ಕಾಂಗ್ರೆಸ್ ಬೆಂಬಲಿಸಲು ಮುಖಂಡರ ಮನವಿ : ಯಾದವ ಜನಾಂಗಕ್ಕೆ ಕಾಂಗ್ರೆಸ್‍ನಿಂದ ಅನುಕೂಲ

ಚಿತ್ರದುರ್ಗ:

      ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷ ಮಹಲಿಂಗಪ್ಪನವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಗೆ ಮತ ಹಾಕುವಂತೆ ಗೊಲ್ಲ ಜನಾಂಗದರಲ್ಲಿ ಮನವಿ ಮಾಡಿರುವುದು ನಮಗೆ ಇಷ್ಟವಿಲ್ಲ. ಕಾಂಗ್ರೆಸ್ ಸರ್ಕಾರ ಗೊಲ್ಲ ಜನಾಂಗಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಅದಕ್ಕಾಗಿ ಇದೇ ತಿಂಗಳ ಹದಿನೆಂಟರಂದು ನಡೆಯುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಬೆಂಬಲಿಸಬೇಕೆಂದು ಯಾದವ ಜನಾಂಗದ ಮುಖಂಡರು ಮನವಿ ಮಾಡಿದ್ದಾರೆ

        ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜು, ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷ ಮಹಲಿಂಗಪ್ಪನವರು ಯಾದವರ ಸಭೆ ಕರೆದು ಬಿಜೆಪಿ.ಗೆ ಮತ ನೀಡುವಂತೆ ಗೊಲ್ಲ ಜನಾಂಗಕ್ಕೆ ಹೇಳಿರುವುದಕ್ಕೂ ನಮಗೂ ಸಂಬಂಧವಿಲ್ಲ. ದೇಶಕ್ಕೆ ಸ್ವಾತಂತ್ರ ಸಿಕ್ಕು ಎಪ್ಪತ್ತು ವರ್ಷಗಳಾದರೂ ನಮ್ಮ ಜನಾಂಗವನ್ನು ಯಾರು ಗುರಿತಿಸಿರಲಿಲ್ಲ.

         ಆದರೆ ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ವಿಧಾನಪರಿಷತ್ ಸದಸ್ಯೆಯನ್ನಾಗಿ ಮಾಡಿದೆ ಎಂದರು ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ ಹಿರಿಯೂರು ಶಾಸಕಿಯಾಗಿ ಧ್ವನಿಯೆತ್ತುವಷ್ಟವರ ಮಟ್ಟಿಗೆ ಬೆಳೆದಿದ್ದಾರೆಂದರೆ ಅದು ಕಾಂಗ್ರೆಸ್ ಕೊಟ್ಟ ಶಕ್ತಿ. ಅವರ ತಂದೆ ಕೃಷ್ಣಪ್ಪನವರು ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಇಷ್ಟೆಲ್ಲಾ ಪಕ್ಷ ನಮಗೆ ಕೊಡುಗೆ ನೀಡಿರುವಾಗ ಬಿಜೆಪಿ.ಗೆ ಗೊಲ್ಲ ಜನಾಂಗ ಮತ ನೀಡಬೇಕು. ಮಹಲಿಂಗಪ್ಪ ಜಿಲ್ಲಾ ಯಾದವ ಗೊಲ್ಲ ಸಂಘದಿಂದ ಹೇಳಿಕೆ ನೀಡಿದ್ದಾರೆಯೇ ಹೊರತು ಇಡೀ ಜನಾಂಗದ ಪರವಾಗಿ ಅಲ್ಲ ಎಂದು ಜಯಮ್ಮ ಬಾಲರಾಜ್ ಮಹಲಿಂಗಪ್ಪ ಹೇಳಿಕೆಯನ್ನು ಖಂಡಿಸಿದರು.

         ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ ಗೊಲ್ಲರಹಟ್ಟಿಗೆ ಯಾವಾಗ ಹೋಗಿದ್ದಾರೆ. ಗೊಲ್ಲ ಜನಾಂಗದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ. ಗೊಲ್ಲರು ಶ್ರೀಮಂತರಲ್ಲ. ಬಿಜೆಪಿ.ಗೆ ಗೊಲ್ಲರ ಬಗ್ಗೆ ಏನು ಕಾಳಜಿಯಿದೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗೊಲ್ಲ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಕೇಂದ್ರ ಶಿಫಾರಸ್ಸು ಮಾಡಿದ್ದರು. ಆಗ ಬಿಜೆಪಿ.ಯವರು ತಡೆಹಿಡಿದು ನಮ್ಮ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ.

        ಆದ್ದರಿಂದ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮ್ಮ ಓಟು ಕಾಂಗ್ರೆಸ್ ಅಭ್ಯರ್ಥಿಗೆ ಬಿ.ಎನ್.ಚಂದ್ರಪ್ಪನವರಿಗೆ ವಿನಃ ಬಿಜೆಪಿ.ಗಲ್ಲ ಎಂದು ಮಹಲಿಂಗಪ್ಪನವರ ಹೇಳಿಕೆಗೆ ತಿರುಗೇಟು ನೀಡಿದರು.

         ದೇಶದ ಪ್ರಧಾನಿ ಮೋದಿ ಮೇಲ್ವರ್ಗದವರು ಕೇಳದಿದ್ದರು ಶೇ.10 ರಷ್ಟು ಮೀಸಲಾತಿ ನೀಡಿದ್ದಾರೆ. ಕೃಷ್ಣಜಯಂತಿಯನ್ನು ಘೋಷಿಸಿದ್ದು, ಕಾಂಗ್ರೆಸ್ ಸರ್ಕಾರ, ಜುಂಜಪ್ಪನ ಅಧ್ಯಯನ ಕೇಂದ್ರ ತೆರೆದು, ನಿಗಮ ಮಂಡಳಿ ನೇಮಕದಲ್ಲಿ ಗೊಲ್ಲರಿಗೆ ಆದ್ಯತೆ ನೀಡಿರುವ ಕಾಂಗ್ರೆಸ್ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಗೊಲ್ಲರೆಲ್ಲ ಬಿಜೆಪಿ.ಕಡೆ ಇದ್ದಾರೆಂದು ಮಹಲಿಂಗಪ್ಪ ಹೇಳಿರುವುದು ಅವರ ವೈಯಕ್ತಿಕ ವಿಷಯ ಜನಾಂಗಕ್ಕೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

         ನೂರಾರು ಮುರಾರ್ಜಿ ಶಾಲೆಗಳನ್ನು ತೆರೆದು ಕಾಂಗ್ರೆಸ್ ಪಕ್ಷ ನಮ್ಮ ಜನಾಂಗದ ಮಕ್ಕಳಿಗೆ ಶೈಕ್ಷಣಿಕ ಸವಲತ್ತು ನೀಡಿದೆ. ಬೆಣ್ಣೆ ಮಾತನಾಡಿ ಬಿಜೆಪಿ.ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಬೇಡ. ಇದೇ ತಿಂಗಳ ಹದಿನೆಂಟರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರಿಗೆ ಗೊಲ್ಲ ಜನಾಂಗದವರು ಮತ ನೀಡಿ ಬಹುಮತಗಳಿಂದ ಗೆಲ್ಲಿಸಿ ಎಂದು ವಿನಂತಿಸಿದರು.

        ನ್ಯಾಯವಾದಿ ಸಿ.ಶಿವುಯಾದವ್ ಮಾತನಾಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿ ಹಿಂದುಳಿದ ವರ್ಗದವರಿಗೆ ಮರಣ ಶಾಸನ ಬರೆದಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಗ್ರಾ.ಪಂ., ತಾ.ಪಂ., ಜಿ.ಪಂ. ನಲ್ಲಿ ಮೀಸಲಾತಿಯನ್ನು ರದ್ದುಪಡಿಸಿದರು. ಅವರಿಗೆ ಮತ ಕೇಳುವ ಹಕ್ಕಿಲ್ಲ. ಗೊಲ್ಲ ಜನಾಂಗಕ್ಕೆ ಆದಾಯದ ಮಿತಿ ಇರಲಿಲ್ಲ. ಎರಡು ಲಕ್ಷ ರೂ.ಗಳ ಆದಾಯ ಮಿತಿ ಜಾರಿಗೆ ತಂದರು. ಗೊಲ್ಲ ಜನಾಂಗಕ್ಕೆ ಅನ್ಯಾಯ ಮಾಡಿರುವ ಅವರಿಗೆ ಯಾವುದೇ ಕಾರಣಕ್ಕೂ ಮತ ನೀಡಬೇಡಿ ಎಂದು ಗೊಲ್ಲ ಸಮುದಾಯದವರಲ್ಲಿ ಕೋರಿದರು.

         ಸಿದ್ದರಾಮಯ್ಯ ಗೊಲ್ಲ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದಾಗ ಬಿಜೆಪಿ.ಯವರು ಅಡ್ಡಿಪಡಿಸಿ ಸೇರ್ಪಡೆಯಾಗಲು ಬಿಡಲಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಫೈಲ್ ವಾಪಸ್ಸು ಬರಲು ಕಾರಣರಾದ ಬಿಜೆಪಿ,ಗೆ ಏಕೆ ಮತ ಕೊಡಬೇಕು ಎಂದು ಪ್ರಶ್ನಿಸಿದ ಶಿವುಯಾದವ್ ಬಡವರ ವಿರೋಧಿಯಾಗಿರುವ ಮೋದಿ ಬಂಡವಾಳಶಾಹಿಗಳು, ಉದ್ಯಮಿಗಳ ಪರವಾಗಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ.ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್‍ನ ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸಿ ಎಂದು ಗೊಲ್ಲ ಸಮುದಾಯದವರಲ್ಲಿ ವಿನಂತಿಸಿದರು.ಜಿ.ಪಂ.ಮಾಜಿ ಸದಸ್ಯರುಗಳಾದ ಸರಸ್ವತಿ, ಹನುಮಂತಪ್ಪ, ಸಂಪತ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap