ತುರುವೇಕೆರೆ:
ತುಮಕೂರು ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಗೆಲವು ನಿಶ್ಚಿತ ಎಂದು ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ದಬ್ಬೇಘಟ್ಟ ಹೋಬಳಿಯ ದಬ್ಬೇಘಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೇಸ್ ಮತ್ತು ಜೆ ಡಿ ಎಸ್ ಪಕ್ಷದ ಮುಖಂಡರುಗಳ ಸಭೆ ನಡೆಸಿ ದಬ್ಬೇಘಟ್ಟ ಗ್ರಾಮದಲ್ಲಿ ಮಾತನಾಡಿ ರಾಹುಲ್ ಗಾಂಧಿ, ಜಿ.ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನವರ ಒತ್ತಾಸೆ ಮತ್ತು ಜಿಲ್ಲೆಯ ಜೆ.ಡಿ.ಎಸ್.ಶಾಸಕರು ಮತ್ತು ಕಾರ್ಯಕರ್ತರ ಒತ್ತಡಕ್ಕೆ ಮಣಿದು ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.
ದೀನ ದಲಿತರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಏಳಿಗೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಸಾಮಥ್ರ್ಯ ದೇವೇಗೌಡರಿಗಿದ್ದು ಅವರ ಗೆಲವು ಜಿಲ್ಲೆಗೆ ಅನಿವಾರ್ಯ. ಶುಕ್ರವಾರ ಸಂಜೆ 4.30 ಕ್ಕೆ ತುರುವೇಕೆರೆ ಪಟ್ಟಣಕ್ಕೆ ಮುಖ್ಯಮಂತ್ರಿ ಹೆ.ಚ್.ಡಿ.ಕುಮಾರ್ ಸ್ವಾಮಿ ಆಗಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು. ಸುಮಾರು 30 ಸಾವಿರ ಜನರು ಸೇರುಇವ ನಿರೀಕ್ಷೆ ಇದೆ ಎಂದರು.
ಮಾಜಿ ಶಾಸಕ ಹೆಚ್.ಬಿ. ನಂಜೇಗೌಡ ಮಾಜಿ ಪ್ರದಾನಿ ದೇವೇಗೌಡರವರಿಗೆ ಮತ ಚಲಾಯಿಸುವುದು ನಮ್ಮ ಪುಣ್ಯ ಇಂತಹ ಸಂದರ್ಭ ಒದಗಿ ಬಂದಿರುವುದೇ ನಮ್ಮ ಭಾಗ್ಯವಾಗಿದೆ. ತುಮಕೂರು ಜಿಲ್ಲೆಯ ಅಭಿವೃದ್ದಿ ಪಥದಿಂದ ಕೊಂಡ್ಯೊಯಲು ಮತ್ತು ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸಲು ದೇವೇಗೌಡರು ಶ್ರಮಿಸುವುದಾಗಿ ತಿಳಿಸಿದ್ದಾರೆ. ಅವರನ್ನು ಬಹುಮತದಿಂದ ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಬೇಕಾಗಿರುವುದು ನಮ್ಮಗಳ ಜವಬ್ದಾರಿ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ರಮೇಶ್ ಗೌಡ , ಜಿ.ಪಂ. ಮಾಜಿ ಸದಸ್ಯ ಕೃಷ್ಣೇಗೌಡ, ಪಿಕಾರ್ಡ್ ಮಾಜಿ ಅಧ್ಯಕ್ಷ ಉಗ್ರೇಗೌಡ, ದಬ್ಬೇಘಟ್ಟ ಕೆಂಪೇಗೌಡ, ಪ.ಪಂ. ಮಾಜಿ ಅಧ್ಯಕ್ಷ, ಶಶಿಶೇಖರ್, ತಾ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮೀಕಾಂತ್, ಮಹಿಳಾ ಕ್ರಾಂಗ್ರೇಸ್ ಅಧ್ಯಕ್ಷೆ ಕಮಲಸ್ವರ್ಣಕುಮಾರ್, ಪ.ಪಂ. ಸದಸ್ಯ ನದೀಮ್, ಸೇರಿದಂತೆ ಜೆ.ಡಿ.ಎಸ್. ಮತ್ತು ಕಾಂಗ್ರೇಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








