ಪಾವಗಡ;-
ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿರುವ ಶೆಂಗಾ ಮಿಲ್ ನ ಮಾಲೀಕನ ವಿರುದ್ದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ತಹಶೀಲ್ದಾರ್ ಕಛೇರಿ ಗೆ ಮುತ್ತಿಗೆ ಹಾಕಿ, ತಹಶೀಲ್ದಾರ್ ಗೆ ದೂರು ಸಲ್ಲಿಸಿದ ಘಟನೆ ಶುಕ್ರವಾರ ಜರಗಿದೆ.
ಮುತ್ತಿಗೆಯಲ್ಲಿ ರೈತ ಸಂಘದ ಅಧ್ಯಕ್ಷ ಜಿ. ನರಸಿಂಹರೆಡ್ಡಿ ಮಾತನಾಡಿ,ಪಟ್ಟಣದ ಮಾರುತಿ ಟ್ರೇಡರ್ಸ್ ನ ಮಾಲೀಕರಿಂದ ತಾಲ್ಲೂಕಿನ ಚಿಕ್ಕಹಳ್ಳಿ ಗ್ರಾಮದ ಸುಮಾರು 10 ರೈತರು ಕಳಪೆ ಸೇಂಗಾ ಬೀಜ ಪಡೆದುಕೊಂಡಿದ್ದು, ನೀರಾವರಿಯಲ್ಲಿ ಬೀಜ ಹಾಕಿದ್ದು ಬೀಜಮೊಳಕೆ ಒಡೆಯದೆ ಹಾಳಾಗಿದೆ ತಾಲ್ಲೂಕಿನಲ್ಲಿರುವ ಮಿಲ್ ಮಾಲೀಕರು ಗುಜರಾತ್ ಮತ್ತು ರಾಜಸ್ಥಾನ ದಿಂದ ಕಳಪೆ ಬೀಜ ತರಿಸಿ ರೈತರಿಗೆ ಮೋಸ ಮಾಡುತ್ತಿದ್ದು, ಕೂಡಲೆ ಮಾರುತಿ ಟ್ರೇಡರ್ಸ್ ವಿರುದ್ದ ಕ್ರಮ ತೆಗೆದುಕೊಳ್ಳಬೇಕೇಂದು ಒತ್ತಾಯಿಸಿದರು.
ಬಾಧಿತ ರೈತ ಸುರೇಶ್ ಮಾತನಾಡಿ ನಾನು ಸೇರಿದಂತೆ ಸುಮಾರು 10 ರೈತರು 1 ಕ್ವಿಂಟಾಲ್ ಗೆ 10.500 ಗೆ ಹಣಕೊಟ್ಟು ಶೇಂಗಾಬೀಜವನ್ನು ಪಡೆದುಕೊಂಡಿದ್ದು, ನೀರಾವರಿಯಲ್ಲಿ ಬೀಜ ಹಾಕಿದ್ದು, 15 ದಿನಕಳೆದರೂ ಮೊಳಕೆಯೊಡೆಯದೆ ಇದ್ದು, ಕಳಪೆ ಬೀಜ ಆಗಿದ್ದರಿಂದ ನಮಗೆ ನಷ್ಟವುಂಟಾಗಿದೆ ಶೇಂಗಾ ಮೀಲ್ ನ್ನು ಸಮಗ್ರ ತನಿಖೆ ನಡೆಸಿ ಕೂಡಲೆ ನಮಗೆ ನಷ್ಟ ಪರಿಹಾರ ಕೊಡಿಸಿಕೊಡಬೇಕೆಂದು ಓತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ