ಪೊಲೀಸ್ ಟ್ವೀಟರ್ ಖಾತೆಗೆ ದೂರು ನೀಡುವವರ ಸಂಖ್ಯೆ ಹೆಚ್ಚಳ

ಬೆಂಗಳೂರು:

     ಮೋಸ ವಂಚನೆ ಸುಲಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ಹೀಗೆ ಹತ್ತು ಹಲವು ಅಪರಾಧ ಕೃತ್ಯಗಳ ಬಗ್ಗೆ ಬೆಂಗಳೂರು ಪೊಲೀಸ್ ಟ್ವೀಟರ್ ಖಾತೆಗೆ ದೂರು ನೀಡುವವರ ಸಂಖ್ಯೆ ಹೆಚ್ಚುತ್ತಿದೆ.

      ಪೊಲೀಸ್ ಠಾಣೆಗೆ ಅಲೆಯುವುದನ್ನು ತಪ್ಪಿಸಲು ಅಪರಾಧ ಪ್ರಕರಣಗಳಲ್ಲಿ ಆನ್ಯಾಯಕ್ಕೊಳಗಾದ ಬಹುತೇಕ ಮಂದಿ ಸಾಮಾಜಿಕ ಜಾಲತಾಣ ಮೂಲಕವೇ ಬೆಂಗಳೂರು ಪೊಲೀಸ್ ಟ್ವೀಟರ್ ಹಾಗೂ ಫೇಸ್ ಬುಕ್ ಖಾತೆಗಳ ಮೂಲಕ ದೂರು ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡುತ್ತಿದ್ದಾರೆ.

ಲಕ್ಷಾಂತರ ಮಂದಿ

     ಸಾಮಾಜಿಕ ಜಾಲತಾಣ ನಿರ್ವಹಣೆಗಾಗಿಯೇ 2014 ರಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ತೆರೆದು ಮತ್ತೆ ಅದನ್ನು 2017 ರಲ್ಲಿ ಮೇಲ್ದರ್ಜೆಗೇರಿಸಿ ದೂರು ನೀಡುವ ಬಗ್ಗೆ ನಿರಂತರ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಸಿಟಿ ಪೆಲೀಸ್ ಟ್ವೀಟರ್ ಅಕೌಂಟ್‍ಗೆ ಇಂದು ಲಕ್ಷಾಂತರ ಮಂದಿ ಹಿಂಭಾಲಕ(ಫಾಲೋಹರ್)ರು ಸೃಷ್ಟಿಯಾಗಿದ್ದಾರೆ.

ಯುವಕರು ಹೆಚ್ಚು ದೂರು

      ಸಾಮಾಜಿಕ ಜಾಲತಾಣಗಳಿಗೆ ದೂರು ನೀಡುವವರು ಬಹುತೇಕರು 20 ವರ್ಷದಿಂದ 35 ವರ್ಷದ ಯುವ ಸಮುದಾಯದವರಾಗಿದ್ದಾರೆ ಕ್ಯಾಬ್ ಚಾಲಕರ ದುರ್ವರ್ತನೆ , ಲೈಂಗಿಕ ಕಿರುಕುಳ, ವಂಚನೆಯಂತಹ ದೂರುಗಳೇ ಹೆಚ್ಚಾಗಿ ಬರುತ್ತಿವೆ.

     ಬರುವ ದೂರುಗಳನ್ನು ಆಯಾ ಠಾಣಾ ವ್ಯಾಪ್ತಿಗೆ ಶಿಫಾರಸ್ಸು ಮಾಡುತ್ತೇವೆ. ಸಲಹೆ, ದೂರು ಹಾಗೂ ಮಾಹಿತಿ ಕೋರಿ ದಿನಕ್ಕೆ 20 ರಿಂದ 25 ದೂರುಗಳ ಬರಲಿವೆ ಎಂದು ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಡಯಲ್ ನಮ್ಮ 100 ಗೆ ಪ್ರತಿನಿತ್ಯ 7 ರಿಂದ 8 ಸಾವಿರ ಕರೆಗಳು ಬರಲಿದ್ದು, ಇದರಲ್ಲಿ ಬಹುತೇಕ ವಿಚಾರಣೆ ಹಾಗೂ ಮಾಹಿತಿ ಕೇಳುವವರ ಸಂಖ್ಯೆಯೇ ಅಧಿಕವಾಗಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ಸುಮಾರು 700 ರಿಂದ 800 ಕರೆಗಳು ಬರಲಿವೆ. ಕರೆ ಬಂದ ಕ್ಷಣ ಮಾತ್ರದಲ್ಲೇ ತೊಂದರೆಗೀಡಾದ ಐದಾರು ನಿಮಿಷಗಳಲ್ಲಿ ಸ್ಥಳಗಳಿಗೆ ಹೊಯ್ಸಳ ತೆರಳುತ್ತದೆ. ಇದಕ್ಕಾಗಿಯೇ ನಗರದಲ್ಲಿ 221 ಹೊಯ್ಸಳ ಹಾಗೂ 51 ಪಿಂಕ್ ಹೊಯ್ಸಳ ಸೇರಿದಂತೆ ಒಟ್ಟು 272 ಹೊಯ್ಸಳ ವಾಹನಗಳಿವೆ. ಸರಾಸರಿ ಎಂಟೂವರೆ ನಿಮಿಷದೊಳಗೆ ಘಟನೆ ನಡೆದ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳಲಾಗುತ್ತದೆ.

ಮಹಿಳಾ ಸುರಕ್ಷಾ ಆ್ಯಪ್

     ಹೆಣ್ಣು ಮಕ್ಕಳ ರಕ್ಷಣೆಗಾಗಿಯೇ ತೆರೆದಿರುವ ಸುರಕ್ಷಾ ಆ್ಯಪ್‍ನ್ನು ಸುಮಾರು 84 ಸಾವಿರ ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಅಪಾಯ ಸಂದರ್ಭಗಳಲ್ಲಿ, ಕಿರುಕುಳ, ವರದಕ್ಷಿಣೆ ತೊಂದರೆ ಸೇರಿದಂತೆ ಮಹಿಳೆಯರಿಗೆ ಎದುರಾಗುವ ತೊಂದರೆಗಳ ಬಗ್ಗೆ ಸುರಕ್ಷಾ ಆ್ಯಪ್ ಮೂಲಕ ದೂರು ನೀಡಲು ಸಹಕಾರಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap