ಕೊರೊನಾ ನಿಯಂತ್ರಣ ಸಾರ್ವಜನಿಕರ ಕೈನಲ್ಲಿದೆ : ಕೆ.ಆರ್.ನಂದಿನಿ

ತಿಪಟೂರು

      ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಸಾರ್ವಜನಿಕರು ಸರ್ಕಾರದ ಜೊತೆ ಕೈಜೋಡಿಸಿದಾಗ ಮಾತ್ರ ಸಾಧ್ಯವೆಂದು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು

      ಇಂದು ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದುವರೆಗೂ ತಾಲ್ಲೂಕಿನಲ್ಲಿ ವಾರಕ್ಕೆ ಒಂಡೆರಡು ಪ್ರಕರಣಗಳು ಕಾಣಸಿಗುತ್ತಿದ್ದವು ಆದರೆ ಕಳೆದ ವಾರದಿಂದ ಒಂದೇ ದಿನದಲ್ಲಿ 4 ರಿಂದ 9 ಪ್ರಕರಣಗಳು ಬೆಳಕಿಗೆ ಬರುತ್ತಿರುವು ಇಂದು 9 ಪ್ರಕರಣಗಳು ಸೇರಿ 64 ಸೋಕಿತರಿದ್ದಾರೆ. ಈ ಸೋಂಕಿತರಲ್ಲಿ 27 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು ಸಕ್ರಿಯ ಸೋಂಕಿತರು 36 ಜನರಿದ್ದಾರೆಂದು ತಿಳಿಸಿದರು.

     ಇನ್ನು ತಾಲ್ಲೂಕಿನಲ್ಲಿ ಜನರು ಕೊರೊನಾ ನಮಗೇನು ಮಾಡುವುದಿಲ್ಲ ನಾನು ಹೊರಗಡೆ ಹೋಗಿಲ್ಲ, ಮಳೆಯಲ್ಲಿ ನೆನೆದಿದ್ದಕ್ಕೆ ಜ್ವರ ಬಂದಿದೇ ಎಂದು ನೀವೆ ವೈದ್ಯರಾಗಿ ತಮ್ಮ ಜೀವವನ್ನು ತೊಂದರೆಗೆ ಸಿಲುಕಿಸಿಕೊಳ್ಳಬೇಡಿ ಎಂದ ಅವರು ಬೇವಿನ ಮರವು ಎಲ್ಲದಕ್ಕೂ ಔಷದವಾದರು ಅದಕ್ಕೂ ರೋಗಗಳು ಬರುತ್ತವೆ. ನಾವು ಹೊರಗಿನಿಂದ ಆರೋಗ್ಯವಂತರಾಗಿ ಕಂಡರೂ ಸಹ ಸೋಂಕು ಒಳಗೆ ಇದ್ದ ಉದಾಹರಣೆಗಳು ಕಂಡು ಬರುತ್ತಿವೆ.

     ಸೋಂಕು ನಮ್ಮ ದೇಹವನ್ನು ಸೇರಿದ ತಕ್ಷಣವೇ ನಮ್ಮ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತಾಸಾಗಿ ಜೀವನ್ನು ಆಪತ್ತಿಗೆಸಿಲುಕಿಸುತ್ತದೆ ಎಂದ ಅವರು ತಮ್ಮ ಮನೆಯ ಸುತ್ತಮುತ್ತ ಯಾರದಲ್ಲು ಬೇರೆ ಪ್ರದೇಶದಿಂದ ಬಂದರೆ ಅವರ ಬಗ್ಗೆ ನಮ್ಮ ಕಂಟ್ರೋಲ್ ರೂಂ 08134-251039ನೇ ಕರೆಮಾಡಿ ತಿಳಿಸಿದರೆ ಕರೆಮಾಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದೆಂದರು.

ಕೊರೊನಾ ನಿಯಂತ್ರಣ ನಿಮ್ಮಕೈನಲ್ಲೇ ಇದೆ :

     ಕೊರೊನಾ ಸೊಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಸ್ಥಳೀಯ ಪ್ರಾಥಮಿಕ ಆಸ್ಪತ್ರೆ ಅಥವಾ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗೆ ತೋರಿಸಿ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ ಯಾವುದೇ ಲಕ್ಷಣವನ್ನು ನಿರ್ಲಕ್ಷಿಸಬೇಡಿ. ಕೋವಿಡ್ ನಿಯಂತ್ರಿಸಲು ನಿಮ್ಮ ಪಾತ್ರವು ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬರು ಈ ರೋಗದ ಬಗ್ಗೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಸಾದ್ಯವಾದಷ್ಟು ಜನರಿಗೆ ತಿಳಿಸಿ ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಅನಾವಶ್ಯಕವಾಗಿ ಹೊರಗಡೆ ಸುತ್ತಬೇಡಿ ಎಂದ ಅವರು ಕೊರೊನಾ ನಿಯಂತ್ರಣ ಸಂಪೂರ್ಣವಾಗಿ ನಿಮ್ಮಕೈನಲ್ಲೇ ಇದ್ದು ಸರ್ಕಾರ ಪ್ರಕಟಿಸುವ ಕೊರೊನಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ನಿಯಂತ್ರಿಸಬೇಕೆಂದು ಸಾರ್ವಜನಿಕರಿಗೆ ಕರೆನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap