ಶಿರಾ:
ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಕಾಂಪೌಂಡ್ ಗೋಡೆಯ ನಿರ್ಮಾಣದ ನೆಪದಲ್ಲಿ ಗುತ್ತಿಗೆದಾರರು ಲಕ್ಷಾಂತರ ರೂಗಳನ್ನು ಗುಳುಂ ಮಾಡ ಹೊರಟಿದ್ದು ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಶಿರಾ ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿನ ಸಪ್ತಗಿರಿ ಬಡಾವಣೆಯ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಆಸ್ಪತ್ರೆಗೆ ಹೊಂದಿಕೊಂಡಂತೆ ಈ ಹಿಂದೆ ನಿರ್ಮಿಸಲಾದ ಸುಮಾರು 8 ಅಡಿ ಅಳತೆಯ ಹಳೆಯ ಕಾಂಪೌಂಡ್ ಇದ್ದು ಕಳೆದ ಎರಡು ದಿನದಿಂದ ಹಳೆಯ ಕಾಂಪೌಂಡ್ನ್ನು ಎರಡು ಅಡಿ ಎತ್ತರಿಸಿ ಹೊಸ ಕಾಂಪೌಂಡ್ ನಿರ್ಮಾಣ ಮಾಡಿದ ರೀತಿಯಲ್ಲಿ ಬಿಲ್ ಪಾವತಿಸಿಕೊಳ್ಳಲು ಕಸರತ್ತು ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಾಮಗಾರಿಯನ್ನು ಕೈಗೊಂಡ ಕೂಡಲೇ ಗುತ್ತಿಗೆದಾರರು ಕಳೆಯ ಕಾಂಪೌಂಡಿನ ಮೇಲೆ ಎರಡು ಅಡಿ ಎತ್ತರದ ಸಿಂಎಂಟ್ ಗೋಡೆಯ ನಿರ್ಮಾಣ ಮಾಡಿದಾಗ ಸದರಿ ಕಾಮಗಾರಿ ಸಾರ್ವಜನಿಕರಿಗೆ ಕಣ್ಣು ಕುಕ್ಕಿತಲ್ಲದೆ ಹಳೆಯ ಕಾಂಪೌಂಡ್ ಮೇಲೆ ಗೋಡೆ ಕಟ್ಟಿ ಬಿಲ್ ತಯಾರಿ ನಡೆದಿದೆ ಎಂಬ ಸುಳಿವು ಸಿಕ್ಕಾಗ ಕೂಡಲೇ ಎಚ್ಚೆತ್ತ ಗುತ್ತಿಗೆದಾರರು ಹಳೆಯ ಗೋಡೆ ಹಾಗೂ ಮೇಲೆ ನಿರ್ಮಿಸಿದ ಹೊಸ ಗೋಡೆ ಎರಡನ್ನೂ ಸೇರಿಸಿ ಸಿಮರೆಂಟ್ ಪ್ಲಾಸ್ಟಿಂಗ್ ಮಾಡಿ ಗೋಡೆಯ ನೆಪದಲ್ಲಿ ಬಿಲ್ ಪಾವತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಮಣ್ಣಿನ ಕಾಂಪೌಂಡ್ ಗೋಡೆಯನ್ನು ಎರಡು ಅಡಿ ಎತ್ತರಿಸಿರುವ ಗುತ್ತಿಗರೆದಾರರು ಹಳೆಯ ಕಾಂಪೌಂಡ್ಗೆ ಸಿಮೆಂಟ್ನಿಂದ ಪ್ಲಾಸ್ಟಿಂಗ್ ಹಾಕಿ ಹೊಸ ಕಾಂಪೌಂಡ್ ನಿರ್ಮಾಣ ಮಾಡಿದಂತೆ ಬಿಲ್ ಪಾವತಿ ಮಾಡಿಕೊಳ್ಳಲು ಹೊರಟಿದ್ದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಇಂತಹ ಅಕ್ರಮ ಕಣ್ಣೆದುರು ನಡೆಯುತ್ತಿದ್ದರೂ ಮೌನವಾಗಿದ್ದು ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ