ಕಾಂಗ್ರೆಸ್ ಬೆಂಬಲಕ್ಕೆನಿಂತ ಯಾದವ ಸಮಾಜ

ಹರಪನಹಳ್ಳಿ:

       ಲೋಕಸಭಾ ಹಾಗೂ ವಿಧಾನಸಭಾ ಸೇರಿದಂತೆ ಸ್ಥಳೀಯ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿರುವ ತಾಲ್ಲೂಕಿನ ಯಾದವ ಸಮಾಜ ಹಿಂದಿನ ಸಂಪ್ರದಾಯದಂತೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಮಂಜಪ್ಪ ಅವರ ಗೆಲುವಿಗೆ ಶ್ರಮಿಸಲಿದೆ ಎಂದು ಯಾದವ ಸಮಾಜದ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ಚಿದಾನಂದಪ್ಪ ತಿಳಿಸಿದರು.

       `ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ತನ್ನ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದೆ. ಮೊನ್ನೆ ಹಲವಾಗಲು ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಯಾದವ ಸಮಾಜ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಲಿದೆ ಎಂದು ಕೆಲವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಇಡೀ ಸಮಾಜದ ಮಾತಲ್ಲ’ ಎಂದು ಪಟ್ಟಣದ ಪ್ರೆಸ್ ಕ್ಲಬ್ ಅಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

      `ಹಲವಾಗಲು ಗ್ರಾಮದಲ್ಲಿ ನಡೆದದ್ದು, ಬಿಜೆಪಿ ಪ್ರಚಾರ ಸಭೆಯೇ ಹೊರತು ಯಾದವರ ಸಭೆಯಲ್ಲ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರು ಬಿಜೆಪಿ ಶಾಸಕರು ಆಗಿರುವುದರಿಂದ ಸಹಜವಾಗಿಯೇ ಅವರು ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ. ಹಾಗಂತ ಎಲ್ಲರೂ ಬಿಜೆಪಿಗೆ ಬೆಂಬಲಿಸುತ್ತಾರೆ ಎನ್ನುವುದು ಶುದ್ಧ ಸುಳ್ಳು. ತಾಲ್ಲೂಕಿನ ಯಾದವ ಸಮಾಜದ ಬಹುಪಾಲು ಜನರು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಂಕಣಬದ್ಧರಾಗಿದ್ದಾರೆ’ ಎಂದು ಹೇಳಿದರು.

        ಯಾದವ ಸಮಾಜದ ಗೌರವ ಅಧ್ಯಕ್ಷ ಕೆ.ಹನುಮಂತಪ್ಪ ಮಾತನಾಡಿ, `ಯಾದವ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಇತ್ತೀಚೆಗೆ ಕೆಲವರು ಯಾದವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸುಳ್ಳು ವದಂತಿ ಹರಡಿಸಿ ಸಮಾಜದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link