ತಿಪಟೂರು :
ಹಿಂದಿನ ತಾ.ಪಂ ಚುನಾವಣೆಯಲ್ಲಿ ಇದ್ದು 17 ಸ್ಥಾನಗಳಲ್ಲಿ ಕಾಂಗ್ರೇಸ್ 8 ಸ್ಥಾನ, ಬಿ.ಜೆ.ಪಿ 7 ಸ್ಥಾನ, ಜೆ.ಡಿ.ಎಸ್ 1 ಮತ್ತು ಒಂದನ್ನು ಪಕ್ಷೇತ್ರ ಅಭ್ಯರ್ಥಿಗಳು ಜಯಗಳಿಸಿದ್ದು ಪಕ್ಷೇತರ ಅಭ್ಯರ್ಥಿಯನ್ನು ತಮ್ಮಡೆಗೆ ಸೆಳೆದುಕೊಂಡ ಕಾಂಗ್ರೇಸ್ ಅಧ್ಯಕ್ಷ ಸ್ಥಾನವನ್ನು ಪಡೆದು ಎನ್.ಎಂ ಸುರೇಶ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಶಂಕರ್ ಪದಗ್ರಹಣ ಮಾಡಿದ್ದರು. ಆದರೆ ಈಗ 2.5 ವರ್ಷ ಅಧಿಕಾರಾವಧಿ ಮುಗಿಸಿ ಬೇರೆಯವರಿಗೆ ಅಧ್ಯಕ್ಷಗಿರಿಯನ್ನು ಬಿಟ್ಟುಕೊಟಿದ್ದರಿಂದ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಹಾಗೂ ಪಕ್ಷೇತ್ರ ಅಭ್ಯರ್ಥಿಯನ್ನು ಒಳಗೊಂಡು 10 ಮತಗಳನ್ನು ಪಡೆದು ಅವಿರೋಧವಾಗಿ ದಸರೀಘಟ್ಟ ಕ್ಷೇತ್ರದ ಶಿವಸ್ವಾಮಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನೂತನ ತಾ.ಪಂ ಅಧ್ಯಕ್ಷ ಶಿವಸ್ವಾಮಿ ಮಾತನಾಡಿ ನಮ್ಮ ಪಕ್ಷದ ಮಾಜಿ ಶಾಸಕ ಕೆ.ಷಡಕ್ಷರಿ ಹಾಗೂ ಹಿಂದಿನ ತಾ.ಪಂ ಅಧ್ಯಕ್ಷರಾಗಿದ್ದ ಎನ್.ಎಂ.ಸುರೇಶ್ ಮಾರ್ಗದರ್ಶನದಲ್ಲಿ ತಾಲ್ಲೂಕು ಸಮಗೃ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.
ಪಕ್ಷಕದ ಕಾರ್ಯಕರ್ತರು ಚುನಾವಣೆ ಮುಗಿದ ನಂತರ ಹಾರ ತುರಾಯಿಗಳನ್ನು ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








