ಸಚಿವದ್ವಯರ ಭಾವಚಿತ್ರಕ್ಕೆ ಪುಷ್ಪನಮನ

ಹಾನಗಲ್ಲ :

       ಚಿತ್ರರಂಗದ ಭೀಷ್ಮ, ಕಲಿಯುಗದ ಕರ್ಣ ರೆಬೆಲ್‍ಸ್ಟಾರ್ ಅಂಬರೀಷ ಹಾಗೂ ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ ಶರೀಫ್ ಅವರ ನಿಧನಕ್ಕೆ ಹಾನಗಲ್ಲ ತಾಲೂಕು ಕಾಂಗ್ರೇಸ್ ಪಕ್ಷ ಸಂತಾಪ ಸೂಚಿಸಿದೆ.

       ಸೋಮವಾರ ಹಾನಗಲ್ಲ ಪಟ್ಟಣದ ಕಾಂಗ್ರೇಸ್ ಕಾರ್ಯಾಲಯದಲ್ಲಿ ಮಾಜಿ ಸಚಿವ ಮನೋಹರ ತಹಶೀಲ್ದಾರ ನೇತೃತ್ವದಲ್ಲಿ  ಸಚಿವದ್ವಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್.ಎಸ್.ಪಾಟೀಲ, ನಗರಾಧ್ಯಕ್ಷ ಎಂ.ಕೆ.ಹುಬ್ಬಳ್ಳಿ, ನಾಗಪ್ಪ ಸವದತ್ತಿ, ಸಿ.ಎಸ್.ಬಡಿಗೇರ, ಕೆ.ಎಲ್.ದೇಶಪಾಂಡೆ, ವಿದ್ಯಾಶಂಕರ ದೇಶಪಾಂಡೆ, ಈಶ್ವರಪ್ಪ ತಿರುಮಲೆ, ಅಭಿನವ ಪಾಟೀಲ, ಶಂಕ್ರಣ್ಣ ಪ್ಯಾಟಿ, ಖಾದರಮೋಹಿದ್ದೀನ ಶೇಖ, ನಿಯಾಜ ಶೇಖ, ಖುರ್ಷಿದ ಹುಲ್ಲತ್ತಿ, ಶಕೀಲ ಬಾಳೂರ, ಸಂತೋಷ ಸುಣಗಾರ, ಏಳುಕೋಟೆಪ್ಪ ಹಾವಳೇರ, ಎಂ.ಆರ್.ಗುತ್ತಲ, ನಜೀರ ಗಿರಸಿನಕೊಪ್ಪ, ಬಸನಗೌಡ ಪಾಟೀಲ ಮೊದಲಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link