ಕಾಂಗ್ರೆಸ್-ಜೆಡಿಎಸ್ ನಾಯಕರು ಭಂಡರು : ಶ್ರೀರಾಮುಲು

ಹೊಸಪೇಟೆ :

       ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿಂದಾಗಿ ರಾಜ್ಯದಲ್ಲಿ ಬಿಜೆಪಿಗೆ 28ರಲ್ಲಿ 25 ಸ್ಥಾನಗಳು ಹಾಗು 1 ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು 26 ಸ್ಥಾನ ಲಭಿಸಿವೆ. ಜನ ಸಮ್ಮಿಶ್ರ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಒತ್ತಾಯಿಸಿದರು.

       ತಾಲೂಕಿನ ಕಮಲಾಪುರ ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ಕಮಲಾಪುರ ಪ.ಪಂ.ಚುನಾವಣೆ ನಿಮಿತ್ತ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನರೇಂದ್ರ ಮೋದಿಯವರ ಸುನಾಮಿಯಿಂದಾಗಿ ಅತಿ ಹೆಚ್ಚು 304 ಸ್ಥಾನಗಳು ಬಂದಿವೆ. ರಾಜ್ಯದಲ್ಲೂ ಸಹ ಅವರ ಅಲೆಯಿಂದಾಗಿ 28ರಲ್ಲಿ 26 ಸ್ಥಾನಗಳನ್ನು ಗೆಲ್ಲಲಾಗಿದೆ. ಯಾವುದೇ ಕಾರಣಕ್ಕೂ ಈ ಸಮ್ಮಿಶ್ರ ಸರ್ಕಾರ ಮುಂದುವರೆಯಬಾರದು. ಜನ ಈ ಸಮ್ಮಿಶ್ರ ಸರ್ಕಾರವನ್ನು ತಿರಸ್ಕರಿಸಿದ್ದರೂ ಸಹ ಈ ಕಾಂಗ್ರೆಸ್-ಜೆಡಿಎಸ್ ಭಂಡರು ರಾಜಿನಾಮೆ ನೀಡಿಲ್ಲ. ಕೂಡಲೇ ಸಿಎಂ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

      ಶಾಸಕ ರಮೇಶ ಜಾರಕಿಹೊಳಿಯವರು ಬಿಜೆಪಿಗೆ ಸೇರ್ತಾರಾ ? ಎಂಬ ಸುದ್ದಿಗಾರರ ಪ್ರಶ್ನೆಗೆ “ ಈ ಕುರಿತು ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರು ಮಾತನಾಡಿದರೆ ಸೂಕ್ತ. ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾವಂತೂ ಆಪರೇಷನ್ ಕಮಲ ಮಾಡುವುದಿಲ್ಲ. ಮುಂದೆ ಏನು ಮಾಡಬೇಕು ಎಂಬುದನ್ನು ಯಡಿಯೂರಪ್ಪನವರೇ ನಿರ್ಧಾರಿಸಲಿದ್ದಾರೆ.

      ಯಾರಿಗೂ ಚುನಾವಣೆಗೆ ಹೋಗುವುದು ಬೇಕಿಲ್ಲ. ಕಾಂಗ್ರೆಸ್-ಜೆಡಿಎಸ್ ಪಕ್ಷದ ಅಸಮಾಧಾನಿತ ಶಾಸಕರು ಪಕ್ಷಕ್ಕೆ ಬರುವ ನಿರೀಕ್ಷೆ ಇದೆ. ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲು ಯಡಿಯೂರಪ್ಪನವರು ಅಧಿಕಾರಕ್ಕೆ ಬಂದರೆ ಒಳ್ಳೆಯದು ಎಂಬುದು ನಮ್ಮ ಅಭಿಲಾಶೆ ಎಂದು ತಿಳಿಸಿದರು.

       ಕಮಲಾಪುರ-ಹಂಪಿ ಪ್ರವಾಸೋಧ್ಯಮ ಸ್ಥಳಗಳಾಗಿದ್ದರಿಂದ ಈ ಭಾಗದಲ್ಲಿ ಕುಡಿವ ನೀರು, ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲವಲ್ಲಾ ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ನಾನು ಸಂಸದನಾಗಿದ್ದಾಗಿ ಹಂಪಿ ಮುಖ್ಯ ಬಜಾರ್ ಅಭಿವೃದ್ದಿ, ನಾನಾ ಗೋಪುರಗಳ ದುರಸ್ತಿಗಾಗಿ 150 ಕೋಟಿ ಅನುದಾನ ತಂದು ಅಭಿವೃದ್ದಿ ಪಡಿಸಲಾಗಿತ್ತು.

       ನನ್ನ ಕೈಲಾದ ಮಟ್ಟಿಗೆ ಶ್ರಮಿಸಿದ್ದೇನೆ. ಈ ಬಾರಿ ದೇವೇಂದ್ರಪ್ಪರ ನೇತೃತ್ವದಲ್ಲಿ ಹಂಪಿ ಅಭಿವೃದ್ದಿ, ಈ ಭಾಗದಲ್ಲಿ ಕಬ್ಬಿನ ಕಾರ್ಖಾನೆ ಪ್ರಾರಂಭಿಸುವುದು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಲಾಗುವುದು ಎಂದರು.

        ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರಕ್ಕೆ ಧಮ್ಮಿಲ್ಲ. ಈ ಸರ್ಕಾರಕ್ಕೆ ಪಾಶ್ರ್ಯುವಾಯು ಬಡೆದಿದೆ. ಹೀಗಾಗಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಪಕ್ಕದಲ್ಲೇ ತುಂಗಭದ್ರ ನದಿ ಇದ್ದರೂ ಕುಡಿಯುವ ನೀರಿಗೆ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

        ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ, ಮುಖಂಡರಾದ ಕವಿರಾಜ ಅರಸ, ಮಂಡಲ ಅಧ್ಯಕ್ಷ ಅನಂತ ಪಧ್ಮನಾಭ, ಬಸವರಾಜ ನಾಲತವಾಡ, ಗುದ್ಲಿ ಪರಶುರಾಮ, ಶಂಕರಮೇಟಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link