ಅಂಬರೀಶ್ ಹಾಗೂ ಜಾಫರ್ ಷರೀಫ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ

ಹಿರಿಯೂರು :

       ಚಿತ್ರರಂಗ ಹಾಗೂ ರಾಜಕಾರಣದ ದಿಗ್ಗಜರಾದ ನಟ ಅಂಬರೀಶ್ ಹಾಗೂ ಕೇಂದ್ರದ ಮಾಜಿ ರೈಲ್ವೆ ಸಚಿವ ಸಿ.ಕೆ.ಜಾಫರ್‍ಶರೀಫ್‍ರವರ ನಿಧನ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಹೇಳಿದರು.

      ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ ಚಲನಚಿತ್ರನಟ ಅಂಬರೀಶ್ ಹಾಗೂ ಕೇಂದ್ರಸಚಿವ ಜಾಫರ್‍ಶರೀಫ್‍ರವರಿಗೆ ಹಮ್ಮಿಕೊಳ್ಳಲಾಗಿದ್ದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

       ಈ ಇಬ್ಬರು ವ್ಯಕ್ತಿಗಳಿಗೂ ಚಿತ್ರದುರ್ಗಕ್ಕೂ ಅವಿನಾಭಾವ ಸಂಬಂಧವಿದೆ. ಚಿತ್ರದುರ್ಗದಲ್ಲಿ ಚಿತ್ರೀಕರಣಗೊಂಡ ನಾಗರಹಾವು ಚಿತ್ರದಲ್ಲಿ ಜಲೀಲನಾಗಿ ನಟ ಅಂಬರೀಶ್ ಚಿತ್ರರಂಗ ಪ್ರವೇಶಿಸಿದ್ದು, ಚಿತ್ರರಂಗದಲ್ಲಿ ಬೆಳೆದು ಅನಂತರ ರಾಜ್ಯಸರ್ಕಾರದಲ್ಲಿ ಸಚಿವರಾಗಿ, ಸಂಸದರಾಗಿ, ಕೇಂದ್ರಸಚಿವರಾಗಿ ಗುರುತಿಸಿಕೊಂಡರು.

        ಅದೇರೀತಿ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಜನಿಸಿ, ಕೇಂದ್ರ ರೈಲ್ವೆ ಸಚಿವರಾಗಿ ಚಿತ್ರದುರ್ಗ ಜಿಲ್ಲೆಗೆ ರೈಲ್ವೆ ಸಂಪರ್ಕ ಕಲ್ಪಿಸುವಲ್ಲಿ ಅಪಾರವಾಗಿ ಶ್ರಮಿಸಿದ ಮಾಜಿ ಕೇಂದ್ರಸಚಿವ ಜಾಫರ್‍ಶರೀಫ್‍ರವರ ನಿಧನ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಈ ಇಬ್ಬರ ಆತ್ಮಕ್ಕೆ ಭಗವಂತ ಶಾಂತಿನೀಡಲಿ ಎಂದು ಪ್ರಾರ್ಥಿಸಿದರು.

        ಈ ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿಯಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಮೋಹಸೀನಫಿರ್ದೋಸ್, ರಜೀಯಬೇಗಂ, ಉಮೇಶ್, ಪಿ.ಎನ್.ಪರಮೇಶ್ವರಪ್ಪ, ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link