ತುರುವೇಕೆರೆ
ಅತ್ಯುತ್ತಮ ಕಲಾವಿದ ಹಾಗೂ ರಾಜಕೀಯ ಮುತ್ಸದ್ದಿ ದಿವಂಗತ ಅಂಬರೀಶ್ ಅವರ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಪಟ್ಟಣದ ಹಿರಣ್ಣಯ್ಯ ರಂಗ ಮಂದಿರದಲ್ಲಿ ಮಂಗಳವಾರ ಮಧ್ಯಾಹ್ನ ಅಂಬರೀಶ್ ಸ್ವಯಂ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿ ಬಳಗದ ವಿ.ಬಿ.ಸುರೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮತನಾಡಿದ ಅವರು, ಸುಮಾರು 208 ಚಲನಚಿತ್ರಗಳಲ್ಲಿ ನಟಿಸಿ ಅತ್ಯುತ್ತಮ ಕಲಾವಿದರಾಗಿ ಹಾಗೂ ರಾಜಕೀಯ ರಂಗದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಜನ ಮಾನಸದಲ್ಲಿ ಅಜರಾಮರರಾಗಿದ್ದಾರೆ. ಅಂತಹ ಧೀಮಂತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಡಿ.4 ರ ಮಂಗಳವಾರ ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೆ ಸಂದರ್ಭದಲ್ಲಿ ಡಾ|| ರಾಜ್ಕುಮಾರ್, ಶಂಕರ್ನಾಗ್, ಅನಂತ್ ಕುಮಾರ್, ಜಾಫರ್ ಷರೀಫ್, ವಿಷ್ಣು ಅವರಿಗೂ ಶ್ರದ್ದಾಂಜಲಿ ಸಲ್ಲಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸಹಸ್ರಾರು ಮಂದಿ ಅಭಿಮಾನಿಗಳು ಪಾಲ್ಗೊಳ್ಳಲಿದ್ದು ಬಂದಂತಹ ಅಭಿಮಾನಿಗಳಿಗೆ ಸಸ್ಯಾಹಾರಿ ಹಾಗೂ ಮಾಂಸಹಾರಿ ಎರಡು ಕಡೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಡಿಜೆ ಸೌಂಡ್ನಿಂದ ಅಂಬರೀಶ್ ಅವರ ಹಾಡುಗಳನ್ನು ಭಿತ್ತರಿಸುವ ಜೊತೆಗೆ ಸಾಂಸ್ಕತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಭೇದ ಭಾವ ಮರೆತು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ಅವರ ಆತ್ಮಕ್ಕೆ ಶಾಂತಿ ಕೋರಬೇಕಾಗಿ ಅಂಬರೀಶ್ ಸ್ವಯಂ ಅಭಿಮಾನಿ ಬಳಗವು ವಿನಂತಿಸಿದೆ.
ಈ ಸಂದರ್ಭದಲ್ಲಿ ಸ್ವಯಂ ಅಭಿಮಾನಿ ಬಳಗದ ನಾಗಲಾಪುರ ಮಂಜಣ್ಣ, ಜಾನಿ, ಡಿ.ಕೆ.ಶಂಕರ್, ಗಿರೀಶ್, ಜನಾರ್ಧನ್, ತ್ರಿಜಿ, ಟಿಂಬರ್ ಅನಿಲ್, ಅಂಜನ್, ಭರತ್, ಶರತ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ