ಬೆಂಗಳೂರಿನಲ್ಲಿ ಕಾಂಗ್ರೆಸ್ ಭರ್ಜರಿ ಮತ ಬೇಟೆ

ಬೆಂಗಳೂರು:

       ಇಲ್ಲಿನ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಇಂದು ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು. ಈ ವೇಳೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಾಥ್ ನೀಡಿದರು.

        ಮಲ್ಲೇಶ್ವರದ ದತ್ತಾತ್ರೇಯ ದೇವಸ್ಥಾನ, ಮುನೇಶ್ವರ ಬ್ಲಾಕ್, ನಾಗಪ್ಪ ರಸ್ತೆ, ಬಸಪ್ಪ ಗಾರ್ಡನ್, ಆಂಜನೇಯ ಬ್ಲಾಕ್, ಮಲ್ಲೇಶ್ವರ 1ನೆ ಬ್ಲಾಕ್, ಎನ್‍ಕೆಬಿ ರೋಡ್, ಸಂಪಿಗೆ ಚಿತ್ರಮಂದಿರ, ಸ್ವತಂತ್ರ ಪಾಳ್ಯ, ಹನುಮಂತಪುರ ಒಂದನೇ ಹಂತ, ಸನ್ರೈಸ್ ಸರ್ಕಲ್, ಈಶ್ವರಿ ಬಾರ್ ರೋಡ್, ಸಾಯಿಬಾಬಾ ಕಲ್ಯಾಣ ಮಂಟಪ, ಆರ್.ಸಿ ಪುರಂ, ಗಣೇಶ ಟೆಂಪಲ್, ಓಕಲಿಪುರಂವರೆಗೂ ರಸ್ತೆ ಮಾರ್ಗವಾಗಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಕಳೆದ ಐದು ವರ್ಷಗಳಲ್ಲಿ ಈ ಭಾಗದ ಜನರ ಯಾವುದೇ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ, ಯುವಜನರ ಹಾಗೂ ತಮ್ಮೆಲ್ಲರ ಪರವಾಗಿ ರಿಜ್ವಾನ್ ಅವರು ಧ್ವನಿ ಎತ್ತಲಿದ್ದಾರೆ. ಹೀಗಾಗಿ ಚುನಾಯಿಸಿ ಲೋಕಸಭೆಗೆ ಕಳುಹಿಸುವಂತೆ ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link