ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆ

ತುರುವೇಕೆರೆ

        2019 ನೇ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಮುಕ್ತಗೊಳಿಸಲು ಸೋನಿಯ ಹಾಗೂ ರಾಹುಲ್‍ಗಾಂಧಿ ತೀರ್ಮಾನಿಸಿ ಕರ್ನಾಟಕದಿಂದ ಅಡಿಪಾಯ ಹಾಕಿದ್ದರಿಂದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ತಿಳಿಸಿದರು.

        ಪಟ್ಟಣದ ವಿದ್ಯಾನಗರದಲ್ಲಿ ತುಮಕೂರು ಲೋಕಸಭಾ ಚುನಾವಣೆಯ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಹಾಗೂ ದೇವೇಗೌಡರ ವಿರುದ್ಧ ಅಲ್ಲ.

       ನರೇಂದ್ರ ಮೋದಿ ವಿರುದ್ಧ ಎಲ್ಲ ಪಕ್ಷಗಳ ಸೈದ್ಧಾಂತಿಕ ಹೋರಾಟವಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಸುಳ್ಳು ಹೇಳುವ ಪ್ರಧಾನಿ. ಆರ್.ಎಸ್.ಎಸ್ ಮುಖವಾಡ ಧರಿಸಿರುವ ನರೇಂದ್ರ ಮೋದಿ ರೈತನ ಬಗ್ಗೆ ಯಾವ ಯೋಜನೆಯನ್ನು ನೀಡಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರಿಗೂ ಪರಿಹಾರ ನೀಡಲಿಲ್ಲ. ನರೇಗ ಯೋಜನೆಯಲ್ಲಿ ರಾಜ್ಯಕ್ಕೆ 1200 ಕೋಟಿ ನೀಡದೆ ಬಾಕಿ ಉಳಿಸಿಕೊಂಡಿದೆ. 2 ಕೋಟಿ ಉದ್ಯೋಗ ಸೃಷ್ಟಿ ಎಂದು ಹೇಳಿದ್ದು ಪ್ರಸ್ತುತ ಶೇ.61 ನಿರುದ್ಯೋಗಿಗಳು ಸೃಷ್ಟಿಯಾಗಿದ್ದಾರೆ ಎಂದು ತಿಳಿಸಿದರು.

         ಸಚಿವ ಶ್ರೀನಿವಾಸ್ ಮಾತನಾಡಿ ದೇಶದಲ್ಲಿ ಮೋದಿ ಜಿಲ್ಲೆಯಲ್ಲಿ ಜಿ.ಎಸ್.ಬಸವರಾಜು ಅತ್ಯಂತ ಸುಳ್ಳು ಹೇಳುವ ವ್ಯಕ್ತಿಗಳು. ಜಿಲ್ಲೆಯಿಂದ 4 ಬಾರಿ ಸಂಸದರಾಗಿರುವ ಬಸವರಾಜುರವರ ಕೊಡಗೆ ತುಮಕೂರಿಗೆ ಏನು ? ಯಾವ ಯೋಗ್ಯತೆಯಲ್ಲಿ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.

         ಜಿ.ಎಸ್.ಬಿ ನಮ್ಮ ಸಂಬಂಧಿ, ರಾಜಕೀಯವಾಗಿ ಅಲ್ಲ : ನಮ್ಮ ಸಮಾಜಕ್ಕೆ ನನ್ನನ್ನು ಕಂಡರೆ ಆಗಲ್ಲ ಎಲ್ಲರೂ ಬಿಎಸ್‍ವೈ ಎನ್ನುತ್ತಾರೆ. ಜಿಎಸ್‍ಬಿ ನಮ್ಮ ಸಂಬಂಧಿ ಹೌದು, ನಮ್ಮ ಪಕ್ಷ ತೊರೆದ ಮೇಲೆ ರಾಜಕೀಯವಾಗಿ ಯಾವುದೆ ಸಂಬಂಧವಿಲ್ಲ. ನಾನು ಯಾರ ಮೇಲೂ ಟೀಕೆ ಮಾಡಲ್ಲ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಯಾರಿಗಾದರೂ ಅನುಮಾನ ಇದ್ದರೆ ಮನೆ ದೇವರಿಗೆ ಕರೆದುಕೊಂಡು ಹೋಗಿ ಪೂಜೆ ಮಾಡಿಸೋಣ ಎಂದು ಮಾಜಿ ಶಾಸಕ ಷಡಕ್ಷರಿ ತಿಳಿಸಿದರು.

         ಕಾಂಗ್ರೆಸ್ ಕಾರ್ಯಕರ್ತರ ಮನವಿ : ಕಾಂಗ್ರೆಸ್ ಮುಖಂಡ ಗುಡ್ಡೇನಹಳ್ಳಿ ನಂಜುಂಡಪ್ಪ ಮಾತನಾಡಿ, ತಾಲ್ಲೂಕಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಜೊತೆ ಸಮನ್ವಯ ಕೊರತೆ ಇದೆ. ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದು ಕಾಂಗ್ರೆಸ್ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಿರುವುದು ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಎಲ್ಲಾ ನಾಮಿನಿ ಸದಸ್ಯರು ಜೆಡಿಎಸ್‍ಗೆ ಲಭಿಸುತ್ತಾರೆ.

        ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‍ಗೆ ಮತ ಹಾಕಲು ಹಿಂದೇಟು ಹಾಕುತ್ತಾರೆ. ಕಾರಣ ದೇವೇಗೌಡರು ಗೆದ್ದರೆ ಕೈ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಆತಂಕ ನಮ್ಮಲ್ಲಿ ಇದೆ. ಅದನ್ನು ಜೆಡಿಎಸ್, ಕಾಂಗ್ರೆಸ್ ಮುಖಂಡರು ಸಮನ್ವಯ ಸಭೆ ಮಾಡಿ ಒಗ್ಗೂಡಿಸುವ ಪ್ರಯತ್ನ ಮಾಡಲಿ ಎಂದು ಸಭೆಯಲ್ಲಿ ಮನವಿ ಮಾಡಿದರು.

        ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು, ಚೌಡರೆಡ್ಡಿತೂಪಲ್ಲಿ, ಕಾಂ.ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಮಾಜಿ ಶಾಸಕರಾದ ಷಫಿಅಹಮದ್, ಎಂ.ಟಿ.ಕೃಷ್ಣಪ್ಪ, ಎಂ.ಡಿ.ಲಕ್ಷ್ಮೀನಾರಾಯಣ್, ಹೆಚ್.ಬಿ.ನಂಜೇಗೌಡ, ಸುರೇಶ್‍ಬಾಬು, ಆರ್.ನಾರಾಯಣ್, ರಮೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್, ನಾಗೇಶ್, ತುಮುಲ್ ಅಧ್ಯಕ್ಷ ಮಹಾಲಿಂಗಯ್ಯ, ಮುಖಂಡರಾದ ಮುರುಳಿಧರ ಹಾಲಪ್ಪ, ಚೌದ್ರಿರಂಗಪ್ಪ, ರಮೇಶ್ ಗೌಡ, ವಸಂತ್‍ಕುಮಾರ್, ಸುಬ್ರಹ್ಮಣ್ಯ, ಶ್ರೀಕಂಠೇಗೌಡ, ಗೀತಾ ರಾಜಣ್ಣ, ಚಂದ್ರೇಶ್, ಡಾ.ನಂಜಪ್ಪ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯರುಗಳು ಹಾಗೂ ಕಾರ್ಯಕರ್ತರುಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link