ದಾವಣಗೆರೆ :
ಕಾಂಗ್ರೆಸ್ ಸಾಧನೆಗಳನ್ನು ಮನೆ, ಮನೆಗೂ ತಲುಪಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಕೆಪಿಸಿಸಿ ಸದಸ್ಯೆ ಬಲ್ಕೀಷ್ ಬಾನು ಕರೆ ನೀಡಿದರು.
ಮಾಯಕೊಂಡದ ಸಮುದಾಯ ಭವನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರ ಪಕ್ಷಗಳ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನಸಾಮಾನ್ಯರ ವಿರೋಧಿಯಾಗಿದ್ದು, ಈ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಸಾರ್ವಜನಿಕರಿಗೆ ತಿಳಿಸವುದರ ಜೊತೆಗೆ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಸಾಧನೆ ಮನೆ ಮನೆಗೆ ತಲುಪಿಸಿ ನಮ್ಮ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಮತ ಯಾಚಿಸಬೇಕೆಂದು ಕಿವಿಮಾತು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ, ಕೆಪಿಸಿಸಿ ಸದಸ್ಯ ಡಾ.ವೈ.ರಾಮಪ್ಪ ಮಾತನಾಡಿ, ಎಲ್ಲರ ಶ್ರಮದಿಂದ ಕಾಂಗ್ರೆಸ್ ಪಕ್ಷ ಮಾಯಕೊಂಡ ವಿಧಾನ ಸಭಾ ಕ್ಷೇತ್ರದಲ್ಲಿ ಸಶಕ್ತವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸರಳ ವ್ಯಕ್ತಿತ್ವದ ಅಭ್ಯರ್ಥ ಮಂಜಣ್ಣನ ಗೆಲುವಿಗಾಗಿ ನಮ್ಮಗಳ ಮಧ್ಯೆಯಲ್ಲಿರುವ ಸಣ್ಣಪುಟ್ಟ ವ್ಯತ್ಯಾಸವನ್ನು ಮರೆತು ಎಲ್ಲರೂ ಶಕ್ತಿಮಿರಿ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಎಚ್.ಸಿ. ಗುಡ್ಡಪ್ಪ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ನಾಯಕರ ಪ್ರಚಾರ ಸಭೆಗಳಲ್ಲಿ `ಮೋದಿ.. ಮೋದಿ’ ಎಂದು ಕೂಗಿಸುವ ಬಿಜೆಪಿಗೆ ಮಾನ ಮರ್ಯಾದೆ ಇಲ್ಲವಾಗಿದೆ. ಕಾಂಗ್ರೆಸ್ ನಾಯಕರು ಜೆಡಿಎಸ್ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಂಡು, ವಿಶ್ವಾಸಕ್ಕೆ ಪಡೆದು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ರಣತಂತ್ರ ರೂಪಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯ ಓಬಳೇಶಪ್ಪ ಮಾತನಾಡಿ, ನೆಹರೂ ಮನೆತನ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಇಂದಿರಾ ಗಾಂಧಿ ಬಡವರ ಏಳಿಗೆಗೆ ಹಲವು ಕಾರ್ಯಕ್ರಮ ತಂದಿದ್ದಾರೆ. ಕಾಂಗ್ರೆಸ್‍ನಿಂದಲೇ ಮಾತ್ರ ಬಡ ಮತ್ತು ಮಧ್ಯಮ ವರ್ಗದ ಜನರ ಉದ್ಧಾರ ಸಾಧ್ಯವಾಗಿದ್ದು, ನಮ್ಮ ಕಾರ್ಯಕರ್ತರು ಕಾಂಗ್ರೆಸ್‍ನ ಕೊಡುಗೆಯನ್ನು ಜನರಿಗೆ ತಲುಪಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಮುಖಂಡರಾದ ರಾಘವೇಂದ್ರ ನಾಯ್ಕ, ಮಾಯಕೊಂಡ ವೆಂಕಟೇಶ್, ಹೀರಾನಾಯ್ಕ, ಜಿ.ಮಲ್ಲಿಕಾರ್ಜುನಪ್ಪ, ನಲಕುಂದ ಹಾಲೇಶ್, ಆವರಗೆರೆ ಚಂದ್ರು, ಅನೀಸ್ ಪಾಷ, ಹನುಮಂತಪ್ಪ, ಕೊಡಗನೂರು ಸಿದ್ದಪ್ಪ, ಮುಖಂಡರಾದ ಬಿ.ಸಿ. ಬಸವರಾಜಪ್ಪ, ಕೊಟ್ರೇಶ್ ನಾಯ್ಕ, ಮುರುಗೇಶ್, ಪ್ರವೀಣ್ ನಿಂಬಾಳ್ಕರ್, ಕೆ.ಆರ್.ಲಕ್ಷ್ಮಣ, ಮನೋಜ್, ಅನಿಲ್, ಜಾಫರ ಷರೀಫ್, ತೋಳಜ್ಜರ ಶಿವು, ರವಿ, ರುದ್ರೇಶ್ ಮತ್ತಿತರರು ಭಾಗವಹಿಸಿದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ ಸ್ವಾಗತಿಸಿ, ನಿರೂಪಿಸಿದರು.