ಚಿತ್ರದುರ್ಗ
ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯನ್ನು ಮಾಡಿ ಅಗೆದ ರಸ್ತೆಯನ್ನು ರೀಪೆರಿ ಮಾಡದ ಹಾಗೇ ಬಿಟ್ಟಿರುವ ಪೂನಾ ಕಂಪನಿಯ ಮೇಲೆ ಕೇಂದ್ರ ಸರ್ಕಾರಕ್ಕೆ ದೂರು ನೀಡಲಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.
ನಗರದ ಜೆಸಿಆರ್ ಬಡಾವಣೆಯ ಮೂರನೇ ತಿರುವಿನಲ್ಲಿ ಇಂದು ಸುಮಾರು 20 ಲಕ್ಷ ರೂ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, ನಗರದಲ್ಲಿ ಯುಜಿಡಿ ಕಾಮಗಾರಿ ನಡೆದಿದ್ದು ಅದಕ್ಕಾಗಿ ನಗರದಲ್ಲಿ ರಸ್ತೆಯನ್ನು ಆಗೆಯಲಾಗಿದೆ ಅದರೆ ಅದನ್ನು ಮತ್ತೆ ಮುಚ್ಚುವ ಕೆಲಸವನ್ನು ಕಂಪನಿಯವರು ಮಾಡಿಲ್ಲ ಆದರೆ ಟೆಂಡರ್‍ನಲ್ಲಿ ಅಗೆದ ರಸ್ತೆಯನ್ನು 05 ದಿನದೊಳಗಾಗಿ ಮತ್ತೆ ರಿಪೇರಿ ಮಾಡಬೇಕೆಂದು ನಿಭಂಧನೆ ಇದ್ದರು ಸಹಾ ಅದನ್ನು ಮಾಡದೆ ನಿರ್ಲಕ್ಷ ಮಾಡಿದ್ದಾರೆ.
ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತು ಕಂಪನಿಯ ಕೇಂದ್ರ ಕಛೇರಿಗೆ ಪತ್ರ ಬರೆದರು ದೂರು ನೀಡಿರುವುದಾಗಿ ತಿಳಿಸಿದರು.
ಆದರೆ ಪೂನಾ ಕಂಪನಿಯವರು ಪೈಪ್ ಲೈನ್ ಹಾಕಲು ರಸ್ತೆಯನ್ನು ಆಗಿಯುತ್ತಾರೆ ಆದರೆ ಅದನ್ನು ಪುನರ್ ನಿರ್ಮಾಣ ಮಾಡುವ ಕಾಮಗಾರಿಯನ್ನು ಮಾಡುತ್ತಿಲ್ಲ, ನಗರದ ಗ್ರಂಥಾಲಯದಿಂದ ಜೆಸಿಆರ್ ಬಡಾವಣೆ ಮೂಲಕ ರಾ.ಹೆ.4ನ್ನು ಸೇರುವ ಸೇರಿದಂತೆ ವಿವಿಧೆಡೆ ಇದೇ ರೀತಿಯ ವಾತಾವರಣ ಇದೆ , ಇದರಿಂದ ಜನತೆಗೆ ತೊಂದರೆಯಾಗಿದೆ ರಾತ್ರಿ ಸಮಯದಲ್ಲಿ ತೊಂದರೆಗಳನ್ನು ಆನುಭವಿಸಿ ನನಗೆ ದೂರವಾಣಿ ಮೂಲಕ ತಿಳಿಸಿದ್ದಾರೆ, ಇದರ ಬಗ್ಗೆ ಕೇಂದ್ರ ಕಛೇರಿಗೆ ದೂರನ್ನು ನೀಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಹೋರಾಟವನ್ನು ಮಾಡುವುದರ ಮೂಲಕ ರಸ್ತೆ ಡಾಬರೀಕರಣಕ್ಕಾಗಿ ಹಣವನ್ನು ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಮಾಡಿಸಲಾಗುತ್ತಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರ ಕೇಂದ್ರ ಸರ್ಕಾರದ ಅಮೃತ್ ಸಿಟಿ ಯೋಜನೆಗೆ ಸೇರ್ಪಡೆಯಾಗಿದ್ದು, ಇದರಲ್ಲಿ ಬಿಡುಗಡೆಯಾದ 140 ಕೋಟಿ ರೂ.ಗಳ ಹಣದಲ್ಲಿ 112 ಕೋಟಿ ರೂ.ಗಳನ್ನು ಚಿತ್ರದುರ್ಗ ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಯೋಜನೆಗಳಾದ ವಿವಿಸಾಗರ ಮತ್ತು ಶಾಂತಿ ಸಾಗರದ ಎರಡನೇ ಹಂತದ ಪೈಪ್ ಲೈನ್ ಕಾಮಗಾರಿಗೆ ಬಳಕೆ ಮಾಡಲಾಗಿದೆ, ಉಳಿದಂತೆ 14 ಕೋಟಿ ಹಣವನ್ನು ಈ ರೀತಿಯಾದ ಕಾಮಗಾರಿಗೆ ಅದನ್ನು ಹಣವನ್ನು ಬಳಕೆ ಮಾಡಲಾಗುತ್ತಿದೆ ಉಳಿದ 14 ಕೋಟಿ ರೂ.ಗಳಲ್ಲಿ ನೀರು ಸರಬರಾಜು ಮಾಡುವ ವಿವಿಧ ರೀತಿಯ ವಸ್ತುಗಳನ್ನು ಖರೀದಿ ಮಾಡಲಾಗಿದೆ ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.
ಚಿತ್ರದುರ್ಗಕ್ಕೆ ಕೆಳಗೋಟೆ, ಐಯುಡಿಪಿ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ವಿವಿಸಾಗರದಿಂದ ಕುಡಿಯುವ ನೀರು ಸರಬರಾಜಾಗುತ್ತಿತು ಆದರೆ ಈಗ ವಿವಿಸಾಗರದಲ್ಲಿ ಕುಡಿಯುವ ನೀರಿನ ಸಂಗ್ರಹ ತಳವನ್ನು ಸೇರಿದ್ದರಿಂದ ಅಲ್ಲಿನ ನೀರು ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ ಇದರಿಂದ ಕುಡಿಯುವ ನೀರಿನ ತೊಂದರೆಯನ್ನು ನೀಗಿಸುವ ಸಲುವಾಗಿ ಇನ್ನೂ 20 ರಿಂದ 25 ಕೊಳವೆಬಾವಿಗಳನ್ನು ಕೊರೆಯಿಸಲಾಗುವುದು,
ರಾಜ್ಯದ ಬೇರೆ ಕಡೆಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಇದೆ ಶಾಸಕರ ನಿಧಿ ಸೇರಿದಂತೆ ವಿವಿಧ ಯೋಜನೆಡಿ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ ಅದರೆ ಕೆಲವು ಬಡಾವಣೆಗಳಲ್ಲಿ ನಾವು ಶಾಸಕರನ್ನು ಕೇಳಿ ಕೊಳವೆ ಬಾವಿಗಳನ್ನು ಕೊರೆಯಿಸಿದ್ದೇವೆ ನಿಮಗೆ ನೀರನ್ನು ನೀಡುವುದಿಲ್ಲ ಎಂಭ ಮಾತುಗಳು ಕೇಳಿ ಬರುತ್ತಿದೆ ಆದರೆ ಈ ರೀತಿಯಾಗಿ ಮಾಡುವುದು ಸರಿಯಲ್ಲ ನೀರನ್ನು ಅಕ್ಕ-ಪಕ್ಕದವರಿಗೂ ಸಹಾ ನೀಡುವಂತೆ ಶಾಸಕರು ಜನತೆಯಲ್ಲಿ ಮನವಿ ಮಾಡಿ ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರನ ನಿರ್ವಹಣೆಯನ್ನು ಉತ್ತಮವಾಗಿ ನಿಭಾಯಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಈ ಸಂದರ್ಭದಲ್ಲಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಶ್ರೀಮತಿ ಅನುರಾಧ ರವಿಶಂಕರ್, ಶ್ರೀನಿವಾಸ್, ದಾವೂದ್, ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ, ಬಾಜಪ ಮುಖಂಡ ಎಂ.ಪಿ.ಗುರುರಾಜ್, ನವೀನ್ ಚಾಲುಕ್ಯ ಸೇರಿದಂತೆ ಬಡಾವಣೆಯ ಮುಖ್ಯಸ್ಥರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ