ಹರಪನಹಳ್ಳಿ:
ಬೆಲೆ ಏರಿಕೆಯ ಬಿಸಿ ಕುಟುಂಭ ನಿರ್ವಹಣೆ ಹೊಣೆಹೊತ್ತ ಗೃಹಿಣಿಯರಿಗೆ ಸಂಕಷ್ಟ ತಂದಿರುವುದು, ಏರಿಕೆ ಮಾಡುವ ಬಿಜೆಪಿ ಸರ್ಕಾರಕ್ಕೇನು ಗೊತ್ತು ಎಂದು ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಬೆಲೆ ಏರಿಕೆ ಹಾಗೂ ಪೌರತ್ವ ಕಾಯ್ದೆ ವಿರೋಧಿಸಿ ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ರಂಗೋಲಿ ಹಾಕಿ ರಸ್ತೆಯಲ್ಲೆ ಈರುಳ್ಳಿ ಮಾಲೆ ಧರಿಸಿ ಅಣಕು ಅಡುಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು.
ಧಾನ್ಯಗಳು ತುಟ್ಟಿಯಾಗಿವೆ ಎಂದು ಹುಲ್ಲು ತಿನ್ನಲಾಗದು. ಏರಿಕೆ ಮಾಡುವವರ ವಿರುದ್ದ ಹೋರಾಟ ಮಾಡದಿದ್ದರೆ ಸಂಕಷ್ಟ ಪರಿಹಾರವಾಗದು ಎಂದೇ ಗೃಹಿಣಿಯರೆಲ್ಲಾ ಸಾಂಕೇತಿಕವಾಗಿ ಹೋರಾಟ ಪ್ರಾರಂಭಿಸಿದ್ದೇವೆ. ಕೂಡಲೇ ಸರ್ಕಾರ ಗಗನಕ್ಕೇರಿರುವ ಬೆಲೆಗಳನ್ನು ಜನಸಾಮಾನ್ಯರ ಕೈಗೆಟುಕುವಂತೆ ಮಾರ್ಪಾಡು ಮಾಡಲೇ ಬೇಕೆಂದು ಒತ್ತಾಯಿಸಿದರು.
ಪೌರತ್ವ ತಿದ್ದುಪಡಿ ಮಸೂದೆ ಪರಿಶೀಲನೆಯಾಗಲಿ, ಒಂದು ಕಾನೂನು ಜಾರಿಯಾಗಬೇಕಾದರೆ ದೂರಾಲೋಚನೆ ಇರಲಿ, ದುರಾಲೋಚನೆ ಬೇಡ. ಸಂವಿಧಾನದ ವಿರೋಧಿ ಮಸೂದೆ ಜಾರಿಗೆ ತರುವ ಮುನ್ನ ಸರ್ಕಾರ ಮತ್ತೊಮ್ಮೆ ಆಲೋಚನೆ ಮಾಡಲಿ ಎನ್ನುವ ಉದ್ದೇಶದಿಂದ ಶಾಂತಿಯ ಸಂಕೇತ ಬಿಳಿಬಣ್ಣವನ್ನು ರಂಗೋಲಿ ಹಾಕು ಮೂಲಕ ಪ್ರತಿಭಟನೆ ಮಾಡಿದ್ದೇವೆ. ಬೆಲೆಗಳ ಏರಿಕೆಗೆ ರಸ್ತೆಯಲ್ಲಿ ಅಣಕು ಅಡುಗೆ ಮಾಡಿದ್ದೇವೆ. ಕೂಡಲೆ ಸರ್ಕಾರ ತನ್ನ ನಿಲುವನ್ನು ಬದಲಾಯಿಸದಿದ್ದರೆ ಉಘ್ರ ಹೋರಾಟಕ್ಕೆ ಮುಂದಾಗಲಾಗುವುದು ಎಂದರು.
ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಮಹಿಳಾ ಅದ್ಯಕ್ಷೆ ಆಶಾಲತಾ ಮಾತನಾಡಿ. ಬೆಲೆ ಏರಿಕೆ ಈರುಳ್ಳಿ ಮತ್ತು ಗ್ಯಾಸ್ ಒಂದೇ ಅಲ್ಲ ಅಗತ್ಯ ವಸ್ತುಗಳ ಮೇಲೂ ಗಣನೀಯವಾಗಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಸಾಂಕೇತಿಕ ಹೋರಾಟಕ್ಕೆ ಮುಂದಾಗಿದ್ದೇವೆ. ಸಂವಿಧಾನ ವಿರೋಧಿ ಪೌರತ್ವ ನೀತಿ ತಿದ್ದುಪಡಿ ಸಲ್ಲದು. ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ, ರಾಜ್ಯಮಟ್ಟವಷ್ಟೇ ಅಲ್ಲ ದೇಶಾದ್ಯಂತ ಹೋರಾಟಕ್ಕೆ ಮಹಿಳಾ ಸಂಘಟನೆ ಮುಂದಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪುಷ್ಪಲತಾ, ಹಡಗಲಿ ತಾಲೂಕು ಅದ್ಯಕ್ಷೆ ಅಂಬುಜಾ, ಹಗರಿಬೊಮ್ಮನಹಳ್ಳಿ ತಾಲೂಕು ಅದ್ಯಕ್ಷೆ ಯಶೋಧ, ಕೂಡ್ಲಿಗಿ ತಾಲೂಕಾಧ್ಯಕ್ಷೆ ನೇತ್ರಾವತಿ, ತಾಪಂ ಮಾಜಿ ಸದಸ್ಯೆ ಜಯಲಕ್ಷ್ಮಿ, ನಾಗರತ್ನಮ್ಮ, ನೇತ್ರಾವತಿ ಗುಂಡಗತ್ತಿ, ವನಜಾಕ್ಷಿ, ರತ್ನಮ್ಮ, ಕವಿತಾ ಸುರೇಶ್, ಅಂಬಿಕಾ, ಡಿ,ರೆಹಮಾನ್, ಚಿಕ್ಕೇರಿ ಬಸಪ್ಪ, ಉದಯಶಂಕರ್, ಮಾಂತೇಶ್, ಶಮಿಉಲ್ಲಾ, ಅಡಿವಿಹಳ್ಳಿ ರಾಜಪ್ಪ, ಮಜೀದ್, ಡಾ.ಮುಜಾವರ್ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ