ತಿಪಟೂರು :
ಕೊರೊನಾ ಮದ್ಯೆ ಹಳ್ಳ ಹಿಡಿದಿದ್ದ ಕೊಬ್ಬರಿ ದರವುಇಂದು ಹನ್ನೊಂದು ಸಾವಿರಗಡಿಯನ್ನು ದಾಟಿದ್ದು ಕೊಬ್ಬರಿ ಬೆಳೆಗಾರಿಗೆ ಸ್ವಲ್ಪ ಉಸಿರು ಬಂದಂತಾಗಿದೆ.
ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬ ಮಾತಿಗೆ ನಮ್ಮ ಕಲ್ಪತರು ನಾಡಿನ ಕೊಬ್ಬರಿ ಬೆಳೆಗಾರರಿಗೆ ಹೇಳಿಮಾಡಿಸಿದ ಮಾತಂತಾಗಿದ್ದು ಇದುವರೆಗೂ ಕೊಬ್ಬರಿ ದರವು ಪಾತಾಳಕ್ಕೆ ಕುಸಿದಿದ್ದು ಇಂದು 11 ಸಾವಿರದಗಡಿ ದಾಟಿದ್ದು ಸ್ವಲ್ಪ ಉಸಿರು ಬಂದಂತಾಗಿದೆ .ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಪಕ್ಕದ ಜಿಲ್ಲೆಯಾದ ಹಾಸನದ ಚನ್ನರಾಯಪಟ್ಟಣ, ಅರಸೀಕೆರೆ ಮುಂತಾದ ಜಿಲ್ಲೆಗಳಿಂದ ವಿಶ್ವದ ವಿಸ್ತಾರವಾದ ಕೊಬ್ಬರಿ ಮಾರುಕಟ್ಟೆ ಎಂಬ ಹೆಸರುಗಳಿಸಿರುವ ತಿಪಟೂರು ಕೊಬ್ಬರಿ ಮಾರುಕಟ್ಟೆಗೆ ರೈತರು ಕೊಬ್ಬರಿಯನ್ನು ತೆಗೆದುಕೊಂಡು ಬರುತ್ತಾರೆ ಆದರೆ ಇಲ್ಲಿ ಕೊಬ್ಬರಿ ದರ ಏರಿಳಿತದಿಂದ ರಾಜ್ಯ ಸರ್ಕಾರ ನಫೆಡ್ ಕೇಂದ್ರವನ್ನು ತೆರೆದು 10,300 ರೂಗಳಿಗೆ ಕೊಬ್ಬರಿಯನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಯಾವಾಗ 10300ರೂಗಿಂತ ಹೆಚ್ಚಿಗೆ ಕೊಬ್ಬರಿ ದರವು ದಾಟಿತೋ ಆವಾಗಿನಿಂದಲೇ ನಫೆಡ್‍ನಲ್ಲಿ ಕೊಬ್ಬರಿ ಖರೀದಿಯನ್ನು ನಿಲ್ಲಿಸಿದ್ದಾರೆ.10300ರೂಗಿಂತ ಕೊಬ್ಬರಿದರ ಕೆಳಗೆ ಬಂದರೆ ಮತ್ತೆ ಖರೀದಿಯನ್ನು ಆರಂಭಿಸುವುದಾಗಿ ನಫೆಡ್‍ನವರು ತಿಳಿಸುತ್ತಾರೆ.
ಇಂದಿನ ಕೊಬ್ಬರಿಧಾರಣೆಯು ಕನಿಷ್ಠ – 10050, ಗರಿಷ್ಠ – 11150, ಮಾದರಿ– 10800, ಒಟ್ಟು ಆವಕ – 2503.89 ಕ್ವಿಂಟಾಲ್ 5823 ಚೀಲ ಮಾರುಕಟ್ಟೆಗೆ ಬಂದಿದೆ. ರಾಜ್ಯ ಸರ್ಕಾರದ ಕೊಬ್ಬರಿ ಬೆಂಬಲ ಬೆಲೆಯಾದ 10,300ರೂಗಳಿದ್ದು ಅದಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಕೊಬ್ಬರಿ ಮಾರಾಟವಾಗುತ್ತಿರುವುದರಿಂದ ನಫೆಡ್‍ಗೆ ಕೇವಲ 150ರೂ ವ್ಯತ್ಯಾಸವಿರುವುದರಿಂದ ರೈತರು ಕೊಬ್ಬರಿಯನ್ನು ತರುತ್ತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ