ದಾವಣಗೆರೆ:
ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿ ಕೇಂದ್ರದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 4,10 ಮತ್ತು 17ನೇ ವಾರ್ಡ್ನಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ಸುಮಾರು 16 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ನಗರದ ಮಂಡಕ್ಕಿಭಟ್ಟಿ ಲೇಔಟ್ ನಲ್ಲಿನ ಎಲ್ಲಾ ಮುಖ್ಯ ಮತ್ತು ಅಡ್ಡ ರಸ್ತೆಗಳಿಗೆ ಸಿಮೇಂಟಿಕರಣ ಹಾಗೂ ಸಿಸಿ ಚರಂಡಿ ನಿರ್ಮಾಣ, ಕಲ್ಯಾಣಿ ಅಭಿವೃದ್ಧಿ ಹಾಗೂ ಚನ್ನಗಿರಿ ರಂಗಪ್ಪ ಗಡಿಯಾರ ಕಂಬದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಅವರು ಮಾತನಾಡಿದರು.
ಮೋದಿಯೂ ಮನೆಗೆ:
ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಇದು ಈಗಾಗಲೇ ಜನತೆಗೆ ಗೊತ್ತಾಗಿದೆ. ದಾವಣಗೆರೆ ಸಂಸದರು ಸೇರಿದಂತೆ ನರೇಂದ್ರ ಮೋದಿಯವರನ್ನು ಜನತೆ ಮನೆಗೆ ಕಳುಹಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ದಿ ನಿರೀಕ್ಷಿಸಬಹುದು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಬಂದ ಎಲ್ಲಾ ಪಕ್ಷಗಳ ಆಡಳಿತವನ್ನು ಜನತೆ ತಿರಸ್ಕರಿಸಿರುವುದೇ ಸಾಕ್ಷಿ ಎಂದು ರಾಜಕೀಯ ಬೆಳವಣಿಗೆಗಳನ್ನು ಉದಾಹರಣೆ ಸಮೇತ ವಿವರಿಸಿದ ಅವರು ದೇಶದಲ್ಲಾಗಲಿ, ರಾಜ್ಯದಲ್ಲಾಗಲೀ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುವ ವೇಳೆ ಹೇಗಿತ್ತು. ಬೇರೆ ಪಕ್ಷಗಳ ಆಡಳಿತ ಯಾವ ರೀತಿ ಇದೇ ಎಂಬುದನ್ನು ಜನತೆ ತುಲನೆ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ನೀಡುತ್ತಾ ಬರುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಚನ್ನಗಿರಿ ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಜಿ.ಸಿ.ನಿಂಗಪ್ಪ, ಉಪ ಮೇಯರ್ ಕೆ.ಚಮನ್ ಸಾಬ್, ಆಯುಕ್ತ ವಿರೇಂದ್ರ ಕುಂದಗೋಳ, ಪಾಲಿಕೆ ಸದಸ್ಯರಾದ ಎ.ಬಿ.ರಹೀಂ, ಲಕ್ಷ್ಮೀದೇವಿ ಬಿ.ವೀರಣ್ಣ, ಪಿ.ಎನ್.ಚಂದ್ರಶೇಖರ್, ಗೌಡ್ರು ರಾಜಶೇಖರ್, ಹೆಚ್.ತಿಪ್ಪಣ್ಣ, ಷೇಕ್ಅಹ್ಮದ್, ಮುಖಂಡರುಗಳಾದ ಹಬೀಬುಲ್ಲಾ ಸಾಬ್, ಮುನ್ನಾ, ಅಕ್ಬರ್, ದಾದಾಪೀರ್, ಎಸ್.ಮಲ್ಲಿಕಾರ್ಜುನ್, ಉಮೇಶ್, ಗೌಡ್ರು ಚನ್ನಬಸಪ್ಪ, ಜೆ.ಕೆ.ಕೊಟ್ಟಬಸಪ್ಪ, ಕಾರ್ಯಪಾಲಕ ಅಭಿಯಂತರಾದ ಗುರುಪಾದಯ್ಯ, ಶ್ರೀಮತಿ ಭಾರತಿ, ಚಂದ್ರಶೇಖರ್, ಗುತ್ತಿಗೆದಾರರಾದ ಎಟಿಕೆ ರಮೇಶ್, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








