ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ..!!

ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ನಿರ್ಲಕ್ಷ್ಯ ದೋರಣೆ

ಬೆಂಗಳೂರು

     ಬೆ.ದಕ್ಷಿಣ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಮೌರ್ಯ ಸರ್ಕಲ್ ಗಾಂಧಿಜೀ ಪ್ರತಿಮೆ ಎದುರು ಬಿ.ಜೆ.ಪಿ. ಪಕ್ಷದ ಕೇಂದ್ರ ಸರ್ಕಾರದ ಜನ ವಿರೋಧಿ ಧೋರಣೆಗಳಾದ ಪೆಟ್ರೋಲ್ ,ಡೀಸೆಲ್ ದರ ಏರಿಕೆ ಮತ್ತು ರಾಜ್ಯ ಅಭಿವೃದ್ದಿ ಕಡೆಗಣನೆ ಮತ್ತು ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ ಗುತ್ತಿಗೆ ನೀಡಿರುವುದು ,ನಿರುದೋಗ್ಯ ನಿವಾರಣೆಗೆ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲಾಯಿತು.

     ಕ.ವಿ.ಕಾ.ಮಾಜಿ ಅಧ್ಯಕ್ಷರಾದ ಎಸ್.ಮನೋಹರ್ ,ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿ.ಜನಾರ್ಧನ್ ಮತ್ತು ಶೇಖರ್ ,ಜಯಸಿಂಹ ,ಆದಿತ್ಯ ,ಆನಂದ್ ,ಹೇಮರಾಜು ,ಪರಿಸರ ರಾಮಕೃಷ್ಣ ಮತ್ತು ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು .

      ಪ್ರತಿಭಟನೆಯಲ್ಲಿ ಮಾತನಾಡಿದ ಎಸ್.ಮನೋಹರ್ ರವರು ಕರ್ನಾಟಕ ರಾಜ್ಯದಲ್ಲಿ ಬಿ.ಜೆ.ಪಿ.ಯ 25ಸಂಸದರು ಆಯ್ಕೆಯಾಗಿದ್ದಾರೆ ,ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯರು ,ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಬಜೆಟ್ ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿದೆ ರಾಜ್ಯಕ್ಕೆ ಆನ್ಯಾಯ ಮಾಡಿದ್ದಾರೆ .

       ಪೆಟ್ರೋಲ್ ,ಡೀಸೆಲ್ ಬೆಲ್ ಏರಿಕೆಯಿಂದ ಬಡವರು ,ಮಧ್ಯಮ ವರ್ಗದವರ ದಿನಬಳಕೆ ಆಹಾರ ಸಾಮಗ್ರಿಗಳ ಬೆಲ ಹೆಚ್ಚಳ ವಾಗಲಿದೆ .ಒಂದು ಕಡೆ ನಿರುದ್ಯೋಗ ಮತ್ತೊಂದು ಕಡೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಿ ದೇಶದ ಜನ ಜೀವನ ಸಂಕಷ್ಟದಲ್ಲಿ ಇದ್ದಾರೆ. ಮಂಗಳೂರು ವಿಮಾನ ನಿಲ್ದಾಣ ನಿರ್ವಹಣೆ ಗುತ್ತಿಗೆಯನ್ನು ಅದಾನಿ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾರವರು ದೇಶವನ್ನು ಖಾಸಗಿ ಒಡೆತನದ ಅದಾನಿಗೆ ಕಂಪನಿಗೆ ಮಾರಿದರು ಆಶ್ಚರ್ಯವಿಲ್ಲ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap