ತುಮಕೂರು-
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಯಾವಕ್ಷೇತ್ರದಲ್ಲಿ ಸ್ಪರ್ದಿಸುತ್ತಾರೋ ಆಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಮಾಣಿಕವಾಗಿ ಶ್ರಮಿಸಿ ದೇವೇಗೌಡರನ್ನು ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ರಾಹುಲ್ ಗಾಂಧಿಯವರು ಸ್ಪಷ್ಟ ಸೂಚನೆ ನೀಡಿದ್ದಾರೆ ಒಂದು ವೇಳೆ ಕಾಂಗ್ರೆಸ್ ಕಾರ್ಯಕರ್ತರು ವಿರುದ್ದವಾಗಿ ವರ್ತಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ,ಜಿ ಎಸ್ ಪರಮೇರ್ಶವರ್ ಖಡಕ್ ಎಚ್ಚರಿಕೆ ರವಾನಿಸಿದರು
ಅವರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ನಾಗವಲ್ಲಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಮಹಾರಾಷ್ಟ್ರದಲ್ಲಿ ಎಸ್ ಟಿ ಪಿ ಹಾಗು ಕಾಂಗ್ರೆಸ್ ಪಕ್ಷಗಳು 15ವರ್ಷಕಾಲ ಸಮ್ಮಿಶ್ರ ಸರ್ಕಾರ ಮಾಡಿವೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ದಿನವೇ ಲೋಕಸಭಾ ಚುನಾವಣೆ ಒಟ್ಟಾಗಿ ಎದುರಿಸುವ ಬಗ್ಗೆ ಜೆಡಿಎಸ್ ವರಿಷ್ಟರು ಹಾಗು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದೇವೆ ,ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ವರಿಷ್ಟ ಹೆಚ್ ಡಿ ದೇವೇಗೌಡ ಕಣದಲ್ಲಿದ್ದಾರೆ ದೇಶದ ಭವಿಷ್ಯದ
ಹಿತದೃಷ್ಟಿಯಿಂದ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು ಕಾಂಗ್ರೆಸ್ ವರಿಷ್ಟರಾದ ರಾಹುಲ್ಗಾಂಧಿಯವರು ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಗೆಲ್ಲಿಸಿಕೊಂಡು ಬರುವಂತೆ ಸ್ಪಷ್ಟ ಸಂದೇಶ ನೀಡಿದ್ದಾರೆ ,ಇದೊಂದು ಬಾರಿ ಕಾಂಗ್ರೆಸ್ ಕಾರ್ಯಕರ್ತರು ದೇವೇಗೌಡರ ಮುಖ ನೋಡಿ ಮತಹಾಕಿ ರಾಹುಲ್ ಗಾಂಧಿಯವರ ಗೌರವ ಉಳಿಸಬೇಕೆಂದು ಮನವಿ ಮಾಡಿದರು
ಬಸವರಾಜು ಅವರನ್ನುತಲೆ ಮೇಲೆ ಹೊತ್ತುತಿರುಗಿ ಸಂಸದರನ್ನಾಗಿ ಮಾಡಿದೆವು ಅವರು ರಾಜಕೀಯವಾಗಿ ಜನ್ಮ ನೀಡಿದ ಮಾತೃ ಪಕ್ಷ ತೊರೆದು ಬಿಜೆಪಿ ಸೇರಿ ಮೋದಿ ಹೇಳಿದಸುಳ್ಳನ್ನೇ ಮತ್ತೊಮ್ಮೆ ಹೇಳಿ ಜನರನ್ನು ಮರುಳು ಮಾಡಲು ಮುಂದಾಗಿದ್ದೀರ, ಮೋದಿ ಹೆಸರೇಳಿ ಮತ ಕೇಳುವ ನಿಮಗೆ ಜನರ ಬಳಿ ಹೋಗಿ ಮತ ಕೇಳಲು ಸ್ವಂತ ಸಾಮಥ್ರ್ಯವೇನಿದೆ ಎಂದು ಖಾರವಾಗಿ ಪ್ರಶ್ನಿಸಿದರು
ಸಚಿವ ಎಸ್ ಆರ್ ಶ್ರೀನಿವಾಸ್ ಮಾತನಾಡಿ ಪ್ರಧಾನಿ ಮೋದಿ ಇಡೀ ದೇಶ ಕಂಡ ಮಹಾನ ಸುಳ್ಳುಗಾರ ಮೋದಿ ಹೇಳಿದ ಸುಳ್ಳನ್ನೇ ಬಿಜೆಪಿ ಮುಖಂಡರು ಅಸ್ತ್ರವಾಗಿ ಬಳಸಿ ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಿದ್ದಾರೆ ,ಬಿಜೆಪಿ ನಾಯಕರಿಗೆ ಸ್ವಂತ ಸಾಮಥ್ರ್ಯವೇ ಇಲ್ಲವಾಗಿದೆ ,ತುಮಕೂರು ಜಿಲ್ಲೆಯಲ್ಲಿ ನಾಲ್ಕು ಬಾರಿ ಸಂಸದರಾಗಿದ್ದ ಬಸವರಾಜು ಅವರಿಗೂ ಮೋದಿಯ ಸುಳ್ಳೆ ಬಂಡವಾಳ , ಮೋದಿ ಹೇಳಿದ ಸುಳ್ಳನ್ನೇ ಇವರು ಪುನರುಚ್ಚರಿಸಿ ಮತ ಕೇಳುತ್ತಿದ್ದಾರೆ ,4 ಬಾರಿ ಸಂಸದರಾಗಿದ್ದವರಿಗೆ ಸ್ವಂತ ಸಾಮಥ್ರ್ಯದ ಮೇಲೆ ನಂಬಿಕೆಯೇ ಇಲ್ಲವಾಗಿದೆ ಎಂದು ಹರಿ ಹಾಯ್ದರು
ಒಮ್ಮೆ ಮೋದಿಯನ್ನು ಪ್ರಧಾನಿ ಮಾಡಿರುವುದರಿಂದ ದೇಶದ ಜನ ಬಿಕ್ಷುಕರಾಗಿದ್ದಾರೆ ಮತ್ತೊಮ್ಮೆ ಆರಿಸಿದರೆ ದೇಶ ದಿವಾಳಿಯಾಗುತ್ತದೆ ಎಂದು ಮುನ್ನೆಚ್ಚರಿಕೆ ನೀಡಿದರು
ಶಾಸಕ ಡಿ ಸಿ ಗೌರೀಶಂಕರ್ ಮಾತನಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗು ಡಾ,ಜಿ ಪರಮೇಶ್ವರ್ ಜೋಡೆತ್ತುಗಳ ಹಾಗೆ ಮೈತ್ರಿ ಸರ್ಕಾರ ಹಾಗು ಮೈತ್ರಿ ಅಭ್ಯರ್ತಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ ,ಮಾಜಿ ಶಾಸಕ ಹೆಚ್ ನಿಂಗಪ್ಪ ಅವರಿಗೆ ಗ್ರಾಮಾಂತರ ಭಾಗದ ನೀರಾವರಿ ಯೋಜನೆಹಾಗು ಮಾಜಿ ಶಾಸಕನ ಅಸಲೀ ಮುಖ ಪರಿಚಯವಿದೆ ಈ ಭಾರಿ ಲೋಕಸಭಾಚುನಾವಣೆಯನ್ನು ನಾನು ಹಾಗು ಹೆಚ್ ,ನಿಂಗಪ್ಪ,ಮುದ್ದಹನುಮೇಗೌಡರು, ಮತ್ತು ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರ ಜೊತೆಗೂಡಿ ಒಟ್ಟಿಗೆ ಶ್ರಮಿಸಿ ಕರ್ನಾಟಕದ ಮಾಣಿಕ್ಯ ದೇವೇಗೌಡರ ಗೆಲುವಿಗೆ ಶ್ರಮಿಸುವುದಾಗಿ ಭರವಸೆಯಿತ್ತರು
ಸಭೆಯಲ್ಲಿ ತಾಲ್ಲುಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್,ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ, ಮಾಜಿ ಶಾಸಕ ಷಫಿ ಅಹಮದ್,ಮಾಜಿ ಶಾಸಕ ಹೆಚ್ ನಿಂಗಪ್ಪ, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು,ಜೆಡಿಎಸ್ ಮುಖಂಡರಾದ ನರುಗನಹಳ್ಳಿ ವಿಜಯ್ ಕುಮಾರ್ ,ನರುಗನಹಳ್ಳಿಮಂಜುನಾಥ್, ಪಾಲನೇತ್ರಯ್ಯ,ತಾಲ್ಲೂಕು ಪಂವಾಯ್ತಿ ಸದಸ್ಯ ದೀಪು,ಕಾಮೇಗೌಡ,ಕಾಂಗ್ರೆಸ್ ಮುಖಂಡರಾದ ಚಿಕ್ಕವೆಂಕಟಪ್ಪ ಸೇರಿದಂತೆ ಕಾಂಗ್ರೆಸ್ ಹಾಗು ಜೆಡಿಎಸ್ ಕಾರ್ಯಕರ್ತರು ಉಪಸ್ತಿತರಿದ್ದರು