ಅನ್ನದಾತರ ಕೈ ಕಟ್ಟಿಹಾಕುತ್ತಿರುವ ಕೊರೊನಾ

ತಿಪಟೂರು
      ಕೊರೊನಾ ವೈರಸ್ ತನ್ನ ವ್ಯಾಪ್ತಿಯನ್ನು ವಿಶ್ವವ್ಯಾಪಿಯಾಗಿ ಹರಡುವುದನ್ನು ತಪ್ಪಿಸಲು ಭಾರತ ಸರ್ಕಾರವು ಮಾರ್ಚ್ 24 ರಿಂದ ಏಪ್ರಿಲ್ 14ರ ವರೆಗೆ ಸಂಪೂರ್ಣ ಭಾರತ ಲಾಕ್‍ಡೌನ್ ಘೋಷಿಸಿತು. ಆದರೆ ಈ ಲಾಕ್‍ಡೌನ್ ನಮ್ಮ ಅನ್ನದಾತರ ಕೈಯನ್ನು ಕಟ್ಟಿಹಾಕಿದ್ದು ಮುಂದೆ ದಿನನಿತ್ಯದ ತರಕಾರಿಗೂ ಸಾರ್ವಜನಿಕರು ತಾತ್ವಾವರ ಪಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆಯೇನು ಎಂಬ ಸಂಶಯ ಕಾಡುತ್ತಿದೆ.
      ಲಾಕ್‍ಡೌನ್ ಘೋಷಿಸಿದ್ದಾಗಿನಿಂದ ನಗರದ ಪ್ರದೇಶಗಳು, ಹಳ್ಳಿಗಳಲ್ಲಿ ಎಲ್ಲಾ ವ್ಯಾವಹಾರಿಕ ಸಂಪರ್ಕಗಳು ಕಡಿತಗೊಂಡಿದ್ದು ರೈತರಿಗೆ ತಲೆನೋವು ತಂದಿದ್ದು ತಮ್ಮ ದುಡಿಮೆಯ ಜೊತೆಗೆ ಅಲ್ಪ ಆದಾಯವನ್ನು ನೋಡುತ್ತಿದ್ದ ಕೃಷಿಕರು ಇಂದು ತಮ್ಮ ತೋಟದಲ್ಲಿರುವ ಅಲ್ಪಸ್ವಲ್ಪ ತರಕಾರಿ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಿ ನಂತರದ ಬೆಳೆಗೆ ಮುಗಿಲತ್ತ ನೋಡುವ ಸನ್ನಿವೇಶವುಂಟಾಗಿದೆ.
     ಬೀಜ, ಗೊಬ್ಬರ ದೊರಕುತ್ತಿಲ್ಲ : ಅನ್ನದಾತನಿಗೆ ಏನೇ ಕಷ್ಟಬಂದರು ರಾಷ್ಟ್ರಕವಿ ಕುವೆಂಪು ಬರೆದಿರುವ ರೈತಗೀತೆಯಲ್ಲಿ ಬರುವ ಸಾಲಿನಂತೆ ರಾಜ್ಯಗಳು ಉಳಿಯಲಿ, ರಾಜ್ಯಗಳ ಅಳಿಯಲಿ ಉತ್ತುಳುವುದು ನಾನು ಬಿಡುವುದೇ ಇಲ್ಲವೆಂಬಂತೆ ರೈತನು ತನ್ನ ಕಾರ್ಯವನ್ನು ಮಾಡುತ್ತಲೇ ಇರುತ್ತಾನೆ. ಆದರೆ ಇಂತಹ ರೈತನಿಗೆ ಈಗ ಯಾವುದೇ ರೀತಿಯ, ಗೊಬ್ಬರ, ಬೀಜಗಳು ದೊರೆಯದೇ ತಾನು ಹಾಕಿರುವ ತರಕಾರಿ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ.
 
     ಈಗಿರುವ ತರಕಾರಿಯು ಇನ್ನೇನು 5 ರಿಂದ 10 ದಿನಗಳಿಗೆ ಸಾಕಾಗುತ್ತದೆ. ಈಗ ಬೀಜವನ್ನು ಹಾಕಿದರೆ ಮತ್ತೆ 15 ದಿನಗಳು ಕಳೆದ ಮೇಲೆ ಫಸಲು ದೊರೆಯುತ್ತದೆ. ಈಗ ಸಂಪೂರ್ಣ ಲಾಕ್‍ಡೌನ್ ಇರುವುದ ರಿಂದ ಯಾವುದೇ ರಸಗೊಬ್ಬರ ಮತ್ತು ಬೀಜದ ಅಂಗಡಿಗಳು ತೆಗೆಯದೇ ಇರುವುದುರಿಂದ ರೈತನು ಕೈಕಟ್ಟಿ ಕುಳಿತ್ತಿದ್ದು ಮುಂದೆ ತರಕಾರಿ ಸಿಗದೇ ಜನರು ಪರಿತಪಿಸುವಂತಾಗುತ್ತದೆ ಎಂದು ರೈತರು ತಿಳಿಸಿದ್ದಾರೆ.
ಮೋಟಾರ್ ರಿವೈಂಡಿಂಗ್ ಇಲ್ಲ :
     ಮೊದಲೇ ಬಿರು ಬೇಸಿಗೆಯು ಆರಂಭವಾಗಿದ್ದು ಕೆಲವುಕಡೆ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೊರೆಹೋಗುತ್ತಿದ್ದಾರೆ. ಇನ್ನು ಕೆಲವುಕಡೆ ಇರುವ ಅಲ್ಲಸ್ವಲ್ಪ ಅಂತರ್ಜಲದಲ್ಲಿ ಬೆಳಗ್ಗೆ ಸಂಜೆ ನೀರನ್ನು ಹೊರತೆಗೆದು ಸಣ್ಣ ಪ್ರಮಾಣದಲ್ಲಿ ತರಕಾರಿ, ಇನ್ನಿತರೆ ಮದ್ಯಂತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಇದರ ಮದ್ಯೆ ವಿದ್ಯುತ್ ಕಣ್ಣಾಮುಚ್ಚಾಲೆಯ ಜೊತೆಗೆ ಮದ್ಯೆಮದ್ಯೆ ನಿಲ್ಲುವ ನೀರಿನಿಂದ ಮೋಟಾರ್ ಮತ್ತು ಸ್ಟ್ರಾಟ್ರರ್ ಮೇಲೆ ಹೆಚ್ಚಿನ ಒತ್ತಡ ಬಿದ್ದು ಸುಟ್ಟುಹೋಗುತ್ತಿದೆ. ಆದರೆ ಈ ಸುಟ್ಟ ಮೋಟಾರ್‍ಗಳನ್ನು ರೀಪೇರಿಮಾಡುವವರು ಇಲ್ಲದೇ ಇದ್ದರೂ ಲಾಕ್‍ಡೌನ್ ಮತ್ತು ಆರಕ್ಷಕರ ಭಯದಿಂದ ಮನೆ ಸೇರಿದ್ದಾರೆ. ಇವರು ರಿಪೇರಿಮಾಡಿಕೊಡು ಎಂದರು ಹೊರಬರುತ್ತಿಲ್ಲವೆಂದು ಆರೋಪಿಸಿದ್ದಾರೆ.
ಕೊರೊನಾ ಕಾಮಧೇನುವನ್ನು ಬಿಡಲಿಲ್ಲ :
 
       ಕೊರೊನಾ ಬಿಸಿ ಕಲಿಯುಗದ ಕಾಮಧೇನುವನ್ನು ಬಿಟ್ಟಲ್ಲ, ಬರಗಾಲದಲ್ಲಿ ರೈತರ ಕೈಹಿಡಿದಿದ್ದ ಕಾಮದೇನುವಿಗೆ ಸರಿಯಾದ ಸಮಯಕ್ಕೆ ಖಾಸಗಿ ಡೈರಗಳಿಗೆ ಹಾಲು ಹಾಕುವ ರೈತರಿಗೆ ಇಂಡಿ, ಬೂಸ ಸಮಸ್ಯೆಯಾಗಿದ್ದು ಬೂಸಾ ಅಂಗಡಿಗಳನ್ನು ಹುಡುಕಿಕೊಂಡು ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಬೆಳಗ್ಗೆ ತಾಲ್ಲೂಕಿನ ಗೆದ್ಲೆಹಳ್ಳಿಯಿಂದ ಬಂದ ಯುವಕನೊಬ್ಬ ಬೂಸಾ ಅಂಗಡಿಯವರನ್ನು ಕಾಡಿಬೇಡಿ ಬಾಗಿಸಲು ತೆಗೆಸಿ 3 ಚೀಲದಷ್ಟು ಬೂಸವನ್ನು ತನ್ನ ದ್ವಿಚಕ್ರವಾಹನದಲ್ಲಿ ಸಾಗಿಲಸಲು ಪರಿಪಾಟಲು ಪಡುತ್ತಿದ್ದ.
ಸೂಕ್ತ ಬೆಲೆಯಿಲ್ಲ, ಫಸಲು ಗಿಡದಲ್ಲೇ :
       ಅನ್ನದಾತನ ಹಣೆ ಬರಹಕ್ಕೆ ಏನೆನ್ನಬೇಕೆಂಬುದೇ ತಿಳಿಯದಾಗಿದ್ದು ಯಾವಾಗಲು 30-40ರ ಆಜುಬಾಜಿನಲ್ಲೇ ಇದ್ದ ತಿಂಗಳ ಹುರಳಿಕಾಯಿ ಇಂದು 8 ರಿಂದ 15ರೂಗೆ, ಟೊಮೊಟೊ 6-10ರೂ ವರೆಗೆ ಸಗಟು ವ್ಯಾಪಾರಿಗಳಿಗೆ ದೊರೆಯುತ್ತಿದೆ. ಇದಕ್ಕಾಗಿ ಕೆಲವು ರೈತರು ನಾವು ಬೆಳೆದ ಬೆಳೆಯನ್ನು ಕಟಾವುಮಾಡಲು ಹೆಚ್ಚಿನ ದರವಾಗುತ್ತದೆ ಎಂದು ತಿಳಿದು ಗಿಡದಲ್ಲೇ ಬಿಡುತ್ತಿದ್ದಾರೆ.
      ಈಗಲಾದರು ಸರ್ಕಾರ ಎಚ್ಚೆತ್ತು ರೈತರಿಗೆ ಅನುಕೂಲವಾಗುವಂತಹ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮತ್ತು ಮೋಟಾರ್ ರಿವೈಂಡಿಗ್ ಅಂಗಡಿಗಳನ್ನು ತೆಗೆಸಿ, ರೈತರಿಗೆ ಅನುಕೂಲ ಮಾಡಿಕೊಡದಿದ್ದರೆ ರಾಜ್ಯದ ಜನತೆ ಆಹಾರಕ್ಕೆ ಪರದಾಡುವುದು ತಪ್ಪಿದ್ದಲ್ಲ, ಆದ್ರಿಂದ ಇಂತಹ ಅಂಗಡಿಗಳನ್ನು ತೆರೆಯಲು ಅನುವುಮಾಡಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap