ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಕೆಲದಿಗಳ ಹಿಂದೆ ಬಸ್ ನಿಲ್ದಾಣದ ಒಂದೇ ಕುಟುಂಬದ 3 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿತ್ತು. ನಂತರ ಹನುಮಂತಪುರ ಗ್ರಾಮದ ಒಂದೇ ಕುಟುಂಬದ ಐದು ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿತ್ತು. ಸದರಿಯವರು ಮಧುಗಿರಿ ಪಟ್ಟಣದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ. 20 ರಂದು ಮಿಡಿಗೇಶಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಿದ ಕೋವಿಡ್-19 ಟೆಸ್ಟ್‍ನಲ್ಲಿ ಮಿಡಿಗೇಶಿ ಬಸ್ ನಿಲ್ದಾಣದ ಹೋಟೆಲ್ ವ್ಯಾಪಾರಿಯ ಮನೆಯ 8 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿರುವುದಾಗಿ ಆರೋಗ್ಯ ಇಲಾಖೆ ವತಿಯಿಂದ ಮಾಹಿತಿ ಬಂದಿದೆ. ಸೋಂಕಿತರ ಹೋಟೆಲ್ ಮತ್ತು ಮನೆಯನ್ನು ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ವತಿಯಿಂದ ಸೀಲ್‍ಡೌನ್ ಮಾಡಲಾಗಿದೆ. ಕೊರೊನಾ ಸೋಂಕಿಗೊಳಪಟ್ಟಿರುವ ಹೋಟೆಲ್‍ನವರು ನಾಲ್ಕಾರು ದಿನಗಳ ಹಿಂದೆಯಷ್ಟೆ ಹನುಮಂತಪುರ ಗ್ರಾಮದಲ್ಲಿನ ಸೋಂಕಿತರಿಂದ ನೂತನ ಮನೆÀಯ ಗೃಹ ಪ್ರವೇಶ ಕಾರ್ಯ ಮಾಡಿಸಿದ್ದರು. ಇವರ ಹೋಟೆಲ್‍ಗೆ ಗ್ರಾಹಕರು ಬಂದು ಹೋಗುತ್ತಿದ್ದರು. ಸದರಿ 8 ಮಂದಿ ಮಧುಗಿರಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








