ಗಾಂಧಿನಗರ ಅಂಡರ್‍ಪಾಸ್‍ಗೆ ಶಾಸಕರು ಹಾಗೂ ಆಯುಕ್ತರ ಭೇಟಿ

ತುಮಕೂರು

       ನಗರದ ಹೃದಯ ಭಾಗದಲ್ಲಿರುವ ಗಾಂಧಿನಗರದ ಅಂಡರ್‍ಪಾಸ್ ಹಲವಾರು ವರ್ಷಗಳಿಂದ ಮುಚ್ಚಿದ್ದು, ಇಲ್ಲಿನ ಸ್ಥಳೀಯರಿಗೆ ಸಂಪರ್ಕ ರಸ್ತೆಯಿಲ್ಲದೇ ಶಾಂತಿನಗರ, ಬನಶಂಕರಿ, ಅಮರಜ್ಯೋತಿನಗರ, ಮರಳೂರು, ಮರಳೂರು ದಿಣ್ಣೆ, ಸರಸ್ವತಿಪುರಂ ಇಲ್ಲಿನ ಬಡಾವಣೆಗಳ ಸಾವಿರಾರು ಜನರಿಗೆ ಸಂಪರ್ಕ ರಸ್ತೆಯಾಗಿತ್ತು. ಆದರೆ ರೈಲ್ವೆ ಇಲಾಖೆಯಿಂದ ಮಾನವ ರಹಿತ ರೈಲ್ವೇ ಗೇಟ್‍ಗಳನ್ನು ಮುಚ್ಚಿದ ಪರಿಣಾಮವಾಗಿ ಸಾವಿರಾರು ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ.

        ರೈಲ್ವೇ ಇಲಾಖೆಯ ಅಂಡರ್‍ಪಾಸ್ ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆಯನ್ನು ಮಹಾನಗರಪಾಲಿಕೆಯಿಂದ ಅಭಿವೃದ್ಧಿಪಡಿಸಬೇಕಾಗಿದೆ. ಆದರೆ ಖಾಸಗಿ ವ್ಯಕ್ತಿಗಳು ಹಾಗೂ ಮಹಾನಗರಪಾಲಿಕೆಯ ಸ್ವತ್ತಿನ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದು, ಯಾವುದೇ ತೀರ್ಮಾನ ಬರುವವರೆಗೂ, ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತಾಗಿ ಕಾನೂನಿನ ರೀತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಶಾಸಕ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮಹಾನಗರಪಾಲಿಕೆಯ ಆಯುಕ್ತರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಈ ಸಂಧರ್ಭದಲ್ಲಿ ಮಹಾನಗರಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕ, ಮುಖ್ಯ ಅಭಿಯಂತರರಾದ ಮಹೇಶ್, ಕಾರ್ಯಪಾಲಕ ಅಭಿಯಂತರರಾದ ಆಶಾ, ಸಮಾಜ ಸೇವಕರಾದ ಶ್ರೀನಿಧಿ ರಾಜಣ್ಣ, ವೇದಮೂರ್ತಿ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link