ಚಿತ್ರದುರ್ಗ
ಕೆರೆಗಳು ಕಸವನ್ನು ಹಾಕುವ ತೊಟ್ಟಿಗಳಲ್ಲ, ಅವುಗಳು ನೀರನ್ನು ಸಂಗ್ರಹ ಮಾಡುವ ಜಲ ತೊಟ್ಟಿಗಳಾಗಿವೆ ಅವುಗಳನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರಮಠ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ನಗರಸಭೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಾಪೂಜಿ ಸಮೂಹ ವಿದ್ಯಾ ಸಂಸ್ಥೆಗಳು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ ವಿಜ್ಞಾನ ಕೇಂದ್ರ, ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆ, ರೋಟರಿ ಇನ್ನರವ್ಹೀಲ್, ಲಯನ್ಸ್ ಕ್ಲಬ್ ಹಾಗೂ ಚಿತ್ರದುರ್ಗ ಮಲ್ಲಾಪುರ ಮತ್ತು ಪಿಳ್ಳಕೇರನಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕಿನ ಪಿಳ್ಳೇಕೆರನಹಳ್ಳಿಯಲ್ಲಿ ಮಲ್ಲಾಪುರ ಕೆರೆ ಸ್ವಚ್ಚತಾ ಕಾರ್ಯ ಚಾಲನಾ ಅಭಿಯಾನ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೇಸಿಗೆ ಕಾಲದಲ್ಲಿ ನೀರು ಎಲ್ಲರಿಗೂ ಅಗತ್ಯವಾಗಿದೆ, ಇದರಿಂದ ನಮ್ಮಲ್ಲಿ ಇರುವ ವಿವಿಧ ರೀತಿಯ ನೀರಿನ ಸಂಗ್ರಹಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಣೆ ಮಾಡಬೇಕಿದೆ ಅದಕ್ಕೆ ಯಾವುದೇ ರೀತಿಯ ಕಸವನ್ನು ಹಾಕದೇ ಸ್ವಚ್ಚವಾಗಿ ಇಟ್ಟುಕೊಳ್ಳುವುದರ ಮೂಲಕ ನೀರಿನ ಮೂಲವನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಬರಿ ಸರ್ಕಾರದ್ದು ಮಾತ್ರವಲ್ಲದೆ ಎಲ್ಲಾ ನಾಗರೀಕರ ಮೇಲೂ ಇದೆ ಇದನ್ನು ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು.
ಇಲ್ಲಿನ ಮಲ್ಲಾಪುರದ ಕರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿದ್ದರು ಸಹಾ ಅದು ಬಳಕೆಗೆ ಬಾರದ ರೀತಿಯಲ್ಲಿದೆ ಇದರಲ್ಲಿನ ಕಸವನ್ನು ಹೊರಗಡೆ ತೆಗೆಯುವ ಕೆಲಸವಾಗಬೇಕಿದೆ. ಇದರಿಂದ ನೀರು ಸ್ವಚ್ಚವಾಗಿದ್ದರೆ ನೀರಿನ ಒಳಗಡೆ ಇರುವ ಜಲಚರ ಪ್ರಾಣೀಗಳೀಗಾಗಲಿ ಮೇಲ್ಗಡೆ ಇರುವ ಜನ ಮತ್ತು ಜಾನುವಾರುಗಳಿಗೆ ತೊಂದರೆಯಾಗುವುದಿಲ್ಲ, ಇದರ ಬಗ್ಗೆ ಎಲ್ಲರು ಸಹಾ ಅಲೋಚನೆ ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ನೀರು ನಮ್ಮಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಸಹಾ ಅಗತ್ಯವಾಗಿದೆ ನಮ್ಮ ಹಿರಿಯರು ಸಂರಕ್ಷಣೆ ಮಾಡಿದ ನೀರನ್ನು ನಾವು ಬಳಕೆ ಮಾಡುತ್ತಿದ್ದೇವೆ ಹಾಗೆಯೇ ನಮ್ಮ ಮುಂದಿನ ಪೀಳಿಗೆಗೆ ನಾವು ಸಹಾ ನೀರನ್ನು ನೀಡಬೇಕಿದೆ ಈಗಲೇ ನಾವುಗಳು ಅವುಗಳನ್ನು ಖಾಲಿ ಮಾಡಿದರೆ ಹೇಗೆ ಅದ್ದರಿಂದ ನೀರಿನ ಮೂಲ ಮತ್ತು ಸಂರಕ್ಷಣೆ ಅಗತ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಮುಂದಿನ ಶನಿವಾರದಿಂದ ಸ್ವಚ್ಚ ಶನಿವಾರವನ್ನಾಗಿ ಆಚರಣೆ ಮಾಡಲಾಗುತ್ತದೆ ಇದರಿಂದ ಆಯಾ ಗ್ರಾಮದಲ್ಲಿನ ಸ್ವಚ್ಚರೆಗೆ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲಾಗುತ್ತದೆ ಇದೇ ರೀತಿ ಜಲದ ಬಗ್ಗೆಯೂ ಸಹಾ ಜಾಗೃತಿಯನ್ನು ಮೂಡಿಸಬೇಕಿದೆ. ಇಲ್ಲಿ ಉತ್ತಮವಾದ ಕೆರೆ ಇದೆ ಆದರೆ ಇರದಲ್ಲಿ ಗಲೀಜು ತುಂಬಿದೆ ಇದನ್ನು ಸ್ವಚ್ಚ ಪಡಿಸುವ ಕುರಿತು ಜಿಲ್ಲಾಡಳಿತದ ಜೊತೆ ಮಾತನಾಡುವುದಾಗಿ ತಿಳಿಸಿದರು.
ನಗರಸಭೆ ಪೌರಾಯುಕ್ತ ಚಂದ್ರಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್ ದಿಂಡಲಕೊಪ್ಪ, ವಕೀಲರ ಸಂಘದ ಅಧ್ಯಕ್ಷ ಎನ್.ಬಿ ವಿಶ್ವನಾಥ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್ ಹಾಗೂ ಕರ್ನಾಟಕ ರಾಜ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಅಧಿಕಾರಿ ಬಿ.ಎಸ್ ಮುರುಳಿಧರ್ ಈಶ್ವರಿ ವಿಶ್ವ ವಿದ್ಯಾಲಯದ ಶಿವರಶ್ನಿ ಅಕ್ಕನವರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪರಿಸರ ಸ್ವಾಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ