ಪಾವಗಡ;-
ಪುರಸಭೆ ಚುನಾವಣೆಯ ದಿನಾಂಕ ಪ್ರಕಟನೆ ಅದನಂತರ ವಾರ್ಡ್‍ನ ಮೀಸಲಾತಿ ತಕ್ಕಂತೆ ಆಕಾಂಕ್ಷಿಗಳು ವಾರ್ಡ್ ಮುಖಂಡರನ್ನು ಸೇರಿಸಿಕೊಂಡು ಟಿಕಿಟ್‍ಗಾಗಿ ನಿದ್ದೆ ಇಲ್ಲದೆ ಓಡಾಡಿ ತಮ್ಮಗೆ ಟಿಕಿಟ್ ಸಿಗಲಿ ಬಿಡಲಿ ಎಂಬ ಬರವಸೆಯಿಂದ ನಾಮ ಪತ್ರ ಸಲ್ಲಿಸಲು ಆಕಾಂಕ್ಷಿಗಳು ಮುಂದಾಗಿದ್ದಾರೆ.
23 ನೇ ವಾರ್ಡ್‍ನ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಂಜಿನಪ್ಪ ನೂರಾರು ಜನ ಸಂಖ್ಯೆಯಲ್ಲಿ ವಾರ್ಡ್‍ನ ಮತದಾರರ ಜೋತೆಯಲ್ಲಿ ಗುಂಪಾಗಿ ಮೆರವಣೆಗೆ ಯಲ್ಲಿ ಬಂದು ನಾಮ ಪತ್ರ ಸಲ್ಲಿಸಿದ್ದು,ವಿಧಾನ ಸಭೆ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಚುನಾವಣೆಗಿಂತ ಕಡಿಮೆನ್ನಿಲ್ಲ ಎಂಬಂತೆ ಸೋಮವಾರ ತಾಲ್ಲೂಕು ಕಛೇರಿಗೆ ಜನರು ಜಮಾಯಿಸಿದರು.
ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಪಕ್ಷದಲ್ಲಿ ಹೆಚ್ಚಿನ ಆಕಾಂಕ್ಷಿಗಳು ಟಿಕಿಟ್‍ಗಾಗಿ ತಾಮುಂದು ನಾಮುಂದು ಎಂದು ನೂಕುನುಗ್ಗಲಾಗಿದ್ದು ,ಯಾರಿಗೆ ಟಿಕಿಟ್ ನೀಡಬೇಕೋ ನೀಡಬಾರದೋ ಎಂಬ ಪ್ರಯತ್ನದಲ್ಲಿ ಮುಖಂಡರಲ್ಲಿ ಪ್ರಶ್ನೆಯಾಗಿದ್ದು,ಪಕ್ಷದಲ್ಲಿ ಟಿಕಿಟ್ ಕೈತಪ್ಪಿದರೆ ಪಕ್ಷೆತ್ರರ ಅಭ್ಯರ್ಥಿಯಾಗಿ ನಿಲ್ಲುವ ಸೂಚನೆಗಳು ದಟ್ಟವಾಗಿ ಕಾಣುತ್ತಿವೆ.
ಕಾಂಗ್ರೆಸ್ ಮುಖಂಡ ರಾಮಚಂದ್ರಪ್ಪ ಮಾತನಾಡಿ ಸುಮಾರು ವರ್ಷಗಳಿಂದ ನಿಷ್ಠಾವಂತರಾಗಿ ಪಕ್ಷದಲ್ಲಿ ದುಡಿದಿದ್ದು,ನಮ್ಮ ಆಕಾಂಕ್ಷಿ ಅಭ್ಯರ್ಥಿಗೆ ಟಿಕಿಟ್ ನೀಡುತ್ತಾರೆ ಎಂಬ ಬರವಸೆ ನಮ್ಮಗಿದ್ದು,ಈ ಹಿಂದೆ ಕಾಂಗ್ರೆಸ್ ಪಕ್ಷದ ಯಾರೇ ಅಭ್ಯರ್ಥಿಯಾಗಲಿ ಕಷ್ಟ ಪಟ್ಟು ಗೆಲ್ಲಿಸಲು ಪ್ರಯತ್ನ ಮಾಡಿದ್ದೇವೆ ಈಗಲೂ ಸಹ ವಾರ್ಡ್‍ನ ಮುಖಂಡರು ಹಾಗೂ ಮತದಾರರ ಅನಿಸಿಕೆಯಂತೆ ಅಂಜಿನಪ್ಪ ಎಂಬ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಕಾಂಗ್ರೆಸ್ ಮುಖಂಡರ ಗಮನಕ್ಕೂ ಹಾಗೂ ಕಾರ್ಮಿಕ ಸಚಿವ ವೆಂಕಟರಮಣಪ್ಪ ಹತ್ತಿರ ಟಿಕಿಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದು,ಈ ಸಲ ನಮಗೆ ಟಿಕಿಟ್ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಪುರಸಭೆ ಚುನಾವಣೆ ದಿನ ದಿನಕ್ಕೂ ಕಾವೇರುತ್ತಿದ್ದು,ಟಿಕಿಟ್ ನೀಡುವುದರಲ್ಲಿ ಪಕ್ಷಗಳ ಮುಖಂಡರಿಗೆ ತಲೆನೋವಾಗಿ ಪರಿಣಾಮಿಸಿದ್ದು ,ಯಾರನ್ನು ಬಿಟ್ಟುಕೊಡದೇ ಎಲ್ಲರನ್ನು ಸಮಾದಾನ ಮಾಡುವ ನಿಟ್ಟುನಲ್ಲಿ ಮುಖಂಡರು ಪ್ರಯತ್ನ ನಡೆಸುತ್ತಿದ್ದಾರೆ.ಪುರಸಭೆ ವ್ಯಾಪ್ತಿಯ ವಾರ್ಡ್‍ವಾರು ಸಮೀಕ್ಷೆ ನಡೆಸಿ ಮೀಸಲಾತಿ ಅನುಗುಣವಾಗಿ ಆಕಾಂಕ್ಷಿ ವ್ಯಕ್ತತ್ವ ಹಾಗೂ ಜಾತಿಯ ಆಧಾರದ ಮೇಲೆ ಟಿಕಿಟ್ ಹಂಚಿಕೆ ಮಾಡಲು ಪಕ್ಷಗಳ ವರಿಷ್ಠರು ತಂತ್ರಗಾರಿಕೆ ನಡೆಸುತ್ತಿದ್ದಾರೆ.
ನಾಮ ಪತ್ರಸಲ್ಲಿಸುವ ಸಂದರ್ಭದಲ್ಲಿ ಬೋಜರಾಜ್,ಮಾಜಿ ಗ್ರಾ.ಪಂ.ಅಧ್ಯಕ್ಷ ಸುಬ್ಬರಾಯಪ್ಪ,ಕೃಷ್ಣಮೂರ್ತಿ,ಕೋಲ್ಲಪ್ಪ ,ಸತೀಶ್,ರಾಜೇಶ್, ಕ್ರಾಂತಿಕುಮಾರ್, ನಾರಾಯಣಪ್ಪ,ಹನುಮಂತರಾಯಪ್ಪ,ಕೃಷ್ಣಪ್ಪ,ನರೇಶ್ ,ಹನುಮಂತರಾಯಪ್ಪ, ಈರಣ್ಣ , ವೆಂಕಟರಮಣಪ್ಪ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
