ಕೊರಟಗೆರೆ :
ಪಾವಗಡದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್(KA06F1165) ನಲ್ಲಿ ಪ್ರಯಾಣಿಕನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಮಾಕಾಳಿಗೆ ಟಿಕೆಟ್ ತೆಗೆದುಕೊಂಡು ನಂತರ ಒಂದು ರೂಪಾಯಿ ಚಿಲ್ಲರೆ ಕೊಡುವಂತೆ ನಿರ್ವಾಹಕನನ್ನು ಕೇಳಿದಾಗ ನಿರ್ವಾಹಕ ತನ್ನ ಕೈಯಲ್ಲಿದ್ದ ಟಿಕೆಟ್ ಮಿಷಿನ್ ನಿಂದ ತಲೆಗೆ ಹೊಡೆದ ಕಾರಣ ತಲೆಯಲ್ಲಿ ಗಾಯವಾಗಿ ರಕ್ತ ಬರುವುದಕ್ಕೆ ಶುರು ಮಾಡಿದೆ ಇದನ್ನು ಕಂಡ ಸಹ ಪ್ರಯಾಣಿಕರು ಬಸ್ ಅನ್ನು ರಸ್ತೆಯಲ್ಲಿಯೇ ನಿಲ್ಲಿಸಿ ನಿರ್ವಾಹಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಡಿಪೊ ಮ್ಯಾನೇಜರ್ ಹಾಗು ಪೊಲೀಸರಿಗೆ ದೂರು ನೀಡುವುದಾಗಿ ಸಂತ್ರಸ್ತ ಶಂಭಯ್ಯ ತಿಳಿಸಿದ್ದಾರೆ.ಈ ಪ್ರಕರಣದಿಂದ ಕೆಎಸ್ ಆರ್ ಟಿಸಿ ಕಂಡಕ್ಟರ್ ಗಳ ದುಂಡಾವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ