ತಿಪಟೂರು
ನಗರದ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಜಮೀನು ಆರ್.ಟಿ.ಸಿ. ತಿದ್ದುಪಡಿಗಾಗಿ ಸೂಕ್ತ ದಾಖಲೆ ಕೊಟ್ಟು ಕಳೆದ 8 ತಿಂಗಳಿನಿಂದ ಅಲೆದಾಡಿದರು ಅಲ್ಲಿನ ಸಿಬ್ಬಂದಿಗಳು ಆರ್.ಟಿ.ಸಿ ತಿದ್ದುಪಡಿಮಾಡಲು ಅಲೆದಾಡಿಸುತ್ತಿದ್ದಾರೆಂದು ನಗರದ ವಿದ್ಯಾನಗರದ ಬಿ.ಮಲ್ಲಿಕಾರ್ಜುನಯ್ಯ ಎ.ಸಿ.ಬಿ ಇನ್ಸ್‍ಪೆಕ್ಟರ್ ಹಾಲಪ್ಪನವರಿಗೆ ದೂರು ನೀಡಿದರು.
ತಾಲ್ಲೂಕು ಪಂಚಾಯಿತಿ ಕಛೇರಿಯ ಸಭಾಂಗಣದಲ್ಲಿ ಇಂದು ನಡೆದ ಭ್ರಷ್ಟಾಚಾರ ನಿಗ್ರಹದಳದ ವತಿಯಿಂದ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ದೂರು ನೀಡಿದ ಬಿ ಮಲ್ಲಿಕಾರ್ಜುನಯ್ಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಾಸಿಹಳ್ಳಿ ಗ್ರಾಮದ ಸರ್ವೇನಂ 2 ಮತ್ತು 3 ರಲ್ಲಿ ನಮ್ಮ ಜಮೀನಿದ್ದು ಜಮೀನಿನ ಆರ್.ಟಿ.ಸಿ. ತಿದ್ದುಪಡಿಗಾಗಿ 31-07-2018ರಲ್ಲಿ ಅಂದಿನ ಉಪವಿಭಾಗಧಿಕಾರಿ ಕೃಷ್ಣಮೂರ್ತಿಯವರಿಗೆ ತ್ತಿದ್ದುಪಡಿಮಾಡಿಕೊಡುವಂತೆ ಮನವಿ ಸಲ್ಲಿಸಿದ್ದು ಎ.ಸಿ.ಯವರು ಅಲ್ಲಿದ್ದ ಸಿಬ್ಬಂದಿಗೆ ಆದೇಶನೀಡಿದರೂ ಸಹ ಕಂಪ್ಯೂಟರ್‍ನಲ್ಲಿ ಆರ್.ಟಿ.ಸಿ. ಮಾಹಿತಿ ಸೇರಿಸಲು ಕಳೆದ 8 ತಿಂಗಳಿನಿಂದಲೂ ನಮ್ಮನ್ನು ಅಲೆಸುಸಿತ್ತಾದ್ದಾರೆಂದು ಉಪವಿಭಾಗಧಿಕಾರಿಗಳ ಸಿಬ್ಬಂದಿಗಳ ವಿರುದ್ದ ಎ.ಸಿ.ಬಿ ಇನ್ಸ್‍ಫೆಕ್ಟರ್ ಹಾಲಪ್ಪನವರಿಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದರು.
ಇದಲ್ಲದೇ ಹಂದನಕೆರೆ ಹೋಬಳಿ ದಾಸಿಕಟ್ಟೆಯಲ್ಲಿ ಅತಿಕ್ರಮಣವಾಗಿ ಕೆರೆ ಒತ್ತುವರಿಯಾಗಿದ್ದು ಈ ಸಂಬಂಧ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅವರು ದೂರಿದ್ದಾರೆ.ತಿಪಟೂರಿನ ರಮೇಶ್ ಎಂಬುವವರು ತಾಲ್ಲೂಕು ಪಂಚಾತಿಯಲ್ಲಿ ಈ ಖಾತೆಮಾಡಲು ತುಂಬಾ ಸತಾಯಿಸುತ್ತಿದ್ದಾರೆಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ವಿರುದ್ದ ದೂರು ನೀಡಿದರು.
ಒಟ್ಟು 3 ದೂರುಗಳು ಬಂದಿವೆ ಆದರೆ ತಾಲ್ಲೂಕಿನ ಜನತೆ ದೂರುಗಳನ್ನು ನೀಡದೇ ಇರುವುದು ಭ್ರಷ್ಟಾಚಾರ ವಿಲ್ಲವೆಂದಲ್ಲ ದೂರುಗಳನ್ನು ಅಲ್ಲಿಯೇ ಪರಿಹರಿಸಿಕೊಳ್ಳುತ್ತಿದ್ದು ಭ್ರಷ್ಟಾಚಾರಕ್ಕೆ ಇಂಬು ನೀಡುತ್ತಿರಬಹುದೇನೋ? ಆದ್ದರಿಂದ ದೂರುಗಳನ್ನು ನೀಡುತ್ತಿಲ್ಲವೆಂದು ಎ.ಸಿ.ಬಿ ಇನ್ಸ್‍ಫೆಕ್ಟರ್ ಹಾಲಪ್ಪ ತಿಳಿಸಿದರು.