ಕಾಂಗ್ರೆಸ್‍ನಿಂದ ದೇಶದ್ರೋಹ ಕೆಲಸ;ತಿಪ್ಪಾರೆಡ್ಡಿ

ಚಿತ್ರದುರ್ಗ:

   ದೇಶದ ಪ್ರಧಾನಿ ಮೋದಿ ಪೌರತ್ವ ಕಾಯಿದೆ ಜಾರಿಗೆ ತರಲು ಹೊರಟಿರುವುದರ ವಿರುದ್ದ ಕಾಂಗ್ರೆಸ್‍ನವರು ಅಪಪ್ರಚಾರ ಮಾಡುತ್ತ ಜನರನ್ನು ದಂಗೆ ಏಳುವಂತೆ ಪ್ರಚೋದಿಸುತ್ತಿರುವುದು ನಿಜಕ್ಕೂ ದೇಶದ್ರೋಹದ ಕೆಲಸ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿಕಾರಿದರು.

   ಕಾಂಗ್ರೆಸ್ ಮುಖಂಡ ಮಾಳಪ್ಪನಹಟ್ಟಿ ಈಶಣ್ಣ, ಹಾಗೂ ಬೆಂಬಲಿಗರು ಮಾಳಪ್ಪನಹಟ್ಟಿಯಲ್ಲಿ ಬುಧವಾರ ಬಿ.ಜೆ.ಪಿ.ಗೆ ¸ಏರ್ಪಡೆ ಮಾಡಿಕೊಂಡು ನಂತರ ಮಾತನಾಡಿದ ಶಾಸಕರು ಆಫ್ಘಾನಿಸ್ತಾನ್, ಪಾಕಿಸ್ತಾನ, ಬಾಂಗ್ಲಾದೇಶದಿಂದ ಕಿರುಕುಳ ತಾಳದೆ ನಮ್ಮ ದೇಶಕ್ಕೆ ಬಂದಿರುವ ಹಿಂದುಗಳು, ದಲಿತರು, ಪರಿಶಿಷ್ಟ ವರ್ಗದವರು, ಕ್ರಿಶ್ಚಿಯನ್, ಸಿಖ್, ಜೈನ್ ಹೀಗೆ ಲಕ್ಷಾಂತರ ಮಂದಿಗೆ ಪೌರತ್ವ ನೀಡುವ ಕಾಯಿದೆಯನ್ನು ಪ್ರಧಾನಿ ಮೋದಿ ಜಾರಿಗೆ ತರಲು ಹೊರಟಿರುವುದು ತಪ್ಪೆ ಎಂದು ಕಾಂಗ್ರೆಸ್‍ನವರನ್ನು ಪ್ರಶ್ನಿಸಿದ ಶಾಸಕರು ಭಾರತದ ಯಾವ ಮುಸಲ್ಮಾನರಿಗೂ ಇದರಿಂದ ತೊಂದರೆಯಾಗುವುದಿಲ್ಲ. ಇದು ಕಾಂಗ್ರೆಸ್‍ನವರ ಪಿತೂರಿ ಎನ್ನುವುದನ್ನು ಪೌರತ್ವ ಕಾಯ್ದೆ ವಿರೋಧಿಗಳು ಮೊದಲು ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು.

   ಕಳೆದ ಐವತ್ತು ವರ್ಷಗಳ ಹಿಂದೆ ವಿಶ್ವದ ಅನೇಕ ರಾಷ್ಟ್ರಗಳಿಗೆ ನಮ್ಮ ದೇಶದ ಪ್ರಧಾನಿಗಳು ಹೋದರೆ ಏನೋ ಸಹಾಯ ಕೇಳಲು ಬಂದಿದ್ದಾರೆಂದು ರಷ್ಯ, ಇಂಡೋನೇಷಿಯಾದವರು ಕೇವಲವಾಗಿ ನೋಡುತ್ತಿದ್ದರು. ಈಗಿನ ನಮ್ಮ ಪ್ರಧಾನಿ ಮೋದಿ ಹೊರದೇಶಕ್ಕೆ ಹೋದವರು ಏರ್‍ಪೋರ್ಟ್‍ಗೆ ಬಂದು ಭವ್ಯವಾಗಿ ಬರಮಾಡಿಕೊಳ್ಳುತ್ತಾರೆ. ಇದರಿಂದ ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ ಎಂದರು.

    1947 ರಲ್ಲಿ ಮಹಮದ್ ಆಲಿಜಿನ್ನಾ ಭಾರತ ಇಬ್ಬಾಗಕ್ಕೆ ಕಾರಣರಾಗಿದ್ದರಿಂದ ಇಂದು ಪಾಕಿಸ್ತಾನ ಹುಟ್ಟಿಕೊಂಡಿದೆ. ಅಂದಿನಿಂದಲೂ ಜಮ್ಮು-ಕಾಶ್ಮೀರ ಪಾಕಿಸ್ತಾನದ ವಶದಲ್ಲಿದೆ. ನೆಹರು ಕಾಲದಿಂದಲೂ ಜಮ್ಮು-ಕಾಶ್ಮೀರಕ್ಕೆ ಲಕ್ಷಾಂತರ ಕೋಟಿ ರೂ.ಗಳನ್ನು ಖರ್ಚು ಮಾಡಿಕೊಂಡು ಬರಲಾಗುತ್ತಿದೆ. ಈಗಿನ ಪ್ರಧಾನಿ ಮೋದಿ ಜಮ್ಮು-ಕಾಶ್ಮಿರಕ್ಕೆ 370 ನೇ ವಿಧಿ ರದ್ದುಪಡಿಸಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್‍ನವರು ಬಿ.ಜೆ.ಪಿ.ವಿರುದ್ದ ದೇಶದ ಜನತೆಯನ್ನು ಎತ್ತಿಕಟ್ಟುತ್ತಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿಯಾಗಿದ್ದರೆ ನಮಗೆ ಈ ಗತಿ ಬರುತ್ತಿರಲಿಲ್ಲ.

    ಜಮ್ಮು-ಕಾಶ್ಮೀರದಲ್ಲಿ ಇಲ್ಲಿಯತನಕ ಹಿಂದುಳಿದವರು, ಪರಿಶಿಷ್ಟ ಜಾತಿ, ವರ್ಗದವರಿಗೆ ಮೀಸಲಾತಿ ಇಲ್ಲ. ಗ್ರಾ.ಪಂ.ಚುನಾವಣೆಗೆ ನಿಲ್ಲುವ ಅವಕಾಶವು ಅಲ್ಲಿನವರಿಗಿಲ್ಲದಂತಾಗಿದೆ. ಇವೆಲ್ಲವನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ನೀಡಲು ಬಿ.ಜೆ.ಪಿ.ದಿಟ್ಟ ಹೆಜ್ಜೆ ಇಟ್ಟಿರುವುದರಲ್ಲಿ ಏನು ತಪ್ಪಿದೆ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಸ್ಥಾನ ಒಂದೆ ಕುಟುಂಬಕ್ಕೆ ಮೀಸಲಾಗಿತ್ತು.

    ನಮ್ಮ ದೇಶದ ಸೈನಿಕರಿಗೆ ಅಲ್ಲಿನವರು ಕಲ್ಲಿನಿಂದ ಹೊಡೆಯುತ್ತಾರೆ ಇದು ಯಾವ ನ್ಯಾಯ. ಇದಕ್ಕೆ ಹಿಂದಿನ ಸರ್ಕಾರಗಳೇ ಕಾರಣ. ಎಪ್ಪತ್ತು ವರ್ಷಗಳ ಹಿಂದೆಯೇ ಶ್ಯಾಮ ಪ್ರಸಾದ್ ಮುಖರ್ಜಿ ಏಕ ದೇಶ, ಏಕ್ ಪ್ರಧಾನ್, ಏಕ್ ಧ್ವಜ್ ಎಂದು ಹೇಳಿದ್ದರು. ಅವರ ಆಸೆಯನ್ನು ಇಂದು ಪ್ರಧಾನಿ ಮೋದಿ ಈಡೇರಿಸಿದ್ದಾರೆ. ಪಾಕಿಸ್ತಾನದಲ್ಲಿ ಹಿಂದುಳಿಗೆ ಕಿರುಕುಳ ನೀಡುವುದಲ್ಲದೆ ಬಲವಂತವಾಗಿ ಮತಾಂತರ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ರಾಜಕೀಯವಾಗಿ ಹೋರಾಟ ಮಾಡುವುದನ್ನು ಬಿಟ್ಟು ಪೌರತ್ವ ಕಾಯಿದೆ ವಿರುದ್ದ ಬೆಂಕಿ ಹಚ್ಚುವ ಕೆಲಸ ಮಾಡಬಾರದು.

     ವಲಸೆ ಬಂದಿರುವ ಹಿಂದುಳಿಗೆ ಪೌರತ್ವ ನೀಡುವುದರಲ್ಲಿ ಅನ್ಯಾಯವೇನಿದೆ ಎನ್ನುವುದನ್ನು ಮೊದಲು ಅಪಪ್ರಚಾರದಲ್ಲಿ ತೊಡಗಿರುವವರು ಅರ್ಥಮಾಡಿಕೊಳ್ಳಲಿ ಎಂದು ಹೇಳಿದರು.ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಪ್ರಧಾನ ಕಾರ್ಯದರ್ಶಿ ಮುರಳಿ, ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಚಿತ್ರದುರ್ಗ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಶ್‍ಸಿದ್ದಾಪುರ, ಗ್ರಾಮಾಂತರ ಕಾರ್ಯದರ್ಶಿ ಕಲ್ಲೇಶಯ್ಯ, ಓ.ಬಿ.ಸಿ.ಅಧ್ಯಕ್ಷ ಸಂಪತ್‍ಕುಮಾರ್, ಜಯಣ್ಣ, ಮಾರುತಿ, ಸಂತೋಷ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link