ಚಿತ್ರದುರ್ಗ:
ಪ್ರತಿ ತಿಂಗಳ ಕೊನೆ ಭಾನುವಾರದಂದು ಸೇವಾದಳದಿಂದ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಂತೆ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇವಾದಳದಿಂದ ಧ್ವಜಾರೋಹಣ ನೆರವೇರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಅಶ್ರಫ್‍ಆಲಿ ಮಾತನಾಡಿ ಸೇವಾದಳ ಎಂದರೆ ಶಿಸ್ತಿಗೆ ಹೆಸರುವಾಸಿಯಾದುದು. ಸೇವಾದಳವೆಂದರೆ ರಾಜಕೀಯವಿರುವುದಿಲ್ಲ. ಸಂಘಟನೆಯೇ ಇದರ ಮೂಲ ಉದ್ದೇಶ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕಿನಲ್ಲಿ ಸೇವಾದಳದಿಂದ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಹೇಳಿದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಪುಣ್ಯದಿನ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್‍ರವರ ಜನ್ಮದಿನದ ಪ್ರಯುಕ್ತ ಅ.31 ರಂದು ಬೆಳಿಗ್ಗೆ 10-30 ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇವಾದಳದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಮುಂಚೂಣಿ ಘಟಕದ ಅಧ್ಯಕ್ಷರುಗಳು, ವಿವಿಧ ಸೆಲ್‍ನ ಅಧ್ಯಕ್ಷರು ಪದಾಧಿಕಾರಿಗಳು ತಪ್ಪದೆ ಆಗಮಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ಪ್ರತಿ ತಿಂಗಳ ಕೊನೆ ಭಾನುವಾರದಂದು ಜಿಲ್ಲಾ ಕಾಂಗ್ರೆಸ್ ಸೇವಾದಳದಿಂದ ನಡೆಯುವ ಧ್ವಜಾರೋಹಣಕ್ಕೆ ಪಕ್ಷದ ಬೇರೆ ಬೇರೆ ವಿಭಾಗದ ಮುಖಂಡರುಗಳನ್ನು ಆಹ್ವಾನಿಸಿ ಸೇವಾದಳದ ಮಹತ್ವವನ್ನು ತಿಳಿಸಿ. ಜಿಲ್ಲೆಯಲ್ಲಿ ಸೇವಾದಳ ಬಲಿಷ್ಟವಾಗಬೇಕಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದರು.
ಚಿತ್ರದುರ್ಗ ಬ್ಲಾಕ್ ಸೇವಾದಳದ ಸಂಘಟಕಿ ಇಂದಿರಾ, ಚಳ್ಳಕೆರೆ ಬ್ಲಾಕ್‍ನ ನೇತ್ರಾವತಿ, ಸೈಫುಲ್ಲಾ, ಪಾಪಣ್ಣ, ಕರಿಬಸಮ್ಮ, ಹರ್ಷಿದ, ಮಂಜಮ್ಮ, ಮನ್ಸೂರ್, ಹೊನ್ನೂರಪ್ಪ, ಸರ್ದಾರ್ ಮಜೀದ್, ಇರ್ಷಾದ್ ಮೌಲಾನ, ಅಬ್ದುಲ್ ನವಾಬ್, ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.








