ಬೆಂಗಳೂರು
ನೆರೆ ಸಂತ್ರಸ್ತರ ಸ್ಥಿತಿ-ಗತಿ ಸಂಬಂಧಿಸಿದಂತೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ವರದಿಯು ಶುದ್ಧ ಸುಳ್ಳಿನ ಕಂತೆಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದರು.ಪ್ರವಾಹ ಸಂತ್ರಸ್ಥರ ಕುರಿತು ಕಾಂಗ್ರೆಸ್ ಪಕ್ಷವು ಅತ್ಯಂತ ಉಪೇಕ್ಷೆಯುಳ್ಳ ವರದಿ ಬಿಡುಗಡೆ ಮಾಡಿದೆ ಅದರಲ್ಲಿ ಅನೇಕ ಸುಳ್ಳುಗಳಿದ್ದು ಸತ್ಯಾಂಶಗಳಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರವಾಹದಿಂದಾಗಿ ೩೫ ಸಾವಿರ ಕಿಲೋ ಮೀಟರ್ ರಸ್ತೆ ಹಾಳಾಗಿದೆ ಎಂದು ತಿಳಿಸಿದ್ದಾರೆ.ಆದರೆ, ಈ ಪ್ರಮಾಣದ ರಸ್ತೆ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಬರೀ ೫ ಸಾವಿರ ಕಿಲೋ ಮೀಟರ್ ರಸ್ತೆ ಮಾತ್ರ ಹಾಳಾಗಿರುವುದು ನಿಜಾಂಶವಾಗಿದೆ.
ಅದೇ ರೀತಿ, ೩೦ ಲಕ್ಷ ಎಕರೆ ಬೆಳೆ ಹಾನಿ ಎಂದಿದ್ದಾರೆ.ಆದರೆ, ಅಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಲಿಲ್ಲ. ಮೂರು ಲಕ್ಷ ಮನೆಗಳು, ಮೂರು ಸಾವಿರ ಭಾಗಶಃ ಗ್ರಾಮಗಳು ನೀರಿನಿಂದ ತುಂಬಿವೆ ಎಂದಿರುವುದು ಸುಳ್ಳಾಗಿದೆ ಎಂದು ಆಪಾದಿಸಿದರು .ಧ್ರುವ ನಾರಾಯಣ್, ಆರ್.ವಿ.ದೇಶಪಾಂಡೆ, ಮಹದೇವಪ್ಪ ಅವರ ವರದಿಗಳನ್ನು ನಂಬಲು ಸಾಧ್ಯವಿಲ್ಲ.ಬರೀ ಆರೋಪ ಮತ್ತು ಚಿತ್ರಗಳಿವೆ.ಇದನ್ನು ನಂಬಲರ್ಹವಲ್ಲ ಎಂದ ಅವರು, ಒಂದು ಸಾವಿರ ಗ್ರಾಮಗಳು ನೆಲ ಸಮವಾಗಿವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ.ಅವರ ಆ ಗ್ರಾಮಗಳ ಪಟ್ಟಿ ನೀಡಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಎಂದೂ ಕಾಣದ ಪ್ರವಾಹ ಬಂದು, ಲಕ್ಷಾಂತರ ಮಂದಿಯ ಜೀವನ ಬೀದಿ ಪಾಲಾಗಿದೆ.ಆದರೆ, ಅವರ ನೆರವಿಗಾಗಿ ಪಕ್ಷವು ಧಾವಿಸಿ, ಅವರಿಗೆ ಬೇಕಾಗುವ ಅನೇಕ ವಸ್ತುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಮಾಧ್ಯಮ ಬಹಿಷ್ಕಾರ?
ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಮಾಧ್ಯಮಗಳು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದ ಬಳಿಕ ಸೋಮವಾರ ನಡೆದ ಪತ್ರಿಗೋಷ್ಠಿಯನ್ನು ಕೆಲ ವಿದ್ಯುನ್ಮಾನ ಸುದ್ದಿ ವಾಹಿನಿಗಳು ವರದಿ ಮಾಡದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








