ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ..!

ಚಿಕ್ಕನಾಯಕನಹಳ್ಳಿ

    ತಾಲ್ಲೂಕಿನ ಇಬ್ಬರು ಶಾಲಾ ಶಿಕ್ಷಕರು ಸೇರಿದಂತೆ 65 ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಡೆಕೆರೆ ಗ್ರಾ.ಪಂ.ನ ವಾಟರ್ ಮನ್‍ಗೂ ಪಾಸಿಟಿವ್ ದೃಢ ಪಟ್ಟಿದೆ. ಭಾನುವಾರ ರಾತ್ರಿ 20ಕ್ಕೂ ಹೆಚ್ಚು ಜನ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದಾರೆ, ತಾಲ್ಲೂಕಿನಲ್ಲಿ 118 ಜನರಿಗೆ ಇಲ್ಲಿಯವರೆಗೆ ಕೊರೊನಾ ಪಾಸಿಟಿವ್ ಬಂದಿದೆ.

    ಚಿಕಿತ್ಸಾ ಕೇಂದ್ರದಲ್ಲಿ ಶಿಕ್ಷಕರೊಬ್ಬರ ಒಂದೇ ಕುಟುಂಬದ 6 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಹಳ್ಳಿಕಾರರ ಬೀದಿ ಹಾಗೂ ವಿದ್ಯಾನಗರದ ಮೊದಲನೇ ಕ್ರಾಸ್‍ನಲ್ಲಿ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಕೊರೋನಾ ಪಾಸಿಟಿವ್ ದಾಖಲಾಗಿರುವ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ತಾಲ್ಲೂಕಿನಲ್ಲಿ ಈವರೆವಿಗೆ 118 ಮಂದಿ ಸೋಂಕಿತರು ಆಗಸ್ಟ್ 2 ರವರೆಗೆ ಪತ್ತೆಯಾಗಿದ್ದು, ಇವರಲ್ಲಿ 44 ಮಂದಿ ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ. ಆಗಸ್ಟ್ 2 ರಂದೇ 17 ಮಂದಿಗೆ ಕೊರೋನಾ ದಾಖಲಾಗಿದೆ. ತಾಲ್ಲೂಕಿನಲ್ಲಿ ಈವರೆವಿಗೆ 3 ಮಂದಿ ಸಾವನ್ನಪ್ಪಿದ್ದು, ಪ್ರಸಕ್ತ 65 ಮಂದಿಯ ಸಕ್ರಿಯ ಪ್ರಕರಣವಿದೆ.

   ಪಟ್ಟಣದ ಹಳ್ಳಿಕಾರರ ಬೀದಿಯಲ್ಲಿನ ಹಾಲಿನ ಡೈರಿ ಬಳಿ 35 ವರ್ಷದ ಮಹಿಳೆಗೆ ಹಾಗೂ ವಿದ್ಯಾನಗರದ 43 ವರ್ಷದ ವ್ಯಕ್ತಿಗೆ ಕೊರೋನಾ ದೃಢ ಪಟ್ಟಿದೆ. ತಾಲ್ಲೂಕಿನ ಸಾದರಹಳ್ಳಿಯಲ್ಲಿ ಮೂರು ಜನರಿಗೆ ಕೊರೋನಾ ಬಂದಿದ್ದು 51 ವರ್ಷ ಹಾಗೂ 23 ವರ್ಷದ ಪುರುಷರಿಗೆ, 46 ವರ್ಷದ ಮಹಿಳೆಗೆ ಇಲ್ಲಿ ಪ್ರಕರಣ ಕಂಡು ಬಂದಿದೆ, ಇವರನ್ನು ಮೇಲನಹಳ್ಳಿ ರಾಣಿ ಚೆನ್ನಮ್ಮ ವಸತಿ ಶಾಲೆಗೆ ದಾಖಲಿಸಲಾಗಿದೆ.

   ತರಬೇನಹಳ್ಳಿಯಲ್ಲಿ 45 ವರ್ಷದ ವಾಟರ್ ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಇದೇ ಗ್ರಾಮದ 23 ವರ್ಷದ ವ್ಯಕ್ತಿಯೋರ್ವರಿಗೆ ಹಾಗೂ ಆಲದಕಟ್ಟೆ ತಾಂಡ್ಯದ 43 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು ಇವರುಗಳನ್ನೂ ಕೂಡ ಮೇಲನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ದಾಖಲಿಸಲಾಗಿದೆ. ಶೆಟ್ಟಿಕೆರೆಯ 38 ವರ್ಷದ ವ್ಯಕ್ತಿಯೋರ್ವರಿಗೆ ಕೊರೋನಾ ದಾಖಲಾಗಿದ್ದು ಇವರು ಹಾಸನ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದರು. ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಕೊರೋನದ ಪರೀಕ್ಷೆ ಮಾಡಿಸಿದ್ದು ಪ್ರಕರಣ ಪಾಸಿಟಿವ್ ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link