ಹೊನ್ನಾಳಿ:
ಮತವನ್ನು ದಾನ ಮಾಡಬೇಕೇ ಹೊರತು ಮಾರಿಕೊಳ್ಳಬಾರದು. ರಾಜಕೀಯ ಪುಢಾರಿಗಳು ನೀಡುವ ಪುಡಿಗಾಸಿಗೆ ನಾವು ಆಸೆಪಟ್ಟರೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನಿಸುವ ನೈತಿಕತೆಯನ್ನೇ ಕಳೆದುಕೊಳ್ಳುತ್ತೇವೆ. ಆದ್ದರಿಂದ, ಅರ್ಹ ವ್ಯಕ್ತಿಗೆ ಮತದಾನ ಮಾಡಬೇಕು. ತನ್ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ದೃಢ ಸಂಕಲ್ಪ ಮಾಡೋಣ.
-ಜಿ.ವಿ. ವೀರಭದ್ರ, ಡಿಪ್ಲೊಮಾ ವಿದ್ಯಾರ್ಥಿ, ಹೊನ್ನಾಳಿ.
ಜಗತ್ತಿನ ಪ್ರಮುಖ ಆಡಳಿತ ವಿಧಾನಗಳ ಪೈಕಿ ಪ್ರಜಾಪ್ರಭುತ್ವಕ್ಕೆ ಅಗ್ರ ಸ್ಥಾನ ಇದೆ. ಇಂಥ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನಿಸಿರುವುದಕ್ಕೆ ನಾವು ಹೆಮ್ಮೆಪಡಬೇಕು. ಹಾಗಾಗಿ, ನಾವೆಲ್ಲರೂ ಭಾರತದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಶಕ್ತಿಶಾಲಿಯಾಗಿಸಲು ಶ್ರಮಿಸೋಣ. ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಯಾಗಿಸೋಣ.
-ಎಚ್.ಎಂ. ಮನೋಜ್, ಬಿಸಿಎ ವಿದ್ಯಾರ್ಥಿ, ಹೊನ್ನಾಳಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
