ತುಮಕೂರು:
ಕ್ರೀಡಾ ಚಟುವಟಿಕೆಗಳಿಂದ ದೇಹದಾಡ್ಯತೆಯನ್ನು ಗಳಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬಹುದು ಖ್ಯಾತ ಫುಟ್ಬಾಲ್ ಆಟಗಾರ ಹಾಗೂ ತರಬೇತುದಾರರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶ್ರೀ ಗುರುಪ್ರಸಾದ್ ಅವರು ಹೇಳಿದರು.
ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ಹಾಕಿಮಾಂತ್ರಿಕ ಧ್ಯಾನ್‍ಚಂದ್ ಬದುಕು ಹಾಗೂ ಕ್ರೀಡೆ ಸಾಧನೆಗಳನ್ನು ವಿವರಿಸಿದರು. ಮೂರು ಒಲಂಪಿಕ್‍ಗಳಲ್ಲಿ ಭಾರತಕ್ಕೆ ಚಿನ್ನದ ಪದಕಗಳಿಸಿಕೊಟ್ಟ ಧ್ಯಾನ್‍ಚಂದ್ ಜರ್ಮನಿಯ ಅಡಾಲ್ಪ್ ಹಿಟ್ಲರ್ ಅವರ ಆಹ್ವಾನವನ್ನು ತಿರಸ್ಕರಿಸಿದ ಅಪ್ರತಿಮ ದೇಶಭಕ್ತ ಎಂದು ಬಣ್ಣಿಸಿದರು.
ಅವರ ಜನ್ಮ ದಿನದಂದು ಕ್ರೀಡಾಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿರುವ ಕ್ರೀಡಾಪಟುಗಳು ಹಾಗೂ ತರಬೇತುದಾರರನ್ನು ಗೌರವಿಸುವ ಸ್ತುತ್ಯರ್ಹ ಕೆಲಸ ಮಾಡುತಿದೆ ಎಂದು ಶ್ಲಾಘಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬೆಡ್ನಿಗೊ ಸುನಿಲ್ ಅವರು ಮಾತನಾಡಿ 2012 ರಿಂದ ಕ್ರೀಡಾ ದಿನಾಚರಣೆಯನ್ನು ದೇಶದಲ್ಲಿ ಕ್ರೀಡಾಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡುವ ದೆಸೆಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ತಾರತಮ್ಯ, ಬೇದಭಾವ ರಹಿತ ನಿರ್ಮಲ ಕ್ಷೇತ್ರ ಕ್ರೀಡಾಕ್ಷೇತ್ರವಾಗಿದೆ ಉತ್ತಮ ಆರೋಗ್ಯ ಮತ್ತು ಸಮಚಿತ್ತವನ್ನು ಪಡೆಯಲು ಕ್ರೀಡಾ ಚಟುವಟಿಕೆಗಳು ಬದುಕಿಗೆ ಅತ್ಯಗತ್ಯವಾದುದುದಾಗಿದೆ. ಧ್ಯಾನ್‍ಚಂದ್ ರಂತಹ ಪ್ರತಿಭೆಗಳು ತಮ್ಮ ಅಪ್ರತಿಮ ಸಾಧನೆಯ ಕಾರಣದಿಂದ ಇಂದು ನಮ್ಮ ಮಧ್ಯೆ ಜೀವಂತವಾಗಿದ್ದಾರೆ. ನಾವು ಅಂತಹ ಚೇತನಗಳನ್ನು ಕ್ರೀಡಾದಿನಾಚರಣೆಯ ಸಂದರ್ಬದಲ್ಲಿ ಸ್ಮರಿಸಬೇಕಾದುದು ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಅಜಿತ್‍ಕುಮಾರ್ ಸ್ವಾಗತಿಸಿ ನಿರೂಪಿಸಿ, ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ. ಎಂ. ಮಹದೇವು, ಪ್ರೊ. ಜಯಪ್ರಕಾಶ್, ಡಾ. ಸದಶಿವಯ್ಯ, ಪ್ರೊ. ನೂರ್ ಶಹೀನಾ ಬಾನು, ಪ್ರೊ. ಸುದರ್ಶನ್, ಪ್ರೊ. ಶಾಂತಲಾ.ಕೆ ಪ್ರೊ. ಸುನಿಲ್ ರಾಜ್. ಜೆ. ಪ್ರೊ. ರಾಜ್ ಗೋಪಾಲ್, ಶ್ರೀ ರಾಜು, ಹರ್ಷ ಭಾಗವಹಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ