ಕøತ ಮಾನ್ಯತಾ ಚೌಕಟ್ಟು ಮತ್ತು ಗುಣಮಟ್ಟ ಪೋಷಣೆ ಎಂಬ ವಿಷಯದ ಮೇಲೆ ಏರ್ಪಡಿಸಿದ್ದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

          ನ್ಯಾಕ್ ಮಾನ್ಯತೆ ಗಳಿಸಲು ಮೊದಲು ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳೂ ದಾಖಲೀಕರಣಗೊಳ್ಳಬೇಕು. ಪೋಟೋ, ನ್ಯೂಸ್ ಪೇಪರ್ ಕಟಿಂಗ್ ಕಡ್ಡಾಯವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಯುಜಿಸಿ ಅನುದಾನ ಬಳಸುವಾಗ ಯಾವ ಉದ್ದೇಶಕ್ಕಾಗಿ ಬಿಡುಗಡೆಯಾಗಿದೆಯೋ ಅದೇ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಕಿವಿ ಮಾತು ಹೇಳಿದರು.

           ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಅವರು ಮಾತನಾಡಿ ಕಾಲೇಜಿನಲ್ಲಿ ವಿಶೇಷ ಮತ್ತು ವಿಭಿನ್ನ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದ್ದು ಸುಮಾರು 150 ಕ್ಕಿಂತಲೂ ಹೆಚ್ಚು ಕಾರ್ಯಕ್ರಮ ಕಳೆದ ಐದು ವರ್ಷಗಳಲ್ಲಿ ನಡೆಸಲಾಗಿದೆ ಎಂದು ತಿಳಿಸಿದರಲ್ಲದೆ ಹಲವಾರು ಅನಾನುಕೂಲಗಳ ಮಧ್ಯೆಯೂ ಕ್ರಿಯಾಶೀಲ ಬೋಧಕ, ಬೋಧಕೇತರ ಹಾಗೂ ಅತಿಥಿ ಉಪನ್ಯಾಸಕರ ಸಹಕಾರದಿಂದ ಕಾಲೇಜು ಗ್ರಾಮೀಣ ಪರಿಸರದಲ್ಲಿ ಉತ್ತಮ ಸೇವೆ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.ಸಂಪನ್ಮೂಲ ವ್ಯಾಕ್ತಿಗಳಾದ ಡಾ.ಸಿದ್ಧಲಿಂಗಸ್ವಾಮಿ. ನ್ಯಾಕ್ ಸಮಿತಿಯ ಸಂಚಾಲಕರುಗಳಾದ ಡಾ.ಸುಷ್ಮಾ ಎಲ್ ಬಿರಾದಾರ್, ಪ್ರೊ.ಮಲ್ಲಿಕಾರ್ಜುನಯ್ಯ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link