ತುರುವೇಕೆರೆ:
ರಾಹುಲ್‍ಗಾಂಧಿ ದೇಶದ ಫ್ರದಾನಿಯಾಗಬೇಕಾಗಿದೆ ಮೈತ್ರಿ ಅಭ್ಯರ್ಥಿ ಮಾಜಿ ಫ್ರದಾನಿ ಹೆಚ್.ಡಿ.ದೇವೇಗೌಡರ ಗೆಲುವು ಅತ್ಯವಶ್ಯಕ ಎಂದು ಬೆಸ್ಕಾಂ ಮಾಜಿ ನಿರ್ದೇಶಕ ಹಾಗೂ ಕಾಂಗ್ರೇಸ್ ಮುಖಂಡ ವಸಂತ್ ಕುಮಾರ್ ತಿಳಿಸಿದರು.
ಪಟ್ಟಣದ ಜಯಣ್ಣ ಸಮುದಾಯ ಭವನದಲ್ಲಿ ಗುರುವಾರ ಬಿ.ಎಸ್.ವಸಂತ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಹಿಂದ ಮುಖಂಡರ ಸಭೆಯಲ್ಲ್ಲಿ ಮಾತನಾಡಿದ ಅವರು ಜಿಲ್ಲೆಯ ಅಹಿಂದ ವರ್ಗದ ಮತದಾರರು ದೇವೇಗೌಡರಿಗೆ ತಮ್ಮ ಮತಗಳನ್ನು ನೀಡುವ ಮೂಲಕ ಭಾರಿ ಅಂತರದಿಂದ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.
ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ದಿ ಕಾಣದೆ ದೇಶದ ಭದ್ರತೆ ಹೆಸರಲ್ಲಿ ಮತ ಕೇಳುತ್ತಿರುವ ಫ್ರದಾನಿ ನರೇಂದ್ರ ಮೋದಿಯವರು ಈ ಹಿಂದಿನ ಕಾಂಗ್ರೇಸ್ ಆಡಳಿತವನ್ನು ಅರಿಯ ಬೇಕಿದೆ. ಕಾಂಗ್ರೆಸ್‍ನ ಇಂದಿರಾಗಾಂಧಿ ಫ್ರದಾನಿಯಾಗಿದ್ದಾಗ ಸಾವಿರಾರು ಪಾಕಿಸ್ಥಾನ ಸೈನಿಕರ ಎಡೆಮುರಿ ಕಟ್ಟಲಿಲ್ಲವೇ ಈ ದೇಶಕ್ಕೆ ಭದ್ರ ಬುನಾದಿ ಹಾಕಿರುವುದು ಕಾಂಗ್ರೆಸ್ ಪಕ್ಷ ಎಂಬುದನ್ನು ತಿಳಿಯಬೇಕಿದೆ.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಆರ್.ಜಯರಾಮ್ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನಸ್ಥಾಪಗಳು ಇದ್ದಿದ್ದು ಸತ್ಯ, ಆದರೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಫ್ರದಾನಿ ದೇವೇಗೌಡರು ಕಣದಲ್ಲಿದ್ದಾರೆ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ಅರಳೀಕೆರೆ ರವಿಕುಮಾರ್ ಮಾತನಾಡಿ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಲಿಂಗಾಯುತ ಸಮುದಾಯ, ಮೈತ್ರಿ ಅಭ್ಯರ್ಥಿ ಪರ ಒಕ್ಕಲಿಗರ ಸಮುದಾಯ ಮನೆಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ ಆದರೆ ವಿಭಿನ್ನವಾಗಿ ನಮ್ಮ ಪಕ್ಷದ ಮುಖಂಡ ಬಿ.ಎಸ್.ವಸಂತ್‍ಕುಮಾರ್ ಅಹಿಂದ ಸಭೆ ನಡೆಸುವ ಮೂಲಕ ಅಹಿಂದ ಮತಗಳನ್ನು ಕೇಳುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಮಂಜುನಾಥ್, ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಯಜಮಾನ್‍ಮಹೇಶ್, ಕಾಂಗ್ರೆಸ್ ಮುಖಂಡರುಗಳಾದ ಕೃಷ್ಣಮೂರ್ತಿ, ಕೆಂಪರಸಯ್ಯ, ಶಿವರಾಜ್, ಶಂಕರಲಿಂಗಯ್ಯ, ನಂದೀಶ, ಗುರುರಾಜ್, ಚಲವಾದಿ ಮುಖಂಡ ಜಗಧೀಶ್, ವಿಶ್ವಕರ್ಮ ಮುಖಂಡ ಮಹೇಂದ್ರ, ಕುರುಬ ಸಮುದಾಯದ ಮುಖಂಡ ಚಂದ್ರಶೇಕರ್, ದೊಂಬಿದಾಸ ಸಮುದಾದ ಮುಖಂಡ ಲಕ್ಕಿರಾಂಪುರ ಬಾಲಕೃಷ್ಣ, ಯಾದವ ಸಮುದಾಯದ ಮುಖಂಡ ಹಿಂಡಿಸ್ಕೆರೆ ಜಗಧೀಶ್, ಸೇರಿದಂತೆ ಇತರರು ಇದ್ದರು