ಪಾವಗಡ
ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳಿದ್ದು,ಓಟ್ಟು ಮತದಾರರು ಸಂಖ್ಯೆ 29600 ಇದ್ದು,29 ರಂದು ನಡೆದ ಚುನಾವಣೆಯಲ್ಲಿ ಶೇಕಡ 82 ರಷ್ಟು ಮತದಾನವಾಗಿದ್ದು,ಶುಕ್ರವಾರ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ 20 ಅಭ್ಯರ್ಥಿಗಳು ಜಯಗಳಿಸಿ ವಿಜಯೋತ್ಸವ ಸಂಭ್ರಮಿಸಿದರೆ,ಜೆ.ಡಿ.ಎಸ್ ಅಭ್ಯರ್ಥಿಗಳು ಇಬ್ಬರು ಮಾತ್ರ ಜಯಗಳಿಸಿ ಜೆ.ಡಿ.ಎಸ್ ಪಕ್ಷ ನೆಲ ಕಚ್ಚಿದೆ.ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ,ಪಕ್ಷೇತರ ಅಭ್ಯರ್ಥಿ 9 ಮತಗಳ ಹಂತರದಿಂದ ಗೆದ್ದಿದ್ದಾರೆ.
23 ವಾರ್ಡುಗಳಿಗೆ 23 ಕಾಂಗ್ರೇಸ್, 23 ಜೆ.ಡಿ.ಎಸ್,12 ಬಿ.ಜೆ.ಪಿ, 13 ಸ್ವತಂತ್ರ ಅಭ್ಯರ್ಥಿಗಳು,ಬಹುಜನ ಸಮಾಜ ಪಾರ್ಟಿ 2 ಸೇರಿ ಒಟ್ಟು 73 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು, ಮೇ 29 ರಂದು ಚುನಾವಣೆ ನಡೆಸಿದ್ದು, ಮೇ 31 ಮತ ಎಣಿಕೆ ಕಾರ್ಯ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜುನಲ್ಲಿ ಬಿಗಿ ಪೋಲೀಸ್ ಬಂದೋಭಸ್ತ್ ನಲ್ಲಿ ಎಣಿಕೆ ಕಾರ್ಯ ನಡೆಸಲಾಯಿತು,ಬೆಳಿಗ್ಗೆ 8 ಘಂಟೆಗೆ ಆರಂಭವಾದ ಮತ ಎಣಿಕೆ 10- 30 ಕ್ಕೆ ಮುಕ್ತಾಯವಾಯಿತು.
ವಾರ್ಡ್‍ಗಳ ಫಲಿತಾಂಶದ ವಿವರ
1 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಗೋಪಾಲ್‍ಕೃಷ್ಣ 129 ಮತಗಳು ಪಡೆದುಕೊಂಡರೆ,ಕಾಂಗ್ರೆಸ್ ಅಭ್ಯರ್ಥಿ ನಾಗಭೂಷಣರೆಡ್ಡಿ 448 ಮತ ಪಡೆದು ಜಯಗಳಿಸಿದರು,2 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ವಸಂತಕುಮಾರ್ 176 ಮತ ಪಡೆದಿದ್ದು,ಬಿ.ಜೆ.ಪಿ ಅಭ್ಯರ್ಥಿ ಪಿ.ಹನುಮಂತರಾಯ 14 ಮತ ಪಡೆದರೆ,ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿ.ವೇಲುರಾಜು 381 ಮತ ಪಡೆದು ಜಯಶೀಲರಾದರು,3 ನೇ ವಾರ್ಡ್‍ನಿಂದ ಬಿ.ಜೆ.ಪಿ ಪಕ್ಷದಿಂದ ಲಕ್ಷ್ಮೀನರಸಮ್ಮ 19 ಪಡದಿದ್ದು,ಜೆ.ಡಿ.ಎಸ್ ಅಭ್ಯರ್ಥಿ ಸೌಮ್ಯ.ಎಸ್.ಎ 257 ಮತ ಪಡೆದರೆ,ಕಾಂಗ್ರೆಸ್ ಅಭ್ಯರ್ಥಿ ವಿ.ಗೀತಾ 350 ಮತ ಪಡೆದು ಜಯಗಳಿಸಿದರು.4 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಈರಣ್ಣ 228 ಮತ ಪಡೆದರೆ,ಬಿ.ಜೆ.ಪಿ ಅಭ್ಯರ್ಥಿ ಎಂ.ಲೋಕನಾಥ್ 28 ಮತ ಪಡೆದಿದ್ದು,ಕಾಂಗ್ರೆಸ್ ಅಭ್ಯರ್ಥಿ ಜಿ.ಸುದೇಶ್‍ಬಾಬು 592 ಅತಿ ಹೆಚ್ಚು ಮತ ಪಡೆದು ಜಯಭೇರಿಗಳಿಸಿದರು, 5 ನೇ ವಾರ್ಡ್‍ನಿಂದ ಬಿ.ಜೆ.ಪಿ ಅಭ್ಯರ್ಥಿ ಜಿ.ಎ.ಬಾಲಾಜಿ 86 ಪತಗಳಿಸಿದರೆ,ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಲಕ್ಷ್ಮೀನರಸಪ್ಪ 192 ಮತ ಪಡೆದರೆ,ಕಾಂಗ್ರೆಸ್ ಅಭ್ಯರ್ಥಿವಿ.ಎನ್.ರವಿಕುಮಾರ್ 239 ಮತ ಪಡೆದು ವಿಜೇತರಾದರು.
6 ನೇ ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿದೇವಿ 360 ಮತ ಪಡೆದು ವಿಜೇತರಾದರೆ,ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ವಾಣಿ 291,ಕಾಂಗ್ರೆಸ್ ಅಭ್ಯರ್ಥಿ ಲೀಲಾವತಿ 351 ಮತ ಪಡೆದು ಸೋತ್ತಿದ್ದಾರೆ.
7 ನೇವಾರ್ಡ್‍ನಿಂದ ಭಾರತೀಯ ಜನತಾ ಪಾರ್ಟಿಯಿಂದ ಬಾಲಚಂದ್ರನಾಯಕ 36 ಮತ,ಜೆ.ಡಿ.ಎಸ್.ಪಕ್ಷದ ಅಭ್ಯರ್ಥಿ ಶಿವಪ್ಪನಾಯಕ 150 ಮತ,ಪಕ್ಷೇತರ ಅಭ್ಯರ್ಥಿ ನಾರಾಯಣಮೂರ್ತಿ 309 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಪಿ.ಬಾಲಸುಬ್ರಮಣ್ಯಂ 360 ಮತ ಪಡೆದು ಜಯಶೀಲರಾದರು.
ವಾರ್ಡ್ 8 ರಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಲತೀಫ್ 303 ಮತ ಪಡೆದರೆ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರವಿ 644 ಮತ ಪಡೆದು ವಿಜೇತರಾದರು.
9 ನೇ ವಾರ್ಡ್‍ನಿಂದ ಜೆ.ಡಿ.ಎಸ. ಪಕ್ಷದ ಅಭ್ಯರ್ಥಿ ಕೆ.ಗಂಗರತ್ನಮ್ಮ 105 ಮತ,ಬಿ.ಜೆ.ಪಿ ಪಕ್ಷದಿಂದ ನಿರ್ಮಲಮ್ಮ 71 ಮತ,ಪಕ್ಷೇತರ ಅಭ್ಯರ್ಥಿ ಜಯಶ್ರೀ ಪಿ.ಎ 95 ಮತ,ಪಕ್ಷೇತರ ಅಭ್ಯರ್ಥಿ ಡಿ.ಸತ್ಯಭಾಮ 161 ಮತ ಪಡೆದರೆ,ಕಾಂಗ್ರೆಸ್ ಅಭ್ಯರ್ಥಿ ಗಂಗಮ್ಮ 162 ಮತ ಪಡೆದು 1 ಮತದಿಂದ ಜಯಗಳಿಸಿದರು.
10 ನೇ ವಾರ್ಡ್‍ನಿಂದ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಲಕ್ಷ್ಮೀನರಸಮ್ಮ 197 ಮತ,ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಗಾಯಿತ್ರಿ 25 ಮತ,ಪಕ್ಷೇತರ ಅಭ್ಯರ್ಥಿನರಸಮ್ಮ24 ಮತ,ಪಕ್ಷೇತರ ಅಭ್ಯರ್ಥಿ ಪಾರ್ವತಮ್ಮ 63 ಮತ ಪಡೆದರೆ ಕಾಂಗ್ರೇಸ್ ಅಭ್ಯರ್ಥಿ ಜಿ.ಉಮಾದೇವಿ 342 ಮತ ಪಡೆದು ಜಯಗಳಿಸಿದರು.
11 ನೇ ವಾರ್ಡ್‍ನಿಂದ ಜೆ.ಡಿ.ಎಸ್. ಅಭ್ಯರ್ಥಿ ಸುನಂದ 137 ಮತ,ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಚಂದ್ರಕಲಾಬಾಯಿ 138 ಮತ,ಪಕ್ಷೇತರ ಅಭ್ಯರ್ಥಿ ಪೆದ್ದಗಂಗಮ್ಮ 29 ಮತ,ಪಕ್ಷೇತರ ಅಭ್ಯರ್ಥಿ ಮಾರುತಮ್ಮ 209 ಮತ ಪಡೆದರೆ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಿ.ಧನಲಕ್ಷ್ಮಿ 264 ಮತ ಪಡೆದು ಜಯಶೀಲರಾದರು.
12 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದಿಂದ ಆದಿಲಕ್ಷ್ಮಿ 355 ಮತ ಪಡೆದರೆ,ಕಾಂಗ್ರೆಸ್ ಪಕ್ಷದಿಂದ ಅನ್ನಪೂರ್ಣಮ್ಮ 416 ಮತ ಪಡೆದು ವಿಜೇತರಾದರು.
13 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಅಭ್ಯರ್ಥಿ ಪಿ.ಎನ್.ನಟರಾಜು 187 ಮತ,ಬಿ.ಜೆ.ಪಿ ಪಕ್ಷದಿಂದ ರವಿ 119 ಮತ,ಪಕ್ಷೇತರ ಅಭ್ಯರ್ಥಿ ಹೆಚ್.ತಿಮ್ಮರಾಜು 173 ಮತ ಪಡೆದರೆ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರವಣಪ್ಪ 277 ಮತ ಪಡೆದು ಜಯಗಳಿಸಿದರು.
14 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ರಾಮಾಂಜಿನಪ್ಪ 208 ಮತ ಪಡೆದರೆ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಿ.ಹೆಚ್.ರಾಜೇಶ್ 439 ಮತ ಪಡೆದು ಜಯಶೀಲರಾದರು.
15 ನೇ ವಾರ್ಡ್‍ನಿಂದ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ರಮ್ಯ 34 ಮತ,ಜೆ.ಡಿ.ಎಸ್ ಅಭ್ಯರ್ಥಿ ಎಸ್,ಶ್ರೀವಾಣಿ 53 ಮತ,ಪಕ್ಷೇತರ ಅಭ್ಯರ್ಥಿ 68 ಮತ,ಕಾಂಗ್ರೆಸ್ ಅಭ್ಯರ್ಥಿ ಸುಧಾಲಕ್ಷ್ಮಿ 347 ಮತ ಪಡೆದು ಜಯಗಳಿಸಿದರು.
16 ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ ನಾಗರಾಜು 371 ಮತ ಪಡೆದರೆ,ಜೆ.ಡಿ.ಎಸ್ ಅಭ್ಯರ್ಥಿ ಗೊರ್ತಿನಾಗರಾಜು 428 ಮತ ಪಡೆದು ಜಯಶೀಲರಾದರು.
17 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಜಿ.ಎ.ವೆಂಕಟೇಶ್ 173 ಮತ,ಪಕ್ಷೇತರ ಅಭ್ಯರ್ಥಿ ಅನಿಲ್‍ಕುಮಾರ್.ಹೆಚ್ 129 ಮತ,ಇಮ್ರಾನ್ ಉಲ್ಲಾ 12 ಮತ ಪಡೆದರೆ,ಕಾಂಗ್ರೆಸ್ ಅಭ್ಯರ್ಥಿ ಮಹಮದ್ ಇಮ್ರಾನ್ 344 ಮತ ಪಡೆದು ಜಯಗಳಿಸಿದರು.
18 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಕಾಮಾಕ್ಷಮ್ಮ 157 ಮತ,ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಸವುದಾ 9 ಮತ ಪಡೆದರೆ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿಕಲಾ 339 ಮತ ಪಡೆದು ಜಯಗಳಿಸಿದರು.
19ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಯೂನೀಸ್ 311 ಮತ,ಬಾರತೀಯ ಜನತಾ ಪಾರ್ಟಿ ಅಭ್ಯರ್ಥಿ ನರೇಶ್‍ಕುಮಾರ್.ಎನ್ 24 ಮತ,ಕಾಂಗ್ರೆಸ್ ಅಭ್ಯರ್ಥಿ ಮಾಲೀನ್‍ತಾಜ್ 357 ಮತ ಪಡೆದು ಜಯಶೀಲರಾದರು.
20 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ನಂದಿನಿ.ಎನ್ 162 ಮತ ಪಡೆದರೆ,ಕಾಂಗ್ರೆಸ್ ಅಭ್ಯರ್ಥಿ ಜಾನಃವಿ 241 ಮತ ಪಡೆದು ಜಯಶೀಲರಾದರು.
21 ನೇ ವಾರ್ಡ್‍ನಿಂದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಸುಬ್ಬರಾಯಪ್ಪ 227 ಮತ ಪಡೆದರೆ,ಪಿ.ಕೆ.ವಿಜಯ್‍ಕುಮಾರ್ 445 ಮತ ಪಡೆದು ಜಯಗಳಿಸಿದರು.
22 ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ 234 ಮತ,ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಬೀಮಕ್ಕ 20 ಮತ,ಪಕ್ಷೇತರ ಅಭ್ಯರ್ಥಿ ಅಂಜಲಿ 82 ಮತ ಪಡೆದರೆ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಸುಜಾತ 338 ಮತ ಪಡೆದು ಜಯಶೀಲರಾದರು.
23 ನೇ ವಾರ್ಡ್ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಅಂಜಪ್ಪ 418 ಮತ ಪಡೆದರೆ,ಬಹುಜನ ಸಮಾಜ ಪಾರ್ಟಿ 7 ಮತಗಳಿಸಿದರೆ,ಕಾಂಗ್ರಸ್ ಅಭ್ಯರ್ಥಿ ರಾಮಾಂಜಿನಪ್ಪ 459 ಮತ ಪಡೆದು ಜಯಗಳಿಸಿದ್ದಾರೆ.
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಮಂಗಳವಾಡ ಜಿ.ಪಂ.ಸದಸ್ಯರಾದ ಹೆಚ್.ವಿ.ವೆಂಕಟೇಶ್ ಮಾತನಾಡಿ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನಗಳಿಸಲು ನಮ್ಮ ತಂದೆ ವೆಂಕಟರಮಣಪ್ಪ ಮಾಡಿದ ವಿವಿಧ ಅಭಿವೃದ್ಧಿ ಕೆಲಸಗಳಿಂದ ಪಕ್ಷ ಸಂಘಟನೆಯಾಗಿ ಬೆಳೆದು 20 ಅಭ್ಯರ್ಥಿಗಳು ಸಾಧ್ಯವಾಗಿದ್ದು,ಇನ್ನೂ ಹೆಚ್ಚಿನದಾಗಿ ಪಟ್ಟಣದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶ್ರಮವಹಿಸುವುದಾಗಿ ತಿಳಿಸಿದರು.
ತಾಲ್ಲೂಕು ಕಛೇರಿಯ ನಿವೃತ ಸಹಾಯಕಿ ಗಂಗಮ್ಮ 1 ಮತದಿಂದ ವಿಜೇತರಾಗಿದ್ದಾರೆ,ತಾಲ್ಲೂಕು ಕಛೇರಿಯಲ್ಲಿ ಸಹಾಯಕರಾಗಿ ನಿರ್ವಹಿಸಿ ನಿವೃತರಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಂಗಮ್ಮ 9 ನೇ ವಾರ್ಡ್‍ನಿಂದ ಪುರಸಭೆ ಚುನಾವಣೆಯಲ್ಲಿ ಸ್ವರ್ದೆಸಿ 1 ಒಂದು ಮತದಿಂದ ಜಯಶೀಲರಾಗಿದ್ದು, ಒಂದು ಮತ ಎಷ್ಟು ಪ್ರಮುಖ್ಯತೆ ಎಂಬುವುದು ಈ ಗೆಲ್ಲುವಿಗೆ ಸಾಕ್ಷಿಯಾಗಿದೆ.
ಗಂಗಮ್ಮ ಮಾತನಾಡಿ ನನ್ನ ಅದೃಷ್ಟ ನನ್ನ ಕಡೆ ಇದ್ದಿದ್ದರಿಂದ ನಾನು ಗೆದ್ದಿದ್ದೇನೆ,ನನ್ನ ಗೆಲ್ಲುವುಗೆ ಸಹಕಾರ ನೀಡಿದ ಮತದಾರರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮತನೀಡಿದ ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದವರು ಪಕ್ಷ ರಹಿತವಾಗಿ ನಾನು ವಾರ್ಡ್‍ನ್ನು ಅಭಿವೃದ್ಧಿ ಪಡೆಸಲು ಶ್ರಮವಹಿಸುತ್ತೆನೆ ಎಂದಿದ್ದಾರೆ.6 ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿದೇವಿ ಟ್ರಾಕ್ಟರ್ ಚಿನ್ನೆಯಿಂದ ಗೆದ್ದಿದರಿಂದ ಟ್ರಾಕ್ಟರ್‍ನಲ್ಲಿ ಕುಳಿತು ಮೆರವಣೆಗೆ ವಿಶೇಷವಾಗಿತ್ತು.ಗೆದ್ದ ಅಭ್ಯರ್ಥಿಗಳ ಅಭಿಮಾನಿಗಳಿಂದ ಕಿರುಚಾಟ,ಕೂಗು,ಕುಣಿದಾಟದಿಂದ ಸಂಭ್ರ ವ್ಯಕ್ತ ಪಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ